2025ರ ಐಪಿಎಲ್ ಕ್ವಾಲಿಫೈಯರ್ 1ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ವಿರುದ್ಧ ಏಕಪಕ್ಷೀಯ ಗೆಲುವು ಸಾಧಿಸಿ ಈ ಸೀಸನ್​ನ ಮೊದಲ ತಂಡವಾಗಿ ಫೈನಲ್ ಪ್ರವೇಶಿಸಿದೆ. ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕೇವಲ 101 ರನ್‌ಗಳಿಗೆ ಆಲೌಟ್ ಆಯಿತು. ಆರ್‌ಸಿಬಿ ಸುಲಭವಾಗಿ ಗುರಿ ಮುಟ್ಟಿತು. ಇದು ಆರ್‌ಸಿಬಿಗೆ ಐಪಿಎಲ್‌ನಲ್ಲಿ ನಾಲ್ಕನೇ ಫೈನಲ್ ಪ್ರವೇಶ. ಇತ್ತ ಸೋತ ಪಂಜಾಬ್ ಎಲಿಮಿನೇಟರ್‌ನಲ್ಲಿ ಗೆದ್ದ ತಂಡವನ್ನು ಕ್ವಾಲಿಫೈಯರ್ 2ರಲ್ಲಿ ಎದುರಿಸಲಿದೆ.

ಪಂಜಾಬ್​ನ ಮುಲ್ಲನ್‌ಪುರದ ಮಹಾರಾಜ ಯದ್ವಿಂದರ್ ಸಿಂಗ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ   ಕ್ವಾಲಿಫೈಯರ್ 1 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್   ತಂಡಗಳು ಮುಖಾಮುಖಿಯಾಗಿದ್ದವು.   ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್, ಆರ್​ಸಿಬಿ ಬೌಲರ್​ಗಳ ಮಾರಕ ದಾಳಿಯ ಮುಂದೆ ಕೇವಲ 101 ರನ್​ಗಳಿಗೆ ಆಲೌಟ್ ಆಯಿತು. ಈ ಗುರಿಯನ್ನು ಆರ್​ಸಿಬಿ ಸುಲಭವಾಗಿ ಬೆನ್ನಟ್ಟಿತು. ಇನ್ನು ಆರ್​ಸಿಬಿ ವಿರುದ್ಧ ಸೋತಿರುವ ಪಂಜಾಬ್, ನಾಳೆ ನಡೆಯಲ್ಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡವನ್ನು, ಕ್ವಾಲಿಫೈಯರ್ 2 ರಲ್ಲಿ ಎದುರಿಸಲಿದೆ. ಆ ಪಂದ್ಯದಲ್ಲಿ ಗೆದ್ದ ತಂಡ ಬರುವ ಮಂಗಳವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಆರ್​ಸಿಬಿ ತಂಡವನ್ನು ಎದುರಿಸಲಿದೆ.

ಐಪಿಎಲ್ ಪ್ಲೇಆಫ್ ಇತಿಹಾಸದಲ್ಲಿ ಆರ್‌ಸಿಬಿ ಅತಿ ದೊಡ್ಡ ಗೆಲುವು ದಾಖಲಿಸಿದೆ. ರಜತ್ ಪಟಿದಾರ್ ಪಡೆ 60 ಎಸೆತಗಳ ಮೊದಲೇ ಈ ಪಂದ್ಯವನ್ನು ಗೆದ್ದುಕೊಂಡಿತು. ಕಳೆದ ವರ್ಷ ಕೆಕೆಆರ್ ತಂಡ ಚೆನ್ನೈ ತಂಡವನ್ನು 57 ಎಸೆತಗಳಲ್ಲಿ ಸೋಲಿಸಿತ್ತು. ಇದಕ್ಕೂ ಮೊದಲು ಕೆಕೆಆರ್ ತಂಡವು 38 ಎಸೆತಗಳು ಬಾಕಿ ಇರುವಂತೆಯೇ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿತ್ತು. 2017 ರ ಐಪಿಎಲ್​ನಲ್ಲಿ ಮುಂಬೈ  33 ಎಸೆತಗಳು ಬಾಕಿ ಇರುವಂತೆಯೇ ಗೆದಿದ್ದರೆ, 2008 ರಲ್ಲಿ ಚೆನ್ನೈ ತಂಡವು ಪಂಜಾಬ್ ತಂಡವನ್ನು 31 ಎಸೆತಗಳಿಂದ ಸೋಲಿಸಿತ್ತು.

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ