ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಮಂಡಿಸಿದ 2025-26ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಮಧ್ಯಮವರ್ಗ ಮತ್ತು ವೇತನದಾರರಿಗೆ ಗುಡ್ ನ್ಯೂಸ್ ಸಿಕ್ಕಿದೆ. 12 ಲಕ್ಷ ಆದಾಯದವರೆಗೂ ಯಾವುದೇ ತೆರಿಗೆ (Tax) ಪಾವತಿ ಮಾಡುವ ಅಗತ್ಯವಿಲ್ಲದೇ ರಿಬೆಟ್ ಪ್ರಕಟಿಸಲಾಗಿದೆ.

ಬಜೆಟ್‌ನಲ್ಲಿ ಆದಾಯ ತೆರಿಗೆ ಸ್ಲಾಬ್‌ಗಳನ್ನು ಬದಲಿಸಲಾಗಿದೆ. ಇದಕ್ಕೆ 75ಸಾವಿರ ಸ್ಟಾಂಡರ್ಡ್ ಡಿಡಕ್ಷನ್  ಸೇರಿಸಿದರೆ 12.75 ಲಕ್ಷ ರೂಪಾಯಿಗೆ ತೆರಿಗೆ ಇರುವುದಿಲ್ಲ. ಆದರೆ ಷೇರು ಮತ್ತು ಸಾಲಪತ್ರಗಳಿಂದ ಬರುವ ಕ್ಯಾಪಿಟಲ್ ಗೈನ್ಸ್‌ ಪ್ರತ್ಯೇಕ ಆದಾಯ ಹೊರತುಪಡಿಸಿ ಸರಾಸರಿ ತಿಂಗಳಿಗೆ 1 ಲಕ್ಷ ರೂ. ಆದಾಯ ಹೊಂದಿರುವವರು ಯಾವುದೇ ತೆರಿಗೆ ಕಟ್ಟಬೇಕಿಲ್ಲ.

ಕೇಂದ್ರದ ಈ ನಿರ್ಧಾರದಿಂದ ಸುಮಾರು 1 ಕೋಟಿ ಮಂದಿಗೆ ಅನುಕೂಲ ಆಗಲಿದೆ. ಕೇಂದ್ರದ ಈ ಐತಿಹಾಸಿಕ ನಿರ್ಧಾರದಿಂದ ಮಧ್ಯಮ ವರ್ಗದ ಈ ಉಳಿಕೆ ಆದಾಯ ಮ್ಯೂಚುವಲ್ ಫಂಡ್‌, ಸ್ಟಾಕ್ ಮಾರ್ಕೆಟ್, ರಿಯಲ್ ಎಸ್ಟೇಟ್ ರಂಗಕ್ಕೆ ಬಿಗ್ ಬೂಸ್ಟ್ ಸಿಗುವ ಸಾಧ್ಯತೆಯಿದೆ.

12 ಲಕ್ಷಕ್ಕೆ ಯಾವುದೇ ತೆರಿಗೆ ಇಲ್ಲ ಹೇಗೆ?

ಓರ್ವ ವ್ಯಕ್ತಿಯ ಅದಾಯ 12 ಲಕ್ಷ ಇದೆ ಎಂದಿಟ್ಟುಕೊಂಡರೆ. ಹೊಸ ಆದಾಯ ತೆರಿಗೆ ಸ್ಲ್ಯಾಬ್‌ ಪ್ರಕಾರ 0-4 ಲಕ್ಷ ರೂ.ವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಪಾವತಿಸುವ ಅಗತ್ಯವಿಲ್ಲ. 4 ಲಕ್ಷದಿಂದ 8 ಲಕ್ಷ ರೂ.ವರೆಗಿನ ಆದಾಯಕ್ಕೆ 5% ತೆರಿಗೆ ಇದೆ. ಅಂದರೆ 20 ಸಾವಿರ ರೂ. ತೆರಿಗೆ ಬೀಳುತ್ತದೆ.

8 ಲಕ್ಷದಿಂದ 12 ಲಕ್ಷ ರೂ.ವರೆಗಿನ ಆದಾಯಕ್ಕೆ 10% ತೆರಿಗೆ ಇದೆ. ಈ ಲೆಕ್ಕಾಚಾರ ಮಾಡಿದರೆ 40 ಸಾವಿರ ರೂ. ತೆರಿಗೆ ಬೀಳುತ್ತದೆ. ಈಗ ಒಟ್ಟು ತೆರಿಗೆ ಲೆಕ್ಕ ಹಾಕಿದರೆ 60 ಸಾವಿರ ರೂ. ಆಗುತ್ತದೆ. ಆದರೆ ಸ್ಟ್ಯಾಡರ್ಡ್‌ ಡಿಡಕ್ಷನ್‌ ರಿಬೆಟ್ 75 ಸಾವಿರ ರೂ. ಇರುವ ಕಾರಣ ಒಟ್ಟು 12 ಲಕ್ಷ ರೂ.ವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಇರುವುದಿಲ್ಲ.

ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು 50,000 ರೂ.ನಿಂದ 75,000 ರೂ.ಗೆ ಹೆಚ್ಚಿಸಲಾಗಿದೆ. ಅಂದರೆ ನಿಮ್ಮ ಒಟ್ಟಾರೆ ಆದಾಯದಲ್ಲಿ 75,000 ರೂ ಹಣವನ್ನು ಹೊರಗಿಡಬಹುದು. ಇದು ಹೊಸ ಆದಾಯ ತೆರಿಗೆ ಸ್ಲಾಬ್‌ ಬಳಸುವ ತೆರಿಗೆ ಪಾವತಿದಾರರಿಗೆ ಮಾತ್ರ ಅನ್ವಯವಾಗುತ್ತದೆ. ಹಳೆ ತೆರಿಗೆ ಸ್ಲ್ಯಾಬ್‌ನಲ್ಲಿ 50,000 ರೂ. ಸ್ಟ್ಯಾಂಡರ್ಡ್ ಡಿಡಕ್ಷನ್ ಇದ್ದು ಯಾವುದೇ ಬದಲಾವಣೆ ಮಾಡಿಲ್ಲ.

ಸ್ಟ್ಯಾಂಡರ್ಡ್ ಡಿಡಕ್ಷನ್ ಸಂಬಳದ ಆದಾಯದಿಂದ ಕಡಿತಗೊಳಿಸಲಾಗುವ ಸ್ಥಿರ ಮೊತ್ತವಾಗಿದ್ದು ಹೂಡಿಕೆ ಮಾಡಿದ್ದಕ್ಕೆ ಪುರಾವೆ ಇತ್ಯಾದಿ ದಾಖಲೆಗಳನ್ನು ನೀಡುವ ಅಗತ್ಯವಿಲ್ಲ.

 

Leave a Reply

Your email address will not be published. Required fields are marked *

Related News

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ