
ಮೂಡಿಗೆರೆ ಲೋಕವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಶಾಲಾಭಿರುದ್ಧಿ ಸಮಿತಿ ಮತ್ತು ಅರಣ್ಯ ಇಲಾಖೆಯ ಸಹಯೋಗದಲ್ಲಿ ವಿವಿಧ ಹಣ್ಣಿನ ಹಾಗೂ ನೆರಳಿನ ಗಿಡಗಳನ್ನು ನೆಡುವುದರ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಗಿಡ ನೆಡುವುದರಿಂದ ತಾಪಮಾನ ಕಡಿಮೆಯಾಗಿ ಪರಿಸರ ಸಮತೋಲನ ಕಾಪಾಡಬಹುದೆಂದು ಮುಖ್ಯ ಶಿಕ್ಷಕರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ SDMC ಅಧ್ಯಕ್ಷರಾದ ರಘು ಲೋಕವಳ್ಳಿ. ಅರಣ್ಯ ಇಲಾಖೆ ಅಧಿಕಾರಿಗಳಾದ ಅಶ್ವಥ್. ಉಮೇಶ್. ಶಾಲಾ ಮುಖ್ಯ ಶಿಕ್ಷಕರಾದ ನವೀನ್ ಬಿ. ಆರ್. ಸಹ ಶಿಕ್ಷಕರಾದ ರೇಣುಕಾ.ಮಂಜುಳ ಮತ್ತು ಗ್ರಾಮಸ್ಥರಾದ ಲೋಕವಳ್ಳಿ ರಮೇಶ್ .ಪ್ರದೀಪ್. ಕಾರ್ತಿಕ್.ಸುನೀಲ್. ಕರ್ಣ. ಪ್ರಶಾಂತ್. ಶ್ರೀಕೃತ್. ಮಂಜುನಾಥ್.ಗುರು. ಮತ್ತು ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.