ದಿನಾಂಕ 07-01-2025 ರ ಮಂಗಳವಾರ ದಂದು ಮೂಡಿಗೆರೆ ಬಹುಜನ ಸಮಾಜ ಪಕ್ಷದ ವತಿಯಿಂದ ಮೂಡಿಗೆರೆಯಲ್ಲಿ ಭೀಮಾ ಕೊರಂಗಾವ್ ವಿಜಯೋತ್ಸವ ಆಚರಣಾ ಸಮಿತಿಯವರು ಕಾರ್ಯಕ್ರಮಕ್ಕಾಗಿ ದಿಢೀರನೆ ಅಂಬೇಡ್ಕರ್ ಪ್ರತಿಮೆಯನ್ನು ನಿರ್ಮಿಸಿ ಏಕಾಏಕಿ ತೆರವು ಮಾಡಿರುವುದನ್ನು ಖಂಡಿಸಿ ಅಲ್ಲದೆ ತಾಲ್ಲೂಕು ಆಡಳಿತ ತಕ್ಷಣವೇ ಜಾಗ ಗುರುತಿಸಿ ಪ್ರತಿಮೆ ನಿರ್ಮಾಣ ಮಾಡಬೇಕು ಎಂಬ ಒತ್ತಾಯದ ಮನವಿಯನ್ನು ತಹಸೀಲ್ದಾರ್ ರವರಿಗೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಾಕೀರ್ ಹುಸೇನ್, ಅಂಬೇಡ್ಕರ ರವರು ರಾಷ್ಟ್ರದ ಸರ್ವ ಶ್ರೇಷ್ಠ ನಾಯಕ ಆಗಾಗಿ ಇತ್ತೀಚಿಗೆ ನಡೆದ ಈ ಒಂದು ಘಟನೆ ಅತ್ಯಂತ ನೋವಿನ ವಿಷಯ ಹಾಗಾಗಿ ಪ್ರತಿಮೆ ಯಾರಿಗೂ ತಿಳಿಸದೆ ಇಟ್ಟಿದ್ದು ತಪ್ಪು ಅದಲ್ಲದೆ ಏಕಾಏಕಿ ತೆಗೆದಿರುವು ಯಾಕೆ ತೆಗಿಯುವ ಕ್ರಮದಲ್ಲಿ ಅಂಬೇಡ್ಕರ ರವರಿಗೆ ಮಾಡಿದ ಅತಿ ದೊಡ್ಡ ಅವಮಾನ ಇದನ್ನು ಬಿಎಸ್ಪಿ ಖಂಡಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಸಂಯೋಜಕ ಯು ಬಿ ಮಂಜಯ್ಯ.. ಅಂಬೇಡ್ಕರ ಪ್ರತಿಮೆ ಗೆ ಮಾಡಿರುವ ಅವಮಾನ ಇಡೀ ಸಮುದಾಯಕ್ಕೆ ಮಾಡಿದ ಅವಮಾನ ಆಗಿದೆ ಅಗಾಗಿ ಕಾರ್ಯಕ್ರಮ ಆಯೋಜಿಸಿ ಪ್ರತಿಮೆ ನಿರ್ಮಿಸಿ ದಿಢೀರನೆ ಯಾರದೋ ಒತ್ತಡಕ್ಕೆ ಮಣಿದು ತೆಗೆದಿರುವುದನ್ನು ಖಂಡಿಸುತ್ತೇನೆ ಅಷ್ಟೇ ಅಲ್ಲ ಅಂತವರ ವಿರುದ್ಧ , ಜೊತೆಗೆ ಸಮಿತಿಯವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ ಕೆ ಮಂಜುನಾಥ್ ಮಾತನಾಡಿ – ಈ ಒಂದು ಘಟನೆಗೂ ಬಿಎಸ್ಪಿ ಗು ಯಾವುದೇ ಸಂಬಂಧ ಇಲ್ಲ ಈ ಘಟನೆಯಲ್ಲಿ ಪಕ್ಷದ ಪಾತ್ರ ಇರುವುದಿಲ್ಲ ಯಾರು ಕೂಡ ಅಪಪ್ರಚಾರ ಮಾಡುವಂತಿಲ್ಲ ಎಂದು ಹೇಳುತ್ತ ಈ ಒಂದು ಘಟನೆಯಿಂದ ಇಡೀ ಸಮಾಜಕ್ಕೆ ನೋವುಂಟು ಮಾಡಿದೆ, ಅಂಬೇಡ್ಕರ ಪ್ರತಿಮೆ ಕಳೆದ 20ವರ್ಷದಿಂದಲೂ ಪಕ್ಷದ ಬೇಡಿಕೆಯಾಗಿದ್ದು ಕೂಡಲೇ ಇನ್ನ ಒಂದು ವಾರದ ಒಳಗೆ ಜಾಗ ಗುರುತಿಸಿ ಕೆಲಸ ಪ್ರಾರಂಭಿಸಬೇಕು ಇಲ್ಲವಾದಲ್ಲಿ ಪಕ್ಷವು ದೊಡ್ಡ ಮಟ್ಟದಲ್ಲಿ ಹೋರಾಟ ರೂಪಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಕ್ಷೇತ್ರ ಸಮಿತಿ ಅಧ್ಯಕ್ಷ ಲೋಕವಲ್ಲಿ ರಮೇಶ್, ಜಿಲ್ಲಾ ಕಾರ್ಯದರ್ಶಿ ಭಕ್ಕಿ ಮಂಜುನಾಥ್, ಜಿಲ್ಲಾ ಉಪಾಧ್ಯಕ್ಷ ಹಾಂದಿ ಬಾಬಣ್ಣ, ಶ್ರೀಕಾಂತ್ ಹೊನ್ನೇಶ್, ಬಕ್ಕಿ ರವಿ ಸುರೇಶ್, ಕುಮಾರ್, ನಾಗೇಶ್, ಅಭಿಜಿತ್, ಸಂದೀಪ್, ರತೀಶ್, ಸತೀಶ್, ಮಂಜು, ಸುಮಿತ್ರ, ಗಿರೀಶ್ ಮುಂತಾದವರು ಹಾಜರಿದ್ದರು.



