November 8, 2025

 

 

ಮೂಡಿಗೆರೆ ತಾಲ್ಲೂಕಿನ ಬಣಕಲ್  ದಿ ಪ್ಲಾಂಟರ್ಸ್ ಸ್ಪೋರ್ಟ್ಸ್ ಕ್ಲಬ್ ( ರಿ )  ಮತ್ತು ಬಣಕಲ್ ಪೋಲಿಸ್ ಠಾಣೆ, ಬಣಕಲ್, ಇವರ ಸಹಯೋಗದಲ್ಲಿ,

‘ಕಳ್ಳತನದ ಮಾಲು ಕೊಳ್ಳಬೇಡಿ’ ಎಂಬ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ದಿನಾಂಕ 13-01-2025 ರಂದು ಸೋಮವಾರ ಬೆಳಗ್ಗೆ 11 ಗಂಟೆಗೆ ಬಣಕಲ್ ಪಟ್ಟಣದಲ್ಲಿ ಜಾಗೃತಿ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.

ದಿ ಪ್ಲಾಂಟರ್ಸ್ ಸ್ಪೋರ್ಟ್ಸ್ ಕ್ಲಬ್ ಬಣಕಲ್ ಆವರಣದಿಂದ ಪ್ರಾರಂಭಿಸಿ ಮತ್ತಿಕಟ್ಟೆ ರಸ್ತೆ ಮತ್ತು ಕೆ.ಎಂ. ರಸ್ತೆ ಮೂಲಕ ಹಾದು ಪೆಟ್ರೋಲ್ ಬಂಕ್ ಬಳಿ ಕೊನೆಗೊಳ್ಳಲಿದೆ.

ಮಲೆನಾಡು ಭಾಗದಲ್ಲಿ ಈಗ ಕಾಫಿ, ಅಡಿಕೆ ಮತ್ತು ಕಾಳುಮೆಣಸು ಫಸಲು ಕೊಯ್ಯುವ ಸಮಯವಾಗಿದೆ. ಇತ್ತೀಚೆಗೆ ಹೊರ ಪ್ರದೇಶಗಳಿಂದ ಬಂದಿರುವ ಜನರು ಕಳ್ಳತನ ಪ್ರಕರಣದಲ್ಲಿ ತೊಡಗಿಸಿಕೊಂಡಿರುವ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ.

ಇಂತಹ ವ್ಯಕ್ತಿಗಳಿಂದ ಫಸಲುಗಳನ್ನು ಕೊಳ್ಳಬಾರದು ಎಂದು ಸ್ಥಳೀಯ ವ್ಯಾಪಾರಿಗಳಲ್ಲಿ ಜಾಗೃತಿ ಮೂಡಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.

ಈ ಜಾಗೃತಿ ಅಭಿಯಾನ ಮೆರವಣಿಗೆಯಲ್ಲಿ ಬಣಕಲ್, ಬಾಳೂರು ಹೋಬಳಿ ಹಾಗೂ ಸುತ್ತಮುತ್ತಲ  ಪ್ರದೇಶಗಳ ಬೆಳೆಗಾರರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕಾರ್ಯಕ್ರಮದ ಸಂಘಟಕರಲ್ಲಿ ಒಬ್ಬರಾಗಿರುವ ಪ್ರವೀಣ್ ಬಣಕಲ್ ತಿಳಿಸಿದ್ದಾರೆ.

ಸೋಮವಾರ ಬೆಳಿಗ್ಗೆ 10-30ರ ಒಳಗೆ ಎಲ್ಲರೂ ದಿ ಪ್ಲಾಂಟರ್ಸ್ ಸ್ಪೋರ್ಟ್ಸ್ ಕ್ಲಬ್, ಬಣಕಲ್ ಇಲ್ಲಿಗೆ ಆಗಮಿಸಬೇಕೆಂದು ಕೋರಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ