ಥೈಲ್ಯಾಂಡ್ ನಲ್ಲಿ ನಡೆಯುತ್ತಿರುವ 17 ವರ್ಷದ ಒಳಗಿನ ವಯೋಮಿತಿಯ ಯುವತಿಯರ ವಾಲಿಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿರುವ ಕರ್ನಾಟಕ ತಂಡವನ್ನು ಮಲೆನಾಡಿನ ಹೆಮ್ಮೆಯ ವಾಲಿಬಾಲ್ ಪಟು ಜಿ.ಕೆ. ನಿಯಾತಿ ಮುನ್ನಡೆಸುತ್ತಿದ್ದಾರೆ.

ನಿಯಾತಿ ವಾಲಿಬಾಲ್ ಕ್ರೀಡೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು, ಶಾಲಾ ಹಂತ, ಜಿಲ್ಲಾ ಮಟ್ಟ, ರಾಜ್ಯಮಟ್ಟದಲ್ಲಿ ಅವರ ಪ್ರತಿಭೆಯನ್ನು ಗುರುತಿಸಿ ರಾಜ್ಯತಂಡದ ನಾಯಕಿಯಾಗಿ ಆಯ್ಕೆ ಮಾಡಲಾಗಿದೆ. ಇವರ ನಾಯಕತ್ವದಲ್ಲಿ ಕರ್ನಾಟಕ ತಂಡ ರಾಷ್ಟ್ರಮಟ್ಟದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.  ಇದೀಗ ನಿಯಾತಿ ಅಂತರಾಷ್ಟ್ರೀಯ ಮಟ್ಟದಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ.

ನಿಯಾತಿ ಯವರ ಆಟವನ್ನು ಗುರುತಿಸಿ ಅವರನ್ನು ರಾಷ್ಟ್ರೀಯ ತಂಡಕ್ಕೂ ಆಯ್ಕೆಮಾಡಲಾಗಿದೆ.

ಪ್ರಸ್ತುತ ಬೆಂಗಳೂರಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿರುವ ನಿಯಾತಿ ಯವರ ಸಕಲೇಶಪುರ ತಾಲ್ಲೂಕು ಹಾನುಬಾಳು ಹೋಬಳಿ ಅವರೇಕಾಡು ಗ್ರಾಮದ ದಿವಂಗತ ಸುಂದರಮ್ಮ ಗಿಡ್ಡೇಗೌಡ  ಅವರ ಮೊಮ್ಮಗಳು.

ಕುಮಾರಿ ನಿಯಾತಿ ಅವರ ತಂದೆ ಜೆ.ಡಿ.ಕುಮಾರಸ್ವಾಮಿ ಮೂಲತಃ ತೀರ್ಥಹಳ್ಳಿ ತಾಲ್ಲೂಕಿನ ಜಾವಗಲ್ ಗ್ರಾಮದವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇವರು ಸಹ ಉತ್ತಮ ವಾಲಿಬಾಲ್ ಪಟುವಾಗಿದ್ದು ಬೆಂಗಳೂರು ಅರ್ಬನ್ ಡಿಷ್ಟ್ರಿಕ್ಟ್ ವಾಲಿಬಾಲ್ ಅಸೋಷಿಯೇಷನ್ ಉಪಾಧ್ಯಕ್ಷರಾಗಿದ್ದಾರೆ.

ನಿಯಾತಿ ಯವರ ತಾಯಿ ಶ್ರೀಮತಿ ಅನಿತಾ ಅವರು ಥ್ರೋಬಾಲ್ ಕ್ರೀಡಾಪಟುವಾಗಿದ್ದು, ಈ ಹಿಂದೆ ಅವರೇಕಾಡು ತಂಡದ ಮೂಲಕ ಜಿಲ್ಲಾಮಟ್ಟ ಮತ್ತು ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.

ಹೀಗೆ ಕ್ರೀಡಾಕುಟುಂಬದ ಹಿನ್ನಲೆಯ ಜಿ.ಕೆ. ನಿಯಾತಿ ಇಂದು ರಾಷ್ಟ್ರಮಟ್ಟದಲ್ಲಿ ವಾಲಿಬಾಲ್ ಕ್ರೀಡೆಯಲ್ಲಿ ತನ್ನ ಛಾಪು ಮೂಡಿಸಿದ್ದು, ಇದೀಗ ಅಂತರಾಷ್ಟ್ರಿಯ ಮಟ್ಟದಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಅವರು ಈ ಪಂದ್ಯಾವಳಿಯಲ್ಲಿ ಉತ್ತಮ ಸಾಧನೆ ತೋರಿ ತಂಡವು ಪ್ರಶಸ್ತಿ ಜಯಿಸಿ ಬರಲಿ ಎಂದು ತೀರ್ಥಹಳ್ಳಿ ಜಾವಗಲ್ ಹಾಗೂ ಸಕಲೇಶಪುರ ಅವರೆಕಾಡು ಕುಟುಂಬದವರು, ಬಂಧುಗಳು ಮತ್ತು ಸ್ನೇಹಿತರು ಶುಭ ಹಾರೈಸಿದ್ದಾರೆ.

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ