ಡಾ.ಬಿ.ಆರ್.ಅಂಬೇಡ್ಕರ್ ಅವರ ಮೂಲ ಸಂವಿಧಾನವನ್ನು ಬದಲಿಸಿ ಹೊಸತಾಗಿ ಧರ್ಮಸಂಸತ್ತು ಮತ್ತು ಮನುವಾದಿ ಸಂವಿಧಾನ ಜಾರಿಗೆ ತರವ ಬಗ್ಗೆ ಕುಂಭಮೇಳದಲ್ಲಿ ಕೆಲ ಸಾಧು ಸಂತರು ನಿರ್ಧರಿಸಿದ್ದಾರೆಂಬ ವಿಚಾರ ಬಹಿರಂಗವಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನವನ್ನು ಬದಲಿಸಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಬಿಎಸ್ಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಲೋಕವಳ್ಳಿ ರಮೇಶ್ ಹೇಳಿದರು.
ಭಾರತ ಪ್ರಜಾಪ್ರಭುತ್ವ ರಾಷ್ಟ್ರ ಎಂಬುದು ಕೇಂದ್ರ ಸರ್ಕಾರ ಮತ್ತು ಸಾಧು ಸಂತರು ತಿಳಿದುಕೊಳ್ಳಬೇಕು 25 ಮಂದಿ ಸಾಧು ಸಂತರು ರಚಿಸಿರುವ 51 ಪುಟದ ಮನುವಾದಿ ಸಂವಿಧಾನವನ್ನು ಶಂಕರಾಚಾರ್ಯರು ಸ್ಥಾಪಿಸಿರುವ 3 ಮಠಗಳ ಒಪ್ಪಿಗೆ ಪಡೆದ ನಂತರ ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸುವುದಾಗಿ ಕುಂಭಮೇಳದಲ್ಲಿ ಮಾಹಿತಿ ನೀಡಲಾಗಿದೆ. ಈಗ ಹೊಸತಾಗಿ ರಚಿಸಿರುವ ಮನುವಾದಿ ಸಂವಿಧಾನದ ಪ್ರಕಾರ ಧರ್ಮಸಂಸತ್ತಿಗೆ ಗುರುಕುಲದ ಪದ್ದತಿಯಂತೆ ವೇದ ಉಪನಿಷತ್ತುಗಳನ್ನು ಅಧ್ಯಯನ ಮಾಡಿದವರಿಗೆ ಮಾತ್ರ ಚುನಾವಣೆಗೆ ಸ್ಪರ್ಧಿಸಲು ಹಕ್ಕು ನೀಡಲಿರುವುದಾಗಿಯೂ, ಸನಾತನಿಗಳು, ಜೈನ, ಸಿಖ್, ಬೌದ್ದ ಅನುಯಾಯಿಗಳಿಗೆ ಮಾತ್ರ ಚುನಾವಣೆಯಲ್ಲಿ ಮತದಾನದ ಹಕ್ಕು ನೀಡುವುದಾಗಿಯೂ ತಿಳಿಸಲಾಗಿದೆ. ಪರಿಶಿಷ್ಟರು, ಮುಸ್ಲಿಮರು, ಕ್ರೈಸ್ತರು ಮತ್ತು ಹಿಂದುಳಿದ ವರ್ಗದವರನ್ನು ಕೈಬಿಡಲಾಗಿದೆ. ಸರ್ಕಾರದ ಆರ್ಥಿಕ ನೆರವಿನಿಂದ ನಡೆಯುವ ಎಲ್ಲಾ ಮದರಸಗಳನ್ನು ಬಂದ್ ಮಾಡಿಸುವುದಾಗಿಯೂ ತಿಳಿಸಲಾಗಿದೆ. ಸಮಾನತೆಯನ್ನು ಸಾರುವ ಅಂಬೇಡ್ಕರ್ ಅವರ ಪವಿತ್ರವಾದ ಸಂವಿಧಾನ ಬದಲು ಇಂತಹ ಅವೈಜ್ಞಾನಿಕವಾದ ಸಂವಿಧಾನವನ್ನು ಸ್ವೀಕರಿಸಲು ಈ ದೇಶದ ಜನ ಸಿದ್ದರಿಲ್ಲ ಎಂದು ಬುಧವಾರ ಹೇಳಿಕೆಯಲ್ಲಿ ಎಚ್ಚರಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನಕ್ಕೆ ಜಾಗತಿಕ ಮಟ್ಟದ ಮನ್ನಣೆಯಿದೆ. ಧರ್ಮಗಳ ಮಧ್ಯೆ ವಿಷಬೀಜ ಬಿತ್ತಿ ಒಡೆದಾಳುವ ನೀತಿ ಅನುಸರಿಸುತ್ತಿರುವ ಮನಸ್ಥಿತಿಯವರಿಂದಾಗಿ ದೇಶದ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ತೆ ನೆಲಕಚ್ಚುತ್ತಿದೆ. ಈಗ ಭಾರತದಲ್ಲಿ ಬಲಿಷ್ಟವಾದ ಸಂವಿಧಾನವಿದೆ. ಈಗಿನ ಸಂವಿಧಾನದಿಂದ ದೇಶಕ್ಕೆ ಯಾವುದೇ ಅಪಾಯ ಉಂಟಾಗಿಲ್ಲ. ಹೀಗಿರುವಾಗ ಹೊಸ ಸಂವಿಧಾನ ರಚಿಸುವ ಅಗತ್ಯವೇನು? ಇದನ್ನು ರಚಿಸಲು ಸಾಧುಸಂತರಿಗೆ ಅವಕಾಶ ನೀಡಿದ್ದು ಯಾರು? ಧರ್ಮಸಂಸತ್ತು ಮತ್ತು ಮನುಸ್ಮøತಿ ಸಂವಿಧಾನ ರಚಿಸಿರುವ ಸಾಧು ಸಂತರ ವಿರುದ್ದ ಕೇಂದ್ರ ಸರ್ಕಾರ ಕಠಿಣ ಕ್ರಮ ಕೊಗೊಳ್ಳಬೇಕು. ಡಾ. ಅಂಬೇಡ್ಕರ್ ಅವರ ಸಂವಿಧಾನಕ್ಕೆ ಅಪಚಾರವೆಸಗುವವರ ವಿರುದ್ದ ರಾಷ್ಟ್ರದ್ರೋಹ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಒತ್ತಾಯಿಸಿದರು.



