 
                
ಮೂಡಿಗೆರೆ ತಾಲ್ಲೂಕಿನ ರೋಟರಿ ಸಂಸ್ಥೆ ಹಾಗೂ ಮಂಗಳೂರಿನ ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಗೋಣಿಬೀಡು ಗ್ರಾಮದಲ್ಲಿ ಗುರುವಾರ ಬೃಹತ್ ಆರೋಗ್ಯ ತಪಾಸಣ ಶಿಬಿರವನ್ನು ಆಯೋಜಿಸಲಾಯಿತು.
ಗೋಣಿಬೀಡು ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಹಮ್ಮಿಕೊಂಡಿದ್ದ ಶಿಬಿರದಲ್ಲಿ ಕಣಚೂರು ಆಸ್ಪತ್ರೆಯ ಸುಮಾರು 40 ಮಂದಿ ವೈದ್ಯರು ವಿವಿಧ ರೀತಿಯ ಆರೋಗ್ಯ ತಪಾಸಣೆ ನಡೆಸಿದರು.
ಶಿಬಿರದಲ್ಲಿ ಜನರಲ್ ಮೆಡಿಸನ್, ರಕ್ತದೊತ್ತಡ, ಮಧುಮೇಹ, ಉಸಿರಾಟ, ಶ್ವಾಸಕೋಶ, ಅಸ್ತಮಾ ಸಂಬಂಧಿ ಕಾಯಿಲೆಗಳು, ಕ್ಯಾನ್ಸರ್, ಮೂಳೆ, ಅಪೆಂಡಿಕ್ಸ್, ಅಲ್ಸರ್, ಹರ್ನಿಯಾ, ಮೂಲವ್ಯಾಧಿ, ವೇರಿಕೋಸ್ ವೇನ್, ಕಣ್ಣು, ಮೂಗು, ಕಿವಿ, ಗಂಟಲು, ಉದರ ಸಂಬಂಧಿ, ಪಿತ್ತಕೋಶದ ಕಲ್ಲು, ಥೈರಾಯಿಡ್, ಗರ್ಭಕೋಶ ಗೆಡ್ಡೆ, ಚರ್ಮ ಕಾಯಿಲೆಗಳು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳ ತಪಾಸಣೆ ನಡೆಸಲಾಯಿತು.
ಗೋಣಿಬೀಡು ಸುತ್ತಮುತ್ತಲಿನ ಸುಮಾರು 350ಕ್ಕೂ ಅಧಿಕ ಜನರು ಆರೋಗ್ಯ ತಪಾಸಣೆ ನಡೆಸಿಕೊಂಡರು.
ಈ ಸಂದರ್ಭದಲ್ಲಿ ಕಣಚೂರು ಆಸ್ಪತ್ರೆಯ ಸಂಸ್ಥಾಪಕ ಕಣಚೂರು ಮೋಣು ಅವರ ಪುತ್ರ, ಕಣಚೂರು ಆಸ್ಪತ್ರೆಯ ಮ್ಯಾನೆಜಿಂಗ್ ಡೈರೆಕ್ಟರ್ ಅಬ್ದುಲ್ ರಹಿಮಾನ್, ಹಿರಿಯ ವೈದ್ಯರಾದ ಡಾ. ಶ್ರೀಕಾಂತ್, ಡಾ. ಅಶೋಕ್, ಗೋಣಿಬೀಡು ರೋಟರಿ ಅಧ್ಯಕ್ಷ ಪ್ರಸನ್ನ ಚಂದ್ರಾಪುರ, ಕಾರ್ಯದರ್ಶಿ ರತನ್ ಮರಾಬೈಲ್, ಹಿರಿಯ ರೋಟೇರಿಯನ್ ಗಳಾದ ಕೆ.ಟಿ.ಜಗದೀಶ್, ಬಿ.ಎಸ್. ಓಂಕಾರ್, ಸವಿನ್, ಕಾಫಿ ಬೆಳೆಗಾರರಾದ ಎಂ.ಸಿ.ನಾಗೇಶ್, ಗೋಣಿಬೀಡು ರೋಟರಿ ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸದಸ್ಯರು, ವಿವಿಧ ಸಂಘಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು.



 
 

 
                                                         
                                                         
                                                         
                                                         
                                                         
                                                         
                                                        