ಬರ್ಮಾ(ಮ್ಯಾನ್ಮಾರ್‌), ಥೈಲ್ಯಾಂಡ್ ದೇಶಗಳಲ್ಲಿ   ಪ್ರಬಲ ಭೂಕಂಪನ ಸಂಭವಿಸಿದೆ. ಭೂಕಂಪನದ ತೀವ್ರತೆ ಥ್ಯಾಯ್ಲೆಂಡ್‌ನ   ಬ್ಯಾಂಕಾಕ್‌ ಮತ್ತು ಬಾಂಗ್ಲಾದೇಶದ ವರೆಗೂ ವ್ಯಾಪಿಸಿದೆ. ಭೂಕಂಪನದ ಕೇಂದ್ರಬಿಂದು ಇದ್ದ ಮ್ಯಾನ್ಮಾರ್‌ನಲ್ಲಿ ಭಾರಿ ಹಾನಿಯಾಗಿದ್ದು, 144 ಜನರು ಸಾವನ್ನಪ್ಪಿದ್ದಾರೆ.   ನೂರಾರು ಕಟ್ಟಡಗಳು ಧರೆಗುರುಳಿದ್ದು, ಜನರ ಬದುಕು ಬೀದಿಗೆ ಬಂದಿದೆ.

ಶುಕ್ರವಾರ 11:50 ಸುಮಾರಿಗೆ 7.7 ಮತ್ತು 7.4 ತೀವ್ರತೆಯಲ್ಲಿ ಎರಡು ಭೂಕಂಪನ ಸಂಭವಿಸಿದ್ದು, ಭಾರಿ ಅನಾಹುತಗಳು ಸಂಭವಿಸಿವೆ. ಈ ಭೂಕಂಪದ ಕೇಂದ್ರಬಿಂದು ಸಗೈಂಗ್ ಪ್ರದೇಶದಿಂದ ಸುಮಾರು 45 ಕಿಲೋಮೀಟರ್ ದೂರದಲ್ಲಿ, ಭೂಮಿಯಿಂದ 10 ಕಿಲೋಮೀಟರ್ ಆಳದಲ್ಲಿ ಇತ್ತು ಎಂದು ಯುನೈಟೆಡ್ ಸ್ಟೇಟ್ಸ್ ಜಿಯಾಲಾಜಿಕಲ್ ಸರ್ವೇ ತಿಳಿಸಿದೆ.

ಈ ಘಟನೆಯು ಮ್ಯಾನ್ಮಾರ್‌ನ ಜನಜೀವನವನ್ನು ಅಸ್ಥವ್ಯಸ್ಥ ಮಾಡಿದ್ದು, ಪಕ್ಕದ ರಾಷ್ಟ್ರಗಳಾದ  ಥೈಲ್ಯಾಂಡ್ ಮತ್ತು ಬಾಂಗ್ಲಾದೇಶದಲ್ಲೂ ತೀವ್ರ ಕಂಪನ ಅನುಭವವಾಗಿದೆ. ಮುಖ್ಯವಾಗಿ ಈ ಭೂಕಂಪವು ಮ್ಯಾನ್ಮಾರ್‌ನ ಉತ್ತರ ಮತ್ತು ಮಧ್ಯ ಭಾಗಗಳಲ್ಲಿ ಭಾರೀ ವಿನಾಶವನ್ನು ಉಂಟುಮಾಡಿದೆ. ಸಗೈಂಗ್ ಪ್ರದೇಶದಲ್ಲಿ ಹಲವಾರು ಕಟ್ಟಡಗಳು ಕುಸಿದಿದ್ದು, ಇತಿಹಾಸ ಪ್ರಸಿದ್ಧ ಸಗೈಂಗ್ ಗುಡ್ಡದ ಸುತ್ತಮುತ್ತಲಿನ ದೇವಾಲಯಗಳಿಗೆ ಹಾನಿಯಾಗಿದೆ.

ಘಟನೆಯಲ್ಲಿ ಇದುವರೆಗೆ ಕನಿಷ್ಠ 144 ಜನರು ಸಾವನ್ನಪ್ಪಿದ್ದಾರೆ ಮತ್ತು 732 ಜನರು ಗಾಯಗೊಂಡಿದ್ದಾರೆ. ಯುನೈಟೆಡ್ ಸ್ಟೇಟ್ಸ್ ಸರ್ಕಾರಿ ಸಂಸ್ಥೆಯು ಭೂಕಂಪದ ಶಕ್ತಿ ಮತ್ತು ಆಳವನ್ನು ವಿಶ್ಲೇಷಿಸಿದ ನಂತರ, ತೀವ್ರ ಆರ್ಥಿಕ ನಷ್ಟಗಳೊಂದಿಗೆ ಸಾವಿನ ಸಂಖ್ಯೆ ಸಾವಿರಾರು ಸಂಖ್ಯೆಯಲ್ಲಿರಬಹುದು ಎಂದು ಎಚ್ಚರಿಸಿದೆ. ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಜನರು ಸಿಲುಕಿದ್ದು ರಕ್ಷಣೆ ಕಾರ್ಯ ನಡೆಯುತ್ತಿದೆ.

 

Leave a Reply

Your email address will not be published. Required fields are marked *

Related News

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ