November 1, 2025

 

 

ತುಳು, ಬ್ಯಾರಿ, ಕೊಂಕಣಿ ಭಾಷೆಗಳು ಒಂದೆ ತಾಯಿಯ ಮಕ್ಕಳ ಸ್ಥಾನವನ್ನು ಪಡೆದುಕೊಂಡಿದೆ. ದಕ್ಷಿಣಕನ್ನಡ, ಉಡುಪಿ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈ ಭಾಷೆಗಳು ಪ್ರತಿ ಮನೆಯ ಆಡು ಭಾಷೆಗಳಾಗಿದೆ ಎಂದು ಮಂಗಳೂರಿನ ಸಾಹಿತಿ, ವಾಗ್ಮಿ ಮಹಮ್ಮದ್ ರಫೀಕ್ ಮಾಸ್ಟರ್ ಹೇಳಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಮೂಡಿಗೆರೆ ತುಳೂಕೂಟದಿಂದ ಶುಕ್ರವಾರ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ನಡೆದ ತುಳೂವೈಭವೊ ಕಾರ್ಯಕ್ರಮದಲ್ಲಿ ಮಾತನಾಡಿ, ಕಡಲ ತಡಿಯಿಂದ ಹೊರಟಿರುವ ತುಳು ಭಾಷೆ ರಾಜ್ಯ, ದೇಶ, ವಿದೇಶದಲ್ಲಿ ಭದ್ರವಾಗಿ ನೆಲೆಯೂರಿದೆ. ಈ ಭಾಷೆಯನ್ನು ರಾಜ್ಯಾಂಗದ ಬಾಷೆಯನ್ನಾಗಿ ಮಾಡಬೇಕೆಂದು ಹಾಗೂ 8ನೇ ಪರಿಚ್ಛೇದಕ್ಕೆ ಸೇರಿಸಬೇಕೆಂದು ತುಳುನಾಡಿನಿಂದ ಹೊರಟ ಕೂಗು ಇನ್ನೂ ಕೂಡ ಶಾಸನ ಸಭೆಗೆ ತಲುಪದಿರುವುದು ವಿಪರ್ಯಾಸವಾಗಿದೆ. ಕನ್ನಡಕ್ಕೆ ಮೊದಲನೇ ಸ್ಥಾನ ನೀಡಿ, ತುಳು ಭಾಷೆಗೆ ಎರಡನೇ ಸ್ಥಾನ ನೀಡಬೇಕಾಗಿರುವುದು ಆಡಳಿತರೂಢ ಸರ್ಕಾರದ ಕರ್ತವ್ಯವಾಗಿದೆ ಎಂದು ತಿಳಿಸಿದರು.

ದ್ರಾವಿಡ ಭಾಷೆಗಳ ಸಾಲಿನಲ್ಲಿ ತುಳು ಸೇರಿದಂತೆ ಅನೇಕ ಭಾಷೆಗಳು ಸ್ಥಾಪಿತಗೊಂಡು ಸಾವಿರಾರು ವರ್ಷಗಳು ಸಂದಿವೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಮೈಸೂರು, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಶತಮಾನದ ಹಿಂದೆ ಕಾಲಿಟ್ಟಿದ್ದು ಈಗ ಬಹುತೇಕರು ಮಂಗಳೂರಿಗರಂತೆ ತುಳು ಭಾಷೆಯನ್ನು ಕರಗತ ಮಾಡಿಕೊಂಡಿದ್ದಾರೆ. ತುಳು ಭಾಷೆಯ ಸಂಸ್ಕೃತಿ, ವೈವಿಧ್ಯತೆ ಮತ್ತು ಪರಂಪರೆ, ಇತಿಹಾಸವನ್ನು ನೆನಪಿಸುವಂತಿದೆ. ತುಳು ಸಂಸ್ಕೃತಿಯ ಖಾಧ್ಯವನ್ನು ಸವಿಯದವರೇ ಇಲ್ಲ. ಅತ್ಯುತ್ತಮವಾದ ಖಾದ್ಯ ತಯಾರಿಕೆಯಲ್ಲಿ ತುಳುಭಾಷಿಕರು ಮುಂಚೂಣಿಯಲ್ಲಿದ್ದಾರೆ. ತುಳು ಭಾಷೆಯ ಸಾಹಿತ್ಯ, ಸಂಸ್ಕೃತಿ, ಯಕ್ಷಗಾನ ಸೇರಿದಂತೆ ಅನೇಕ ಕಲೆ ಸಾಹಿತ್ಯ ಎಲ್ಲಾ ವರ್ಗದವರನ್ನು ಆಕರ್ಷಿಸುವಂತಿದೆ ಎಂದು ತಿಳಿಸಿದರು.

ಮಂಗಳೂರಿನ ವೈದ್ಯೆ ಡಾ.ಆಶಾ ಜ್ಯೋತಿ ರೈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತುಳು ಭಾಷೆ ಮಂಗಳೂರು, ಉಡುಪಿ, ಕಾಸರಗೋಡು, ಚಿಕ್ಕಮಗಳೂರು ಸೇರಿದಂತೆ ಪ್ರಾಂತ್ಯ ವಾರು ವಿಭಾಗಗಳಲ್ಲಿ ಬೇರೆ ಬೇರೆ ರೀತಿಯ ಆಡುಭಾಷೆಯಾಗಿದೆ. ಈಗಿನ ಯುವ ಜನಾಂಗ ಆಧುನಿಕತೆಗೆ ತಿರುಗಿದ ನಂತರ ಹಳೆಯ ಸಂಸ್ಕೃತಿ ಪರಂಪರೆಯನ್ನು ಮರೆತು ಬಿಟ್ಟಿದ್ದಾರೆ. ಮೊಬೈಲ್ ಕಂಪ್ಯೂಟರ್ ನತ್ತ ಆಕರ್ಷಿತವಾಗಿ ತುಳುನಾಡಿನ ಧಾರ್ಮಿಕ ಸಂಸ್ಕೃತಿಯ ಮೂಲ ಸ್ವರೂಪಕ್ಕೆ ಧಕ್ಕೆ ತರುವಂತಾಗಿದೆ. ಅಂತರ್ಜಾತಿ ವಿವಾಹವಾದರೆ ಮೈ ಪರಚಿಕೊಳ್ಳುವವರು, ಡ್ರಗ್ಸ್ ನಂತಹ ಮಾರಕ ಪದಾರ್ಥಕ್ಕೆ ಬಲಿಯಾದವರನ್ನು ಪ್ರಶ್ನಿಸುವ ಗೋಜಿಗೆ ಹೋಗುತ್ತಿಲ್ಲ. ಇದರಿಂದ ಸಮಾಜ ಕಲಷಿತವಾಗುತ್ತಿದೆ. ಸಂಜೆಯಿಂದ ಮರುದಿನ ಬೆಳಿಗಿನವರೆಗೆ ನಡೆಯುತ್ತಿದ್ದ ಯಕ್ಷಗಾನ ಈಗ 2 ಅಥವ 3 ಗಂಟೆಗೆ ಮಾತ್ರ ಸೀಮಿತವಾಗಿದೆ. ಆಧುನಿಕತೆಯ ಭರಾಟೆಯಿಂದ ತುಳುನಾಡಿನ ಕಲೆ ಮತ್ತು ಸಾಹಿತ್ಯಕ್ಕೆ ಕೊಡಲಿ ಪೆಟ್ಟು ಬಿದ್ದಂತಾಗಿದೆ ಎಂದು ತಿಳಿಸಿದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾದಕರನ್ನು ಸನ್ಮಾನಿಸಲಾಯಿತು. ಬೇಲೂರಿನ ಚೈತನ್ಯ ಕಲಾವಿದರಿಂದ ಅಷ್ಟಮಿ ಎಂಬ ತುಳು ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು.

ತುಳುಕೂಟದ ಅಧ್ಯಕ್ಷ ಪಿ.ಕೆ.ಹಮೀದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವರಾದ ಮೋಟಮ್ಮ, ಬಿ.ಬಿ.ನಿಂಗಯ್ಯ, ಕ್ರೈಸ್ತ ಧರ್ಮಗುರು ವಂದನೀಯ ಸ್ವಾಮಿ ಮಾರ್ಸೆಲ್ ಪಿಂಟೋ, ಡಾ. ರಾಮಚರಣ ಅಡ್ಯಂತಾಯ, ದೀಪಕ್ ದೊಡ್ಡಯ್ಯ,  ಗೋಪಾಲ ಶೆಟ್ಟಿ, ಜಾಣಪ್ಪ ಮಾಸ್ಟರ್, ಟಿ ಹರೀಶ್ ಯೋಗೇಶ್ ಪೂಜಾರಿ ಸುಂದರೇಶ್ ಮಾಸ್ಟರ್, ಸುರೇಶ್ ಶೆಟ್ಟಿ, ಹಸೈನಾರ್, ಇತರರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ