October 31, 2025

 

 

ನರಸಿಂಹರಾಜಪುರ ತಾಲ್ಲೂಕಿನ ನೆಲಗದ್ದೆ ಗ್ರಾಮದ ಸರ್ವೆ ನಂ.74ರ ಆರಂಬಳ್ಳಿ ಮೀಸಲು ಅರಣ್ಯ ಕೊಡಿಹಳ್ಳಿ ಅರಣ್ಯದ ಬಲಭಾಗದ ಪ್ರದೇಶದಲ್ಲಿ ಅಕ್ರಮವಾಗಿ ಸಾಗುವಾನಿ ಮರ ಕಡತಲೆ ಮಾಡಿ ಸಾಗಣೆ ಮಾಡಲು ಯತ್ನಿಸುತ್ತಿದ್ದ ಆರೋಪದ ಮೇಲೆ ಅರಣ್ಯ ಇಲಾಖೆಯವರು ಮಂಗಳವಾರ ಮಾಲು ಸಮೇತ ಆರೋಪಿಗಳನ್ನು ವಶಪಡಿಸಿಕೊಂಡಿದ್ದಾರೆ.

ನರಸಿಂಹರಾಜಪುರ  ಪಟ್ಟಣದ ಸುಂಕದಕಟ್ಟೆ ನಿವಾಸಿ ಸತ್ಯನಾರಾಯಣ ಮತ್ತು ಕೆಇಬಿ ಕಾಲೊನಿ ಹಿಂಭಾಗದ ನಿವಾಸಿ ರಂಗಪ್ಪ ಬಂಧಿತ ಆರೋಪಿಗಳು.

ಗಸ್ತು ತಿರುಗುವ ವೇಳೆ ಪಿಕಪ್ ವಾಹನದಲ್ಲಿ 3 ಸಾಗುವಾನಿ ಮರದ ದಿಮ್ಮಿ ತುಂಬಿಸಿದ್ದನ್ನು ಕಂಡು ವಿಚಾರಿಸಲಾಗಿದೆ. 3 ಸಾಗುವಾನಿ ಮರದ ಕಡಿತಲೆ ಮಾಡಿರುವ ಆರೋಪಿಗಳಿಂದ 13 ನಾಟಾ, 2 ಪಾಳಿ ಸೇರಿ 2.654 ಘನ ಮೀಟರ್ ಸಾಗುವಾನಿ ತುಂಡು ಹಾಗೂ ಸಾಗಣೆ ಮಾಡಲು ಬಳಸುತ್ತಿದ್ದ ವಾಹನ, ಮರ ಪಾಲಿಷ್ ಮಾಡುವ ಯಂತ್ರ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮನೆ ನಿರ್ಮಾಣಕ್ಕೆ ಈ ಸಾಗುವಾನಿ ಮರದ ದಿಮ್ಮಿಗಳನ್ನು ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿತ್ತು ಎಂದು ಅರಣ್ಯ ಇಲಾಖೆಯವರು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಎನ್.ಪ್ರವೀಣ್ ಕುಮಾರ್, ಉಪವಲಯ ಅರಣ್ಯಾಧಿಕಾರಿ ಗೌಸ್‌ ಮೊಹಿದ್ದೀನ್, ಗಸ್ತು ಅರಣ್ಯ ಪಾಲಕ ರುದ್ರೇಶ್ ನಾಯ್ಕ, ವಿಠಲ ರಸ್ತೆ ಗಸ್ತು ಅರಣ್ಯ ಪಾಲಕ ಸಂದೀಪ್ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ