ದಿನಾಂಕ 07-01-2025 ರಂದು ಕರ್ನಾಟಕ ಗ್ರೋವರ್ಸ್ ಫೆಡರೇಷನ್(ರಿ.)ನ ನೂತನ ಕಾರ್ಯಕಾರಿ ಮಂಡಳಿಯ ಪದಾಧಿಕಾರಿಗಳಿಗೆ ಪದಗ್ರಹಣ ಕಾರ್ಯಕ್ರಮವನ್ನು ಹಾಸನ ಬೆಳೆಗಾರರ ಸಂಘದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ನೂತನ ಕಾರ್ಯಕಾರಿ ಮಂಡಳಿಯ ವಿವರ ಈ ಕೆಳಕಂಡಂತಿದೆ.
1. ಅಧ್ಯಕ್ಷರು- ಹೆಚ್.ಬಿ ಶಿವಣ್ಣ, ಹಳಸೆ, ಮೂಡಿಗೆರೆ ತಾಲ್ಲೂಕು
2. ಪ್ರಧಾನ ಕಾರ್ಯದರ್ಶಿ- ಟಿ.ಪಿ ಸುರೇಂದ್ರ, ಕೆಸಗಾನಹಳ್ಳಿ, ಸಕಲೇಶಪುರ ತಾಲ್ಲೂಕು
3. ಉಪಾಧ್ಯಕ್ಷರುಗಳು : ಅ) ಬಿ.ಎಂ ನಾಗರಾಜ್, ಬೆಕ್ಕನಹಳ್ಳಿ (ಹಾಸನ ಪ್ರಾತಿನಿಧ್ಯ) ಆ) ಸಿ.ಎಸ್ ಸುರೇಶ್,ಆಲ್ದೂರು (ಚಿಕ್ಕಮಗಳೂರು ಪ್ರಾತಿನಿಧ್ಯ) ಇ) ಕೆ.ಕೆ ವಿಶ್ವನಾಥ್, ಮಡಿಕೇರಿ (ಕೊಡಗು ಪ್ರಾತಿನಿಧ್ಯ)
4. ಖಜಾಂಚಿ- ಎಂ.ಕೆ ಸುಂದರೇಶ್, ಬಾಳೆಹೊನ್ನೂರು
5. ಸಂಘಟನಾ ಕಾರ್ಯದರ್ಶಿಗಳು ಅ) ಬಿ.ಜಿ ಯತೀಶ್, ಬಾಳಗೋಡು (ಹಾಸನ ಪ್ರಾತಿನಿಧ್ಯ) ಆ) ಅಶೋಕ್, ಆಲ್ದೂರು (ಚಿಕ್ಕಮಗಳೂರು ಪ್ರಾತಿನಿಧ್ಯ) ಇ) ಪುಟ್ಟಸ್ವಾಮಿ, ಶನಿವಾರಸಂತೆ (ಕೊಡಗು ಪ್ರಾತಿನಿಧ್ಯ)
ನೂತನ ಅಧ್ಯಕ್ಷರಾದ ಹೆಚ್.ಬಿ ಶಿವಣ್ಣರವರಿಗೆ ನಿಕಟಪೂರ್ವ ಅಧ್ಯಕ್ಷರಾದ ಡಾ||ಹೆಚ್.ಟಿ ಮೋಹನ್ ಕುಮಾರ್ ರವರು ಅಧಿಕಾರ ಹಸ್ತಾಂತರಿಸಿದರು. ಹಾಗೆಯೇ ನೂತನ ಪ್ರಧಾನ ಕಾರ್ಯದರ್ಶಿ ಟಿ.ಪಿ ಸುರೇಂಧ್ರ ರವರಿಗೆ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಕೆ.ಬಿ ಕೃಷ್ಣಪ್ಪರವರು ಅಧಿಕಾರ ಹಸ್ತಾಂತರಿಸಿದರು ಹಾಗೂ ನೂತನ ಉಪಾಧ್ಯಕ್ಷರು ಮತ್ತು ಸಂಘಟನಾ ಕಾರ್ಯದರ್ಶಿಗಳು ಕೂಡ ನಿಕಟಪೂರ್ವ ಉಪಾಧ್ಯಕ್ಷರು ಮತ್ತು ಸಂಘಟನಾ ಕಾರ್ಯದರ್ಶಿಗಳಿಂದ ಅಧಿಕಾರ ಪಡೆದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹೆಚ್.ಬಿ ಶಿವಣ್ಣರವರು ಮಾತನಾಡಿ ನನ್ನ ಸೇವಾವಧಿಯಲ್ಲಿ ಬೆಳೆಗಾರ ಸಮೂಹದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ತಿಳಿಸುತ್ತಾ ಎಲ್ಲಾ ಬೆಳೆಗಾರರ ಸಹಕಾರ ಬಯಸಿದರು.

ಈ ಸಂದರ್ಭದಲ್ಲಿ ವಿವಿಧ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳು ಕೆಜಿಎಫ್ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಅಭಿನಂದಿಸಿದರು.



