ದಿನಾಂಕ 31.01.2025 ರಂದು ಸೇವೆಯಿಂದ ವಯೋನಿವೃತ್ತಿ ಹೊಂದಿದ ಮುದ್ದಪ್ಪ ಬಿ ಇ, ಪಿಎಸ್ಐ, ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ನಯಿಮುಲ್ಲಾ ಖಾನ್, ಎಎಸ್ಐ, ಲಿಂಗದಹಳ್ಳಿ ಪೊಲೀಸ್ ಠಾಣೆ ರವರನ್ನು ಅವರ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿಯವರು ಸನ್ಮಾನಿಸಿ, ಅವರ ನಿವೃತ್ತಿ ಜೀವನ ಸುಖಕರವಾಗಿರಲೆಂದು ಹಾರೈಸಿರುತ್ತಾರೆ.

ಮುದ್ದಪ್ಪ ಬಿ ಇ, PSI ರವರು ದಿನಾಂಕ 10.10.1985 ರಂದು ಪೊಲೀಸ್ ಇಲಾಖೆಗೆ ಸೇರಿ 39 ವರ್ಷ ಸೇವೆ ಸಲ್ಲಿಸಿದ್ದು, ನಯಿಮುಲ್ಲಾ ಖಾನ್, ASI ರವರು ದಿನಾಂಕ 12.10.1985 ರಂದು ಪೊಲೀಸ್ ಇಲಾಖೆಗೆ ಸೇರಿ 39 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಉತ್ತಮವಾಗಿ ಸೇವೆಯನ್ನು ಸಲ್ಲಿಸಿರುತ್ತಾರೆ.
ಇವರ ಸುದೀರ್ಘ ಸೇವೆಯನ್ನು ಗುರುತಿಸಿ ಪೊಲೀಸ್ ಇಲಾಖೆ ಗೌರವ ಸಮರ್ಪಣೆ ಮಾಡಿದೆ. ಈ ಸಂದರ್ಭದಲ್ಲಿ ಡಿವೈಎಸ್ಪಿ ಶೈಲೇಂದ್ರ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.



