ಕ್ಯಾಥೋಲಿಕ್ ಚರ್ಚ್ ನ 2,000 ವರ್ಷಗಳ ಇತಿಹಾಸದಲ್ಲಿ ಮೊದಲ ಅಮೆರಿಕನ್ ಮೂಲದ ಪೋಪ್  ಆಯ್ಕೆಯಾಗಿದ್ದಾರೆ.

ಅಮೇರಿಕಾದ ಕಾರ್ಡಿನಲ್ ರಾಬರ್ಟ್ ಫ್ರಾನ್ಸಿಸ್ ಪ್ರಿವೋಸ್ಟ್, ಓ.ಎಸ್.ಎ., ಅವರನ್ನು ಕಾಂಕ್ಲೇವ್ ನೂತನ ವಿಶ್ವಗುರುವಾಗಿ ಚುನಾಯಿಸಿದೆ. ಅವರು ಪೋಪ್ ಹದಿನಾಲ್ಕನೇ ಲಿಯೋ ಎಂದು ನಾಮಾಂಕಿತರಾಗಿದ್ದಾರೆ. ಇವರು ಅಮೇರಿಕಾದ ಮೊಟ್ಟ ಮೊದಲ ಪೋಪ್ ಆಗಿದ್ದಾರೆ.

69 ವರ್ಷದ ಕಾರ್ಡಿನಲ್ ರಾಬರ್ಟ್ ಫ್ರಾನ್ಸಿಸ್ ಪ್ರೆವೋಸ್ಟ್ ಅವರನ್ನು ರೋಮನ್‌ ಕ್ಯಾಥೋಲಿಕ್‌ ಚರ್ಚ್‌ನ 267 ನೇ ಪೋಪ್ ಆಗಿ ಆಯ್ಕೆ ಮಾಡಲಾಗಿದೆ. ಅವರು ಇನ್ನು ಮುಂದೆ ‘ಲಿಯೊ 14’ ಎಂಬ ಹೆಸರಿನಿಂದ ಕರೆಸಿಕೊಳ್ಳಲಿದ್ದಾರೆ. ಕ್ಯಾಥೋಲಿಕ್ ಚರ್ಚ್‌ನ ಎರಡು ಸಾವಿರ ವರ್ಷಗಳ ಇತಿಹಾಸದಲ್ಲಿ ಅಮೆರಿಕದ ಬಿಷಪ್‌ವೊಬ್ಬರು ಈ ಉನ್ನತ ಹುದ್ದೆಯನ್ನು ಅಲಂಕರಿಸಿದ್ದು ಇದೇ ಮೊದಲು.

1955ರ ಸೆಪ್ಟೆಂಬರ್‌ 14ರಂದು ಚಿಕಾಗೊದಲ್ಲಿ ಜನಿಸಿದ ರಾಬರ್ಟ್ ಫ್ರಾನ್ಸಿಸ್‌ ಲೂಯಿಸ್ ಮಾರಿಯಸ್ ಪ್ರಿವೋಸ್ಟ್ ಮತ್ತು ಸ್ಪ್ಯಾನಿಷ್ ಮೂಲದ ಮಿಲ್ಡ್ರೆಡ್ ಮಾರ್ಟಿನೆಜ್ ದಂಪತಿಗೆ ಜನಿಸಿದರು. ಅವರು ಆಗಸ್ಟಿನಿಯನ್ ಫಾದರ್ಸ್‌ನ ಮೈನರ್ ಸೆಮಿನರಿಯಲ್ಲಿ ಮತ್ತು ನಂತರ ಪೆನ್ಸಿಲ್ವೇನಿಯಾದ ವಿಲ್ಲನೋವಾ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡಿದ ಅವರು, 1977 ರಲ್ಲಿ ಗಣಿತದಲ್ಲಿ ಪದವಿ ಪಡೆದರು ಮತ್ತು ತತ್ವಶಾಸ್ತ್ರವನ್ನೂ ಸಹ ಇವರು ಅಭ್ಯಾಸ ಮಾಡಿದ್ದಾರೆ.

ರಾಬರ್ಟ್ ಫ್ರಾನ್ಸಿಸ್‌ ಅವರು ಪೆರು ದೇಶದಲ್ಲಿ ಎರಡು ದಶಕ ಸೇವೆ ಸಲ್ಲಿಸಿದ್ದಾರೆ. ಅಲ್ಲಿ ಬಿಷಪ್‌ ಆಗಿಯೂ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 2023ರಲ್ಲಿ ಅವರನ್ನು ವ್ಯಾಟಿಕನ್‌ನ ಕಾರ್ಡಿನಲ್‌ ಆಗಿ ನೇಮಕ ಮಾಡಿಕೊಳ್ಳಲಾಗಿತ್ತು.

ಸೇಂಟ್‌ ಪೀಟರ್ಸ್‌ ಸ್ಕ್ವೇರ್‌ನಲ್ಲಿ ಸೇರಿದ್ದ ಜನರನ್ನುದ್ದೇಶಿಸಿ ತಮ್ಮ ಚೊಚ್ಚಲ ಸಂದೇಶ ನೀಡಿದ ಅವರು, ‘ಜಗತ್ತಿನಲ್ಲಿ ಶಾಂತಿ ಸ್ಥಾಪನೆಗೆ ಎಲ್ಲರೂ ಪರಸ್ಪರ ಕೈಜೋಡಿಸಬೇಕು’ ಎಂದು ಕರೆ ನೀಡಿದರು. ‘ಸಂವಾದ, ಮಾತುಕತೆಗಳ ಮೂಲಕ ಸೇತುವೆ ನಿರ್ಮಿಸಿ ಎಲ್ಲರೂ ಪರಸ್ಪರ ಹತ್ತಿರವಾಗಬೇಕು. ಜಗತ್ತಿನಲ್ಲಿ ಸದಾ ಶಾಂತಿ ನೆಲೆಸಲಿ’ ಎಂದು ಹೇಳಿದರು.

ನೂತನ ಪೋಪ್‌ ಆಯ್ಕೆಯನ್ನು ಸೇಂಟ್‌ ಪೀಟರ್ಸ್ ಬೆಸಿಲಿಕಾದ ಬಾಲ್ಕನಿಯಿಂದ ಘೋಷಿಸಲಾಯಿತು. ವಿಶ್ವದ ನಾನಾ ದೇಶಗಳನ್ನು ಪ್ರತಿನಿಧಿಸುವ 133 ಕಾರ್ಡಿನಲ್‌ಗಳು ನೂತನ ಪೋಪ್ ಅವರನ್ನು ಆಯ್ಕೆ ಮಾಡಿದರು.

ಪೋಪ್‌ ಫ್ರಾನ್ಸಿಸ್ ಅವರು ಏಪ್ರಿಲ್ 21ರಂದು ನಿಧನರಾಗಿದ್ದರು. ನೂತನ ಪೋಪ್ ಆಯ್ಕೆಗೆ ಬುಧವಾರ ಮತದಾನ ಪ್ರಕ್ರಿಯೆ ಆರಂಭವಾಗಿತ್ತು.

ರೋಮನ್ ಕ್ಯಾಥೊಲಿಕ್ ಚರ್ಚ್‌ನ ನೂತನ ಪೋಪ್‌ ಆಗಿ ಆಯ್ಕೆಯಾದ ‘ಲಿಯೊ XIV’ ಅವರಿಗೆ ಭಾರತದ ನಾಗರಿಕರ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಶುಭಾಶಯ ಕೋರಿದ್ದಾರೆ.

ಪೋಪ್ ಲಿಯೋ 14 ಅವರಿಗೆ ಭಾರತದ ಜನತೆಯ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ತಿಳಿಸುತ್ತೇನೆ. ಶಾಂತಿ, ಸಾಮರಸ್ಯ, ಏಕತೆ ಮತ್ತು ಸೇವೆಯ ಆದರ್ಶಗಳನ್ನು ಮುನ್ನಡೆಸುವಲ್ಲಿ ಕ್ಯಾಥೊಲಿಕ್ ಚರ್ಚ್​ನಲ್ಲಿನ ಅವರ ನಾಯಕತ್ವವು ಪ್ರಾಮುಖ್ಯತೆ ಹೊಂದಿದೆ ಎಂದು ಪ್ರಧಾನಿ ಎಕ್ಸ್​ ಪೋಸ್ಟ್​ ಮಾಡಿದ್ದಾರೆ.

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ