ಪಕ್ಷ ಸಿದ್ದಾಂತವೆ ಪ್ರಮುಖವಾಗಿದ್ದು. ಪಕ್ಷದಿಂದ ಹೋರಗೆ ಯಾವ ವ್ಯಕ್ತಿಯು ಪ್ರಮುಖವಲ್ಲ. ಇದನ್ನು ಅರಿತು ಪಕ್ಷ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿ ಎಂದು ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಅದ್ಯಕ್ಷ ದೇವರಾಜ್ ಶೆಟ್ಟಿ ತಿಳಿಸಿದರು.
ಅವರು ಮೂಡಿಗೆರೆ ಬಿಜೆಪಿ ಕಛೇರಿಯಲ್ಲಿ ಪಕ್ಷದ ಅಧಿಕೃತ ಘೋಷಣೆಯ ಸಂಘಟನಾ ಪರ್ವ ವಿಶೇಷ ಸಭೆಯನ್ನು ಉದ್ದೇಶಿಸಿ ಮಾತನಾಡಿ. ನಮ್ಮ ಅಂತರಿಕ ಬಿನ್ನಾಭಿಪ್ರಾಯವನ್ನು ತೊರೆದು ಎಲ್ಲರು ಕಾರ್ಯ ನಿರ್ವಹಿಸಬೇಕು. ಇದು ನಮ್ಮ ಗೆಲುವಿಗೆ ಕಾರಣವಾಗಿದ್ದು. ಪಕ್ಷದಲ್ಲಿ ಅಂತರಿಕ ಚುನಾವಣೆ ಸಂಘಟನೆಯನ್ನು ಬಲಗೋಳಿಸಲು ಅತ್ಯಮೂಲವಾಗಿದ್ದು. ಸಂಘಟನಾತ್ಮಕ ಜಿಲ್ಲೆಯಾಗಿ ಇಂದು ಲೋಕಸಭೆ ಚುನಾವಣೆ ಸೇರಿದಂತೆ ಎಂಎಲ್ ಸಿ ಸಹಕಾರ ಸಂಘ ಚುನಾವಣೆಯಲ್ಲಿ ಈಗಾಗಲೆ ಉತ್ತಮ ಯಶಸ್ಸು ಸಾಧಿಸಿದ್ದು. ಪಕ್ಷವೆ ಪ್ರಮುಖವಾಗಿದ್ದು. ಸಿದ್ಧಾಂತವೇ ನಮ್ಮ ನಿಲುವು. ಪಕ್ಷ ಮೋದಲು ಎಂಬುದಾಗಿದ್ದು. ಪಕ್ಷ ಬಿಟ್ಟರೆ ಇಲ್ಲಿ ವ್ಯಕ್ತಿ ನಗಣ್ಯ. ಹಾಗಾಗಿ ಬೂತ್ ಸಮಿತಿ ಸೇರಿದಂತೆ ಜಿಲ್ಲಾ ಪಧಾದಿಕಾರಿಗಳು ಪಕ್ಷದ ಬೆಳವಣಿಗೆಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.
ಪ್ರಾಸ್ತಾವಿಕ ಮಾತನಾಡಿದ ನರೇಂದ್ರ ಅವರು ಪಕ್ಷದ ಅಂತರಿಕ ಸಭೆಯ ಒಂದು ಭಾಗವಾಗಿ ಎಲ್ಲರು ಒಂದು ಪ್ರಕ್ರಿಯೆ ಅಡಿಯಲ್ಲಿ ಬಂದು ಸಂವಿಧಾನ ಬದ್ದವಾಗಿ ಪ್ರಾಥಮಿಕ ಸದಸ್ಯತ್ವ ಪಡೆದು ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಪಕ್ಷ ಕಟ್ಟಿ ಈ ಮೂಲಕ ದೇಶ ಸೇವೆ ಮಾಡುವುದೆ ಬಿಜೆಪಿ ಗುರಿಯಾಗಿದೆ ಎಂದರು.
ದೀಪಕ್ ದೊಡ್ಡಯ್ಯ ಮಾತನಾಡಿ. ಪಕ್ಷದ ಅಭ್ಯರ್ಥಿ ಸೋಲು ಇಡೀ ಕಾರ್ಯಕರ್ತರ ವಯಕ್ತಿಕ ಸೋಲಾಗಿದ್ದು. ಯಾವ ಚುನಾವಣೆಯಲ್ಲಿಯು ಬಿನ್ನಮತ ಮಾಡದೆ ಪಕ್ಷ ಗೆಲ್ಲಿಸಲು ಸಂಘಟನೆ ಮಾಡೋಣ ಎಂದರು.
ಮಂಡಲ ಅದ್ಯಕ್ಷ ಗಜೇಂದ್ರ ಸಕ್ರೀಯ ಸದಸ್ಯತ್ವವನ್ನು ನಮ್ಮ ವಿಧಾನಸಭಾ ಕ್ಷೇತ್ರದ ಪಧಾದಿಕಾರಿಗಳು ಮತ್ತು ಕಾರ್ಯಕರ್ತರು ಅತ್ಯತ್ಯಮವಾಗಿ ನಡೆಸಿಕೊಂಡು ಬಂದಿದ್ದು ಮುಂದಿನ ಮೂರು ವರ್ಷ ಅವಿರತವಾಗಿ ಪಕ್ಷ ಸಂಘಟನೆಯಲ್ಲಿ ಶ್ರಮಿಸೋಣ ಎಂದು ತಿಳಿಸಿದರು. ಚುನಾವಣಾ ಅಧಿಕಾರಿ ಚೇತನ್. ಎಂ.ಅರ್ ಜಗದೀಶ್. ಜೆ.ಎಸ್ ರಘು. ಪಂಚಾಕ್ಷರಿ. ಕೆ.ಸಿ. ರತನ್. ಗೌರಮ್ಮ. ಪ್ರಶಾಂತ್. ಧನಿಕ್. ಲೋಕೇಶ್. ಮತ್ತಿತರರಿದ್ದರು.

ಪಕ್ಷದ ಸಂಘಟನಾ ಪರ್ವ ಸಭೆಯಲ್ಲಿ ಭಾರತ ಮಾತೆಗೆ ಪುಷ್ಪಾರ್ಚನೆ ನೆರವೇರಿಸಲಾಯಿತು. ಇದೇ ಸಂದರ್ಭದಲ್ಲಿ ಪಕ್ಷದ ಮಂಡಲ ಅಧ್ಯಕ್ಷರಿಗೆ ಅಧಿಕೃತ ಘೋಷಣಾ ಪತ್ರ ನೀಡಲಾಯಿತು.



