 
                
ಇದು ಮೂಡಿಗೆರೆ ತಾಲೂಕಿನ ಬೆಟ್ಟದಮನೆ ಸ್ಥಳದಲ್ಲಿ ಮೂಡಿಗೆರೆ ಹಾನುಬಾಳು ಸಕಲೇಶಪುರ ಮುಖ್ಯ ರಸ್ತೆಯ ಹೇಮಾವತಿ ಹೊಳೆ ಗೆ ಹೊಸದಾಗಿ ನಿರ್ಮಾಣ ಆದ ಸೇತುವೆ ಯ ಎರಡು ಕಡೆ ರಸ್ತೆ ಕತೆ.
ಈ ಹಿಂದಿನ ಸರ್ಕಾರದಿಂದ ಹೊಸ ಸೇತುವೆ ನಿರ್ಮಾಣ ಕಾರ್ಯ ಹಲವು ವರ್ಷಗಳ ಕಾಲ ಆಮೆ ಗತಿಯನ್ನೇ ನಾಚುವಷ್ಟು ನಿದಾನವಾಗಿ ಕಾಮಗಾರಿ ನಡೆದು, ಈಗ ಕೆಲವು ವರ್ಷದ ಹಿಂದೆ ಈ ಸೇತುವೆ ಯ ಎತ್ತರಕ್ಕೆ ಎರಡು ಕಡೆ ರಸ್ತೆಯನ್ನು ಮಣ್ಣು ಹಾಕಿ ಏರಿಸಿ ಕೆಲವು ತಿಂಗಳಿನಿಂದ ಅ ರಸ್ತೆಗೆ wet mix (40 mm ಜಲ್ಲಿ ಮತ್ತು ಜಲ್ಲಿ dust ಮಿಶ್ರಣ )ಹಾಕಿ ಬಿಟ್ಟಿದ್ದಾರೆ ಸುಮಾರು 600 ಮೀಟರ್, ಈ ಜಾಗದಲ್ಲಿ ಹೋಗಬೇಕಾದರೆ ಮೊದಲನೇ ಗೇರ್ ಬೇಕು, ಅಕ್ಕ ಪಕ್ಕ ಬಸ್ ಲಾರಿ ಅಥವಾ ಟ್ರ್ಯಾಕ್ಟರ್ ಜೋರಾಗಿ ಹೋದ್ರೆ ಅದರ ಚಕ್ರಕ್ಕೆ ಸಿಕ್ಕ ಕಲ್ಲುಗಳು ಗುಂಡು ಹೊಡೆದ ಹಾಗೆ ಚಿಮ್ಮುತ್ತವೆ, ಇದೇನಾದರೂ ಬೈಕ್ ಸವಾರರು ಪಾದಚಾರಿಗಳು ಮತ್ತು ನಾಲ್ಕು ಚಕ್ರ ವಾಹನ ಸವಾರರ ತಲೆಗೆ ಬಡಿದರೆ ಕತೆ ಗೋವಿಂದ. ಇನ್ನು ವಾಹನದ ಗಾಜಿಗೆ ಬಡಿದರೆ ತಮ್ಮದಲ್ಲದ ತಪ್ಪಿಗೆ ನಾವೆ ದಂಡ ಹಾಕಿಕೊಳ್ಳಬೇಕು
ಈ ಒಂದು ರಸ್ತೆಗೆ ಟಾರ್ ಹಾಕಲು ಡಾಂಬಾರು ಸಿಗುತ್ತಿಲ್ಲವೇ ?
ಮೂಡಿಗೆರೆ ಶಾಸಕರಾದ ನಯನ ಮೋಟಮ್ಮ ನವರು ಇದರ ಬಗ್ಗೆ ತುರ್ತು ಗಮನ ಹರಿಸಿ ತ್ವರಿತವಾಗಿ ರಸ್ತೆ ಗೆ ಟಾರ್ ಹಾಕಿಸಲಿ ಅನ್ನುವುದು ನನ್ನಂತ ಸಾವಿರಾರು ವಾಹನ ಸವಾರರ, ಪ್ರಯಾಣಿಕರ ಒತ್ತಾಯ
✍️ ಅವರೇಕಾಡು ಪೃಥ್ವಿ


 
 

 
                                                         
                                                         
                                                         
                                                         
                                                         
                                                         
                                                        