ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಬುಧವಾರ ಚಿಕ್ಕಮಗಳೂರು ನಗರದಲ್ಲಿ ಆಯೋಜಿಸಲಾಗಿದ್ದ 207ನೇ ಭೀಮ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮ ಜರುಗಿತು.
ನಗರದ ಕೆಇಬಿ ವೃತ್ತದಿಂದ ಆರಂಭಗೊಂಡ ಮೆರವಣಿಗೆಯಲ್ಲಿ ನೀಲಿಯ ಶಾಲು, ನೀಲಿ ಬಾವುಟಗಳು ರಾರಾಜಿಸಿ ಮೆರವಣಿಗೆ ಸಂಪೂರ್ಣ ನೀಲಿಮಯವಾಗಿತ್ತು. ಪುಷ್ಪಾಲಂಕೃತ ವಾಹನಗಳಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಭಾವಚಿತ್ರಗಳು ಹಾಗೂ ಭೀಮ ಕೋರೆಗಾವ್ ಯುದ್ಧದ ನೇತೃತ್ವವಹಿಸಿದ್ದ ಜಯಸಿದ್ಧ ನಾಯಕರ ಭಾವಚಿತ್ರಗಳೊಂದಿಗೆ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಭೀಮ ಕೋರೆಗಾವ್ ಯುದ್ಧದ ನೆನಪಿನ ಸ್ಮಾರಕ ಸ್ತಂಭದ ಸ್ಥಬ್ದಚಿತ್ರ ಗಮನ ಸೆಳೆಯಿತು.
ಡ್ರಮ್ಸ್ ಹಾಗೂ ಡಿಜೆ ಮಾದಕ ಹಿಮ್ಮೇಳಕ್ಕೆ ಯುವಕ, ಯುವತಿಯರು ಕುಣಿದು ಕುಪ್ಪಳಿಸಿದರು. ಡಾಕ್ಟರ್ ಬಿ. ಆರ್ ಅಂಬೇಡ್ಕರ್ ಅವರಿಗೆ ಜಯವಾಗಲಿ ಎಂಬ ಘೋಷಣೆ ಮುಗಿಲು ಮುಟ್ಟಿತ್ತು. ಮೆರವಣಿಗೆ ಸಾಗುವ ರಸ್ತೆಯ ಇಕ್ಕಿಲಗಳಲ್ಲಿ ವಿವಿಧ ಸಂಘಟನೆಗಳವರು ಸಾರ್ವಜನಿಕರಿಗೆ ಪಾನಕ ವಿತರಿಸಿದರು.
ಮೆರವಣಿಗೆ ಹನುಮಂತಪ್ಪ ವೃತ್ತಕ್ಕೆ ಬರುತ್ತಿದ್ದಂತೆ ಸಾವಿರಾರು ಸಂಖ್ಯೆಯ ಜನರು ಭವ್ಯ ಮೆರವಣಿಗೆಯನ್ನು ವೀಕ್ಷಿಸಿದರು ಸಂಘಟಕರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಈ ಕಾರ್ಯಕ್ರಮದ ಮುಂಚೂಣಿಯಲ್ಲಿ ಬಿಎಸ್ಪಿ ಮುಖಂಡರಾದ ಕೆ ಟಿ ರಾಧಾಕೃಷ್ಣ, ಕೆಟಿ ರಾಧಾಕೃಷ್ಣ, ವಕೀಲ ಅನಿಲ್ ಕುಮಾರ್,ಭೀಮ್ ಆರ್ಮಿಯ ಗೌರವಾಧ್ಯಕ್ಷಹೊನ್ನೇಶ್,ಭೀಮಯ್ಯ ,ಹರೀಶ್, ಮತ್ತಿಕೆರೆ ಧರ್ಮರಾಜು, ರಘು ಹುಣಸೇಮಕಿ ಲಕ್ಷ್ಮಣ್ ಸೇರಿದಂತೆ ಹಲವರು ಮುಂಚೂಣಿಯಲ್ಲಿದ್ದರು.



