November 8, 2025

 

 

ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಅತ್ಯುತ್ತಮ ನರಶಸ್ತ್ರ ಚಿಕಿತ್ಸೆ, ಬೆನ್ನುಮೂಳೆಯ ಶಸ್ತ್ರಚಿಕಿತ್ಸೆ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿರುವ ಚಿಕ್ಕಮಗಳೂರು ನ್ಯೂರೋ ಸರ್ಜಿಕಲ್ ಸೆಂಟರ್‌ನ್ನು ನಾಳೆ ಜನವರಿ 17 ರಂದು ಶುಕ್ರವಾರ ನಗರದ ಕೆ ಆರ್ ಎಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಶುಭಾರಂಭವಾಗಲಿದೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕೆ.ಆರ್.ಎಸ್ ಆಸ್ಪತ್ರೆ ಮುಖ್ಯಸ್ಥ ಡಾ.ಯೋಗೀಶ್ ಅವರು ಇದರ ಉದ್ಘಾಟನೆಯನ್ನು ಹಿರಿಯ ನರರೋಗ ತಜ್ಞ ಮತ್ತು ಬೆನ್ನುಮೂಳೆ ತಜ್ಞ ವೈದ್ಯ ಡಾ.ನಾರಾಯಣ ಪಣಜಿ ನೆರವೇರಿಸಲಿದ್ದಾರೆ ಎಂದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವಥ್‌ಬಾಬು ನರರೋಗ ತಜ್ಞ ಡಾ.ಅವಿನಾಶ್.ಎಸ್.ಕೆ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಚಿಕ್ಕಮಗಳೂರು ನಗರದ ಕೆಆರ್‌ಎಸ್ ಮಲ್ಟಿ ಸ್ಪೆಷಲಿಟಿ ಆಸ್ಪತ್ರೆಯು ಹೈಟೆಕ್ ನ್ಯೂರೋ ಐಸಿಯು ಮತ್ತು ಸಂಪೂರ್ಣ ಸುಸಜ್ಜಿತ ಅತ್ಯಾಧುನಿಕ ಆಪರೇಟಿಂಗ್ ಥಿಯೇಟರ್ ಅನ್ನು ಒಳಗೊಂಡಿದ್ದು, ವೈದ್ಯಕೀಯ ಶ್ರೇಷ್ಠತೆ ಮತ್ತು ಸಹಾನುಭೂತಿಯ ಆರೈಕೆಯನ್ನು ನೀಡಲು ಹೆಸರುವಾಸಿಯಾಗಿದೆ ಎಂದು ಮಾಹಿತಿ ನೀಡಿದರು.

ನೂತನವಾಗಿ ಪ್ರಾರಂಭವಾಗುತ್ತಿರುವ ಚಿಕ್ಕಮಗಳೂರು ನ್ಯೂರೋ ಸರ್ಜಿಕಲ್ ಸೆಂಟರ್ ಬೆನ್ನುಮೂಳೆಯ ಶಸ್ತ್ರ ಚಿಕಿತ್ಸೆಗಳು, ಮೆದುಳಿನ ಗೆಡ್ಡೆಯ ಶಸ್ತ್ರ ಚಿಕಿತ್ಸೆಗಳು ಮತ್ತು ಸಂಕೀರ್ಣವಾದ ಮೆದುಳು ಮತ್ತು ಬೆನ್ನುಮೂಳೆಯ ಅಪಘಾತದ ಆರೈಕೆ, ಅಪಸ್ಮಾರ ಮತ್ತು ನರಶಸ್ತ್ರ ಚಿಕಿತ್ಸೆ, ಸ್ಟ್ರೋಕ್ ಚಿಕಿತ್ಸಾ ಘಟಕ, ಮೆದುಳಿನ ರಕ್ತನಾಳ ಶಸ್ತ್ರಚಿಕಿತ್ಸೆ ಮತ್ತು ಎಂಡೋವಾಸ್ಕುಲರ್ ನರಶಸ್ತ್ರ ಚಿಕಿತ್ಸೆ ಸೇರಿದಂತೆ ಹಲವಾರು ಸೇವೆಗಳನ್ನು ಒದಗಿಸಲಿದೆ ಎಂದು ತಿಳಿಸಿದರು.

ಡಾ.ಅಭಿಲಾಶ್ ಎಸ್.ಕೆ ಅವರು ಬೆಂಗಳೂರಿನ ಚಿನ್ಮಯ್ ಮಿಷನ್ ಆಸ್ಪತ್ರೆಯಲ್ಲಿ ಹಲವು ವರ್ಷಗಳ ಅನುಭವವನ್ನು ಹೊಂದಿದ್ದು, ಬೆನ್ನುಮೂಳೆಯ ಶಸ್ತ್ರಚಿಕಿತ್ಸೆ ಮತ್ತು ನರಶಸ್ತ್ರ ಚಿಕಿತ್ಸೆಯಲ್ಲಿ ಪರಿಣತಿ ಹೊಂದಿದ್ದಾರೆ, ಜೊತೆಗೆ ಪ್ರತಿಷ್ಠಿತ ಪದವೀಧರರಾಗಿದ್ದು, ಅವರು ತಮ್ಮ ಎಂಬಿಬಿಎಸ್, ಎಂಎಸ್ (ಜನರಲ್ ಸರ್ಜರಿ) ಮತ್ತು ಎಮ್‌ಸಿಹೆಚ್ ಅನ್ನು ನ್ಯೂರೋ ಸರ್ಜರಿಯಲ್ಲಿ ಪೂರ್ಣಗೊಳಿಸಿದ್ದಾರೆ ಎಂದರು.

ಕೆಆರ್‌ಎಸ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 24×7 ತುರ್ತು ಚಿಕಿತ್ಸೆ ಮತ್ತು ನರ ಮತ್ತು ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗಾಗಿ ಈಗ ಡಾ.ಅವಿನಾಶ್ ಎಸ್.ಕೆ ಲಭ್ಯವಿರುತ್ತಾರೆ ಎಂದು ಹೇಳಿದ ಅವರು ಜಿಲ್ಲೆ ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ