ಚಿಕ್ಕಮಗಳೂರು ತಾಲ್ಲೂಕು ಕೆಳಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಹೆಚ್.ಬಿ. ಸತೀಶ್ ಕಬ್ಬಿಣಸೇತುವೆ ಪುನರಾಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಶ್ರೀಮತಿ ಪ್ರೇಮ ಯತಿರಾಜ್ ಮಾಣಿಮಕ್ಕಿ ಇವರು ಆಯ್ಕೆಯಾಗಿದ್ದಾರೆ.

ಸಂಘದ ಎಲ್ಲಾ 12 ನಿರ್ದೇಶಕರ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ನಡೆಸಲಾಗಿತ್ತು. ಎಲ್ಲಾ ನಿರ್ದೇಶಕರ ಒಮ್ಮತದಿಂದ ಸತೀಶ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಹಾಗೂ ಶ್ರೀಮತಿ ಪ್ರೇಮಾ ಅವರನ್ನು ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಸತೀಶ್ ಅವರು ಸತತ ಏಳನೇ ಬಾರಿ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಸಂಘದ ಅಧ್ಯಕ್ಷರಾಗಿ ಕಳೆದ 25 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಸಂಘದ ಉತ್ತಮ ಅಭಿವೃದ್ಧಿ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸತೀಶ್ ಅವರು ಪ್ರಸ್ತುತ ಚಿಕ್ಕಮಗಳೂರು ಡಿ.ಸಿ.ಸಿ. ಬ್ಯಾಂಕ್ ಆಡಳಿತ ಮಂಡಳಿ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಇದೀಗ ಸತತ 6ನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ತಮ್ಮನ್ನು ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಮಾಡಿದ ಎಲ್ಲಾ ನಿರ್ದೇಶಕರುಗಳಿಗೆ, ಸದಸ್ಯರಿಗೆ, ಹಿತೈಷಿಗಳಿಗೆ ತಮ್ಮ ಕೃತಜ್ಞತೆ ಸಲ್ಲಿಸಿದ್ದಾರೆ.
ಸಂಘದ ನಿರ್ದೇಶಕರ ವಿವರ
ಹೆಚ್.ಬಿ. ಸತೀಶ್ (ಸಾಮಾನ್ಯ)- ಅಧ್ಯಕ್ಷರು
ಪ್ರೇಮ ಯತಿರಾಜ್ (ಸಾಮಾನ್ಯ) – ಉಪಾಧ್ಯಕ್ಷರು
ನಿರ್ದೇಶಕರು
ತಿಮ್ಮೇಗೌಡ ಎಂ ಜೆ
ಮಂಜೆಗೌಡ್ರು ಕೆ.ಸಿ
ಉದಯ್ ಕುಮಾರ್ ಕೆ.ಪಿ
ಪ್ರದೀಪ್ ಡಿ.ಎಮ್
ಪೂರ್ಣೇಶ್ ಡಿ.ಅರ್
ಪ್ರವೀಣ್ ಎಸ್.ಎಮ್
ವೀಣಾ ಹೆಚ್.ಎಮ್
ಧರ್ಮೇಶ್ ಎಸ್.ಅರ್
ಕೃಷ್ಣಪ್ಪ ಎಂ.ಕೆ
ಸಗನಯ್ಯ



