?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

 

 

ಅಂಬೇಡ್ಕರ್ ಅವರು ವಿಶ್ವ ಕಂಡ ಮಹಾನ್ ವ್ಯಕ್ತಿ. ಅವರು ಸಂವಿಧಾನ ರಚಿಸಿದ್ದರಿಂದ ಈ ದೇಶದ ಕಟ್ಟ ಕಡೆಯ ವ್ಯಕ್ತಿಯೂ ತಮ್ಮ ಹಕ್ಕು ಪಡೆದುಕೊಳ್ಳಲು ಸಹಕಾರಿಯಾಗಿದೆ ಎಂದು ಮಾಜಿ ಸಚಿವೆ ಮೋಟಮ್ಮ ಹೇಳಿದರು.

ಅವರು ಸೋಮವಾರ ಪಟ್ಟಣದ ಅಡ್ಯಂತಾಯ ರಂಗ ಮಂದಿರದಲ್ಲಿ ಮೂಡಿಗೆರೆ ತಾಲೂಕು ಆಡಳಿತ ಹಾಗೂ ವಿವಿಧ ಇಲಾಖೆ ಹಾಗೂ ಸಂಘ ಸಂಸ್ಥೆಯಿಂದ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 134 ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.

ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಸೋಲಿಸಿದೆ ಎಂದು ವಿರೋಧ ಪಕ್ಷಗಳು ಟೀಕಿಸುತ್ತಿರುವುದು ತಪ್ಪು. ಚುನಾವಣೆ ಎಂದ ಮೇಲೆ ಸೋಲು ಗೆಲುವು ಸಾಮಾನ್ಯ ಜನರ ತೀರ್ಪನ್ನ ಒಪ್ಪಿಕೊಳ್ಳಲೇಬೇಕು. ತಾನು ಕೂಡ 3 ಬಾರಿ ಸೋಲು ಕಂಡಿದ್ದೇನೆ. ಅದಕ್ಕೆ ಯಾರನ್ನೋ ಹೊಣೆ ಮಾಡುವುದರಲ್ಲಿ ಅರ್ಥವಿಲ್ಲ. ಅಂಬೇಡ್ಕರ್ ಅವರು ಬಗ್ಗೆ ಈ ದೇಶದ ಎಲ್ಲಾ ಸಮುದಾಯದ ಜನರು ಅರ್ಥ ಮಾಡಿಕೊಳ್ಳಬೇಕು. ಅಲ್ಲದೇ ಮಹಿಳೆಯರು ರಾಜಕೀಯವಾಗಿ ಮುಂದೆ ಬರಲು ಮತದಾನ ಹಾಗೂ ಆಸ್ತಿಯಲ್ಲಿ ಸಮಪಾಲು ಹಕ್ಕು ಪಡೆಯಲು ಅಂಬೇಡ್ಕರ್ ಅವರೆ ಕಾರಣ ಎಂದ ಅವರು, ಪೋಷಕರು ತಮ್ಮ ಮಕ್ಕಳಿಗೆ ಮಾನವೀಯ ಮೌಲ್ಯದ ಬಗ್ಗೆ ತಿಳಿಸಿಸಬೇಕು. ಉತ್ತಮ ಶಿಕ್ಷಣ ನೀಡುವ ಜತೆಗೆ ಬಾಂಧವ್ಯದ ಬ್ರಾತುತ್ವದ ಭಾವನೆ ಮೂಡಿಸಿ ಉತ್ತಮ ಪ್ರಜೆಯನ್ನಾಗಿ ಮಾಡಬೇಕು. ಶ್ರೀಮಂತರು ದಾನ ಮಾಡುವ ಮನೋಭಾವ ರೂಡಿಸಿಕೊಂಡು ಬಡ ಜನರಿಗೆ ನಿವೇಶನ ಕಟ್ಟಿಕೊಳ್ಳಲು ಸಹಕರಿಸಬೇಕೆಂದು ಮನವಿ ಮಾಡಿದರು.

ತಹಸೀಲ್ದಾರ್ ರಾಜಶೇಖರ್ ಮೂರ್ತಿ ಮಾತನಾಡಿ, ವಿಶ್ವದಲ್ಲಿಯೇ ಅತೀ ಹೆಚ್ಚು ಶಿಕ್ಷಣ ಪಡೆದ ವ್ಯಕ್ತಿ ಅಂಬೇಡ್ಕರ್ ಒಬ್ಬರೇ ಆಗಿದ್ದರು. ಅವರು ತಮ್ಮ ಬದುಕಿನಲ್ಲಿ ಶೈಕ್ಷಣಿಕ, ಸಾಮಾಜಿಕ, ಉದ್ಯೋಗಿಕ, ಮತ ಹಾಗೂ ಧಾರ್ಮಿಕಕ್ಕಾಗಿ ಹೋರಾಟ ನಡೆಸಿದರು. ಬ್ರಿಟೀಷ್ ಸರಕಾರದ ವಿರುದ್ಧ ಶೋಷಿತ ವರ್ಗಕ್ಕೆ ವಿದ್ಯಾಭ್ಯಾಸ, ಭೂಮಿ, ದೇವಸ್ಥಾನ್ಕಕೆ ಪ್ರವೇಶ ನೀಡುವ ಬಗ್ಗೆ ನೇರವಾಗಿ ಪ್ರಶ್ನೆ ಮಾಡಿದ್ದರು. ಹಿಂದೆ ಪದವೀದರರು, ತೆರಿಗೆದಾರರು ಹಾಗೂ 10 ಹೆಕ್ಟೇರ್ ಭೂಮಿ ಇದ್ದವರಿಗೆ ಮಾತ್ರ ಮತದಾನದ ಹಕ್ಕು ಇತ್ತು. ಆದರೆ ಅಂಬೇಡ್ಕರ್ ಅವರು ದೇಶದ ಎಲ್ಲಾ ಜನರಿಗೆ ಮತದಾನದ ಹಕ್ಕು ಕೊಡಿಸಿದರು. ಆದರೆ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸಿ ಕಟ್ಟಾಕುವ ಕೆಲಸ 74 ವರ್ಷದಿಂದ ನಡೆದುಕೊಂಡು ಬಂದಿದೆ. ಹೀಗೆ ಮಾಡುವುದರಿಂದ ಎಲ್ಲಾ ಸಮುದಾಯದ ಜನರಿಗೆ ನಷ್ಟ ವಾಗುತ್ತದೆ ಎಂಬುದು ಅರ್ಥ ಮಾಡಿಕೊಳ್ಳಬೇಕಿದೆ. ಸಂವಿಧಾನ ಜಾರಿಯಾದ ದಿನದಿಂದ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆ ಆಗಿತ್ತು. ಎಲ್ಲಾ ಜಾತಿ, ಭೇಧ, ಧರ್ಮ ಬಿಟ್ಟು ಇನ್ನಷ್ಟು ಕ್ರಾಂತಿಕಾರಿಯಾಗಿ ಬದಲಾವಣೆ ಆಗಬೇಕಿದೆ ಎಂದು ಹೇಳಿದರು.

ಶಾಸಕಿ ನಯನಾ ಮೋಟಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳಸ ಮಾವಿನಕೆರೆಯಲ್ಲಿ 75 ನಿವೇಶನ ರಹಿತರಿಗೆ, 2019ರಲ್ಲಿ ಆದ ಮಹಾಮಳೆಗೆ ಮನೆ ಕಳೆದುಕೊಂಡ ಚನ್ಹಡ್ಲು ಗ್ರಾಮದ 14 ಕುಟುಂಬಕ್ಕೆ ಹಕ್ಕುಪತ್ರ ನೀಡಲಾಗಿದೆ. ಕುಂದೂರು ಸಾರಗೂಡು ನಿರಾಶ್ರಿತರಿಗೆ ಭೂಮಿ ಒದಗಿಸುವ ಮೂಲಕ ಸಮಸ್ಯೆ ಬಗೆಹರಿಸಿದ್ದು, ಇಲ್ಲಿಯವರೆಗೆ ಸುಮಾರು 100 ಎಕರೆ ಬೂಮಿಯಲ್ಲಿ 105 ಮಂದಿ ನಿವೇಶನ ರಹಿತರಿಗೆ ಹಕ್ಕುಪತ್ರ ವಿತರಿಸಲಾಗಿದೆ. ಇದೀಗ ನಂದಿಪುರದಲ್ಲಿ 44, ಬಿಹೊಸಳ್ಳಿಯಲ್ಲಿ 23 ಕುಟುಂಬಕ್ಕೆ ನಿವೇಶನ ರಹಿತರಿಗೆ ಹಕ್ಕು ಪತ್ರ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಉಳಿದಂತೆ ತ್ರಿಪುರ, ತಳಿಹಳ್ಳ, ಬಸ್ಕಲ್, ಜಾವಳಿ, ಬೆಟ್ಟಗೆರೆ, ದಾರದಹಳ್ಳಿ, ಹಳೆಮೂಡಿಗೆರೆ, ಹಂತೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಜಾಗ ಕಾಯ್ದಿರಿಸಲಾಗಿದೆ. ಅಲ್ಲದೇ ಫಲಾನುಭವಿಗಳ ಆಯ್ಕೆ ಕೂಡ ಆಗಿದೆ.

ಹಳೆಮೂಡಿಗೆರೆಯಲ್ಲಿ ತಕರಾರು ಇದಿದ್ದರಿಂದ ಗೊಂದಲ ಉಂಟಾಗಿದೆ. ಹೋರಾಟಗಾರರು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಬೇಕು. ಬದಲಾಗಿ ನಿವೇಶನಕ್ಕೆ ಜಾಗ ಚಂದ್ರಲೋಕದಲ್ಲಿ ಕಾಯ್ದಿರಿಸಲಾಗಿದೆಯಾ ಎಂದು ಆರೋಪ ಮಾಡುವುದರಲ್ಲಿ ಅರ್ಥವಿಲ್ಲ. ಅಷ್ಟೊಂದು ಶಕ್ತಿ ನನ್ನಲ್ಲಿ ಇದಿದ್ದರೆ ತಾಲೂಕಿನ ಜನರಿಗೆ ಚಂದ್ರಲೋಕದಲ್ಲಿಯೇ ಜಾಗ ಮಾಡಿಕೊಡುತ್ತಿದ್ದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಅಂತರ್‍ಜಾತಿ ವಿವಾಹ ಮಾಡಿಕೊಂಡ ದಂಪತಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಪ್ರೋತ್ಸಾಹಧನದ ಬಾಂಡ್ ವಿತರಿಸಲಾಯಿತು. ಶಿಕ್ಷಣ ಇಲಾಖೆಯಿಂದ 2023-24ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಿಸಲಾಯಿತು.

ಪ.ಪಂ. ಅಧ್ಯಕ್ಷ ಕೆ.ವೆಂಕಟೇಶ್ ಕಾರ್ಯಕ್ರಮ ಉದ್ಘಾಟಸಿದರು. ಉಪಾಧ್ಯಕ್ಷ ರಮೇಶ್, ಸದಸ್ಯರಾದ ಮನೋಜ್, ಕಮಲಮ್ಮ, ಕುರ್ಷಿದ್‍ಬಾನು, ಜಯಮ್ಮ, ತಹಸೀಲ್ದಾರ್ ರಾಜಶೇಖರ್ ಮೂರ್ತಿ, ತಾ.ಪಂ. ಇಒ ದಯಾವತಿ, ಸಿಪಿಐ ರಾಜಶೇಖರ್, ಸಮಾಜ ಕಲ್ಯಾಣಾಧಿಕಾರಿ ಸೋಮಶೇಖರ್, ಬಿಇಒ ಮೀನಾಕ್ಷಿ, ಡಿ.ಕೆ.ಲಕ್ಷ್ಮಣ್‍ಗೌಡ, ಸುಂದ್ರೇಶ್ ಹೊಯ್ಸಳಲು, ಎಂ.ಎಸ್.ಮಹಮ್ಮದ್, ಜಾಕೀರ್ ಹುಸೇನ್, ಶಂಕರ್ ಬೆಟ್ಟಗೆರೆ, ಸುರೇಂದ್ರ ಉಗ್ಗೇಹಳ್ಳಿ, ಮಂಜುನಾಥ್ ಬೆಟ್ಟಗೆರೆ, ವಕೀಲ ದೇವರಾಜ್, ಪಿ.ಕೆ.ಮಂಜುನಾಥ್, ಸಿದ್ದೇಶ್ ಕೆಸವೊಳಲು, ಹರೀಶ್ ಸಬ್ಬೇನಹಳ್ಳಿ, ಕೆಳಗೂರು ರಮೇಶ್, ಸೀತಮ್ಮ, ಸರೋಜಾ, ಲೋಕೇಶ್ ಮತ್ತಿತರರಿದ್ದರು.

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ