10 ಎಚ್‍ಪಿ ಒಳಗಿನ ಮೋಟಾರು ಹೊಂದಿರುವ ರೈತರ ವಿದ್ಯುತ್ ಸಂಪರ್ಕವನ್ನು ಬಿಲ್ ಪಾವತಿಲ್ಲವೆಂಬ ಕಾರಣಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಳಿಸಬಾರದೆಂದು ಕೆಜಿಎಫ್ ಅಧ್ಯಕ್ಷ ಹಳಸೆ ಶಿವಣ್ಣ ಒತ್ತಾಯಿಸಿದರು.
ಅವರು ಶುಕ್ರವಾರ ಮೆಸ್ಕಾಂ ಕಚೇರಿ ಎದುರು ರೈತ ಮುಖಂಡರು ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು. ಮುಂದಿನ ವರ್ಷದ ಬೆಳೆಗಾಗಿ ಗಿಡಗಳಿಗೆ ಅಗತ್ಯವಾಗಿ ನೀರಾಯಿಸಬೇಕಾದ ಅನಿವಾರ್ಯತೆ ಇದೆ. ಅಲ್ಲದೇ ಕಾಫಿಗೆ ಉತ್ತಮ ಬೆಲೆ ಬಂದಿದೆ. ಈ ಕಾರಣಕ್ಕೆ ವರ್ಷದಲ್ಲಿ 10 ರಿಂದ 15 ದಿನಗಳು ಮಾತ್ರ ಬಳಸುವ ಕೃಷಿ ಉದ್ದೇಶಗಳಿಗೆ 12 ತಿಂಗಳ ಶುಲ್ಕ ಮತ್ತು ಬಡ್ಡಿ ವಿಧಿಸುತ್ತಿರುವ ಕ್ರಮ ಸರಿಯಲ್ಲ ಎಂದು ಹೇಳಿದರು.
ರೈತ ಮುಖಂಡ ಅಮರ್‍ನಾಥ್ ಮಾತನಾಡಿ, 10ಎಚ್‍ಪಿ ಸಾಮಥ್ರ್ಯಕಿಂತ ಕಡಿಮೆ ಇರುವ ಪಂಪ್‍ಸೆಟ್‍ಗಳನ್ನು ಈ ಹಿಂದೆ ಸರಕಾರ ಉಚಿತ ವಿದ್ಯುತ್ ನೀಡುತ್ತಿತ್ತು. ಆದರೆ ಸರಕಾರದ ಯಾವುದೇ ಅಧಿಕೃತ ಆದೇಶ ಇಲ್ಲದಿದ್ದರೂ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಸ್ಪಷ್ಟ ಉತ್ತರ ನೀಡಬೇಕೆಂದು ಆಗ್ರಹಿಸಿದರು.
ಬೆಳೆಗಾರರ ಸಂಘದ ಕಾರ್ಯದರ್ಶಿ ಮನೋಹರ್, ರೈತ ಮುಖಂಡ ಬಿ.ಸಿ.ದಯಾಕರ್ ಎಸ್.ಪಿ.ರಾಜು, ಡಿ.ಕೆ.ಲಕ್ಷ್ಮಣ್‍ಗೌಡ, ಕೆ.ಎಂ.ಜಯರಾಂ, ದುಂಡುಗ ಪ್ರಮೋದ್, ಪ್ರಕಾಶ್ ಬಕ್ಕಿ, ಪ್ರೀತಮ್, ಎಂ.ಪಿ.ಸುನೀಲ್, ರಾಮಕೃಷ್ಣ, ನಯನ ತಳವಾರ, ಮಡ್ಡಿಕೆರೆ ಭರತ್, ಮಹೇಂದ್ರ ಲೋಕವಳ್ಳಿ ಮತ್ತಿತರರಿದ್ದರು.



