ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಭಾಷಾಂತರ ಅಧ್ಯಯನ ಮತ್ತು ವಿದೇಶಿ ಭಾಷಾ ಅಧ್ಯಯನ ವಿಭಾಗದ ಸಂಯೋಜನಾಧಿಕಾರಿ, ಸಾಹಿತಿ ಡಾ. ಅವರೆಕಾಡು ವಿಜಯಕುಮಾರ್ ಅವರಿಗೆ ಮಲೆನಾಡು ಕಣ್ಮಣಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ವಿಜಯಕುಮಾರ್ ಅವರ ‘ಶಿಕ್ಷಣ ಮತ್ತು ಸಾಹಿತ್ಯ’ ಸೇವೆಯನ್ನು ಗುರುತಿಸಿ ಅಮೃತೇಶ್ವರ ಪ್ರಕಾಶನ ಮೈಸೂರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಚಿಕ್ಕಮಗಳೂರು, ಪೂರ್ಣಿಮ ಪ್ರಕಾಶನ, ನವೀನ್ ಪ್ರಕಾಶನ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ: 22/2/2025ನೇ ಶನಿವಾರ ಚಿಕ್ಕಮಗಳೂರಿನ ಎ.ಐ.ಟಿ. ಕಾಲೇಜಿನ ಸಭಾಂಗಣದಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ‘ಮಲೆನಾಡ ಕಣ್ಮಣಿ’ 2025ನೇ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಸರಾಂತ ವೈದ್ಯರಾದ ಡಾ. ಜೆ.ಪಿ. ಕೃಷ್ಣೇಗೌಡ ವಹಿಸಿದ್ದರು. ಪತ್ರಕರ್ತ ಸ. ಗಿರಿಜಶಂಕರ್, ಡಾ. ಸುಬ್ಬರಾಯ, ಡಾ. ಸಿ.ಟಿ. ಜಯದೇವ, ಶ್ರೀ ಸುಂದರೇಶ್, ಶ್ರೀಮತಿ ಲಕ್ಷ್ಮಿ ಶಾಮರಾವ್, ಶ್ರೀಮತಿ ಪೂರ್ಣಿಮಾ ಹಾಗೂ ಪ್ರಕಾಶಕಿ ಶ್ರೀಮತಿ ತ್ರಿವೇಣಿ ವಿಜಯಕುಮಾರ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು



