 
                
ಮೂಡಿಗೆರೆ ತಾಲೂಕಿನ ನಿಡುವಾಳೆ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಅದ್ದೂರಿಯಾಗಿ ಮತ್ತು ವಿಶಿಷ್ಟವಾಗಿ ಶಿವರಾತ್ರಿ ಪೂಜಾ ಕಾರ್ಯಕ್ರಮ ನಡೆಯಿತು.
ಕಳೆದ ಹತ್ತು ವರ್ಷಗಳಿಂದ ಮಹಾಶಿವರಾತ್ರಿಯನ್ನು ಬಹಳ ಅದ್ದೂರಿಯಾಗಿ ಉರುವಿನಖಾನ್ ಎಸ್ಟೆಟ್ ಮಾಲಿಕರಾದ ಸುನಿಲ್ ಜೆ ಗೌಡ ಮತ್ತು ಶ್ವೇತಸುನಿಲ್ ಜೆ.ಗೌಡ ನಡೆಸಿಕೊಂಡು ಬಂದಿರುತ್ತಾರೆ. ವರ್ಷದಿಂದ ವರ್ಷಕ್ಕೆ ಇಲ್ಲಿ ನಡೆಯುವ ಶಿವರಾತ್ರಿ ಉತ್ಸವಕ್ಕೆ ಆಪಾರ ಭಕ್ತರು ಭಾಗವಹಿಸುತ್ತಿದ್ದಾರೆ.
ಶಿವರಾತ್ರಿ ಉತ್ಸವದಲ್ಲಿ ಧಾರ್ಮಿಕ ಆಚರಣೆಯ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಮಾಜ ಸೇವೆಯಲ್ಲಿ ನಿರತರಾಗಿರುವವರನ್ನು ಗುರುತಿಸಿ ಸನ್ಮಾನ ಮಾಡಲಾಯಿತು.
ಮೂಡಿಗೆರೆಯ ಸಮಾಜ ಸೇವಕರಾದ ಹಸೈನಾರ್ ಬಿಳಗುಳ. ಬಾಳೂರು ಠಾಣಾಧಿಕಾರಿ ದೀಲಿಪ್ ಕುಮಾರ್, ಸೂಲಗಿತ್ತಿ ಕಮಲಮ್ಮ, ಕನ್ನಡ ಸಾಹಿತ್ಯ ಪರಿಷತ್ ಬಾಳೂರು ಹೋಬಳಿ ಅಧ್ಯಕ್ಷ ಸೋಮೇಶ್ ಗೌಡ ಮರ್ಕಲ್, ನಿಡುವಾಳೆ ಸುಧಾಕರ್ ಎನ್.ಎಸ್. ಇವರುಗಳನ್ನು ವಿವಿಧ ಕ್ಷೇತ್ರಗಳ ಸೇವೆಗಾಗಿ ಗುರುತಿಸಿ ಗೌರವಿಸಲಾಯಿತು.
ನಿರೂಪಣೆಯನ್ನು ಶಿಕ್ಷಕರಾದ ಮಾಲತೇಶ್ ಮತ್ತು ಸಂತೋಷ್ ಸಾಲಿಯಾನ ಅಚ್ಚುಕಟ್ಟಾಗಿ ನೆರವೆರಿಸಿದರು.
ನಿಡುವಾಳೆ ಹಾಗೂ ಸುತ್ತಮುತ್ತಲ ಗ್ರಾಮಗಳ ನೂರಾರು ಭಕ್ತರು ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು. ಉರುವಿನಖಾನ್ ಎಸ್ಟೆಟ್ ಮಾಲಿಕರಾದ ಸುನಿಲ್ ಜೆ ಗೌಡ ಮತ್ತು ಶ್ರೀಮತಿ ಶ್ವೇತ ಸುನಿಲ್ ಜೆ.ಗೌಡ, ಅವಿನ್ ಟಿವಿ ಸ್ಥಾನಿಕ ಸಂಪಾದಕ ಮಗ್ಗಲಮಕ್ಕಿ ಗಣೇಶ್, ನಾಗರಾಜ್ ಭಟ್ ಹಾಗೂ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.


 
 

 
                                                         
                                                         
                                                         
                                                         
                                                         
                                                        