ಚಿಕ್ಕಮಗಳೂರು ಜಿಲ್ಲೆ ಆಲ್ದೂರು ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಮಹಾಗಣಪತಿ ದೇವಾಲಯದ ಪುನಃಪ್ರತಿಷ್ಠಾಪನೆ ಹಾಗೂ ಧಾರ್ಮಿಕ ಸಮಾರಂಭ ಯಶಸ್ವಿಯಾಗಿ ನೆರವೇರಿತು.
ಐದು ದಿನಗಳ ಕಾಲ ನಡೆದ ಪೂಜೆ, ಹೋಮ, ಹವನ ಸೇರಿದಂತೆ ವೈವಿದ್ಯಮಯ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಕೊನೆಯ ದಿನ ಧಾರ್ಮಿಕ ಸಮಾರಂಭ ಏರ್ಪಡಿಸಲಾಗಿತ್ತು.

ಜಗದ್ಗುರು ಡಾ ಶ್ರೀ ನಿರ್ಮಲಾನಂದ ನಾಥ ಮಹಾ ಸ್ವಾಮೀಜಿಗಳು ಆದಿ ಚುಂಚನಗಿರಿ ಮಹಾಸಂಸ್ಥಾನ ಮಠ, ಶ್ರೀ ಬಸವನಾಗಿ ದೇವ ಶರಣರು ಜಗದ್ಗುರುಗಳು ಛಲವಾದಿ ಗುರುಪೀಠ ಚಿತ್ರದುರ್ಗ ಶ್ರೀ ಗುಣನಾಥ ಸ್ವಾಮೀಜಿಗಳು ಆದಿ ಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠ ಶೃಂಗೇರಿ, ಶ್ರಿ ರೇಣುಕಾ ಮಹಾಂತ ಶಿವಾಚಾರ್ಯ ಮಹಾ ಸ್ವಾಮೀಜಿಗಳು, ಬೇರುಗಂಡಿ ಬೃಹನ್ಮಠ ಮಾಚಗೊಂಡನಹಳ್ಳಿ ಇವರ ಉಪಸ್ಥಿತಿಯಲ್ಲಿ ದೇವಾಲಯದ ಪುನರ್ ಪ್ರತಿಷ್ಠಾಪನೆ ಹಾಗೂ ಧಾರ್ಮಿಕ ಸಮಾರಂಭ ಯಶಸ್ವಿಯಾಗಿ ನೆರವೇರಿತು.

ಈ ವೇಳೆ ಎಂ.ಕೆ ಪ್ರಾಣೇಶ್ ಉಪಸಭಾಪತಿಗಳು, ಸಿ.ಟಿ ರವಿ ವಿಧಾನ ಪರಿಷತ್ ಸದಸ್ಯರು, ಟಿ.ಡಿ ರಾಜೇಗೌಡ್ರು ಶೃಂಗೇರಿ ಶಾಸಕರು, ಶ್ರೀಮತಿ ನಯನಾ ಮೋಟಮ್ಮ, ಮೂಡಿಗೆರೆ ಶಾಸಕರು, ಬಿ.ಎಲ್ ಶಂಕರ್ ರಾಜ್ಯ ಚಿತ್ರಕಲಾ ಪರಿಷತ್ ಅಧ್ಯಕ್ಷರು, ಹಳಸೆ ಶಿವಣ್ಣ, ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷರು, ಹಳೇಕೋಟೆ ವಿಶ್ವಾಮಿತ್ರ ಅಮೇರಿಕಾ ಅಕ್ಕ ಸಂಘಟನೆ ಮಾಜಿ ಅಧ್ಯಕ್ಷರು ಸೇರಿದಂತೆ ಹಲವಾರು ಗಣ್ಯರು, ಮಾಜಿ ಸಚಿವರು, ಶಾಸಕರು ಭಾಗವಹಿಸಿದ್ದರು.
ಭಾನುವಾರ ಮಹಾಗಣಪತಿ ಬಲಮುರಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ನಡೆಯಿತು. ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತರಾದ ಭೀಮೇಶ್ವರ ಜೋಷಿ ನೇತೃತ್ವದಲ್ಲಿ ದೇವಸ್ಥಾನದ ಗರ್ಭಗುಡಿಯಲ್ಲಿ ಮೂರ್ತಿ ಪ್ರತಿಷ್ಠಾಪನೆ ನಡೆಯಿತು.
ಮಹಾಪ್ರತಿಷ್ಠ ಪ್ರತಿಷ್ಠಾಂಗ ಹೋಮ, ಪೂರ್ಣಹುತಿ, ಮಹಾಗಣಪತಿಗೆ ಷೋಡಶೋಪಚಾರ ಪೂಜೆ, ಕಳಶಾಭಿಷೇಕ, ಅಲಂಕಾರ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಕಳಶಾಭಿಷೇಕ, ಅನ್ನ ಸಂತರ್ಪಣೆ ನಡೆಯಿತು.
ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಗುಣನಾಥ ಸ್ವಾಮೀಜಿ, ಮಾಚಗೊಂಡನಹಳ್ಳಿ ಬೇರುಗಂಡಿ ಬೃಹನ್ಮಠದ ಪೀಠಾಧ್ಯಕ್ಷ ರೇಣುಕಾ ಮಹಾಂತ ಶಿವಾಚಾರ್ಯ ಸ್ವಾಮೀಜಿ, ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಸಿ.ಸುರೇಶ್, ಶಾಸಕ ರಾಜೇಗೌಡ, ಮಾಜಿ ಸಚಿವೆ ಮೋಟಮ್ಮ. ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಭಾಗವಹಿಸಿದ್ದರು.
ಶ್ರೀಧರ ಭಟ್, ಕೌರಿ ಕೊಪ್ಪ, ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಭಟ್ ಅವರನ್ನು ಸಮಿತಿ ವತಿಯಿಂದಸನ್ಮಾನಿಸಲಾಯಿತು.
ಮಹಾಗಣಪತಿ ಉತ್ಸವ ಸಮಿತಿ ಅಧ್ಯಕ್ಷ ಸಿ.ಸಿ. ಸುರೇಶ್ ಅವರ ನೇತೃತ್ವದಲ್ಲಿ ಸಮಿತಿಯ ಎಲ್ಲಾ ಪದಾಧಿಕಾರಿಗಳು, ಸದಸ್ಯರು, ಆಲ್ದೂರು ಹಾಗೂ ಸುತ್ತಮುತ್ತಲ ಗ್ರಾಮಸ್ಥರ ನೆರವು ಮತ್ತು ಭಾಗವಹಿಸುವಿಕೆಯಿಂದ ಆಲ್ದೂರಿನಲ್ಲಿ ಭವ್ಯವಾದ ದೇವಾಲಯ ನಿರ್ಮಾಣಗೊಂಡು ವೈಭವಯುತವಾಗಿ ಪುನಃಪ್ರತಿಷ್ಠಾಪನೆಗೊಂಡಿದೆ.



