
ಮೂಡಿಗೆರೆ ತಾಲೂಕು ಹೋಂಸ್ಟೇ ಮಾಲೀಕರ ಸಂಘದ ನೂತನ ಅಧ್ಯಕ್ಷರಾಗಿ ಜಿ.ಎಂ ಜಗದೀಶ್(ಗುತ್ತಿ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸೋಮವಾರ ಮೂಡಿಗೆರೆ ಸಮೀಪದ ಬಿದರಹಳ್ಳಿ ಕ್ಯಾಪ್ರಿ ರೆಟ್ರೀಟ್ ನಲ್ಲಿ ನಡೆದ ತಾಲೂಕು ಹೋಂಸ್ಟೇ ಮಾಲೀಕರ ಸಂಘದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ರಂಜನ್ ಅಜಿತ್ ಕುಮಾರ್, ನೇಮಿರಾಜ್ ಜಪದಕಲ್ಲು, ಪ್ರಧಾನ ಕಾರ್ಯದರ್ಶಿಯಾಗಿ ರಾಘವೇಂದ್ರ ಕೆಸವಳಲು, ಖಜಾಂಚಿಯಾಗಿ ಸತೀಶ್ ಬಾಳೆಹಳ್ಳಿ, ಸಹ ಕಾರ್ಯದರ್ಶಿಯಾಗಿ ದೀಕ್ಷಿತ್ ಚಿಪ್ರಗುತ್ತಿ, ನಿರ್ದೇಶಕರಾಗಿ ಕಾರ್ತಿಕ್ ಪಟದೂರು, ವಿಕಾಸ್ ಕೆ ವಿ, ಸಂಜಯ್ ಕೊಟ್ಟಿಗೆಹಾರ, ಪವಿತ್ರ ಎನ್ ಸಿ, ಪ್ರಶಾಂತ್ ಬಿ ಆರ್ ವರನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿ ಎಂ ಜಗದೀಶ್ ತಾಲೂಕಿನಲ್ಲಿರುವ ಎಲ್ಲಾ ಹೋಂಸ್ಟೇಗಳು ಸಂಘದಲ್ಲಿ ನೋಂದಣಿ ಮಾಡಿಕೊಳ್ಳುವಂತೆ ತಿಳಿಸಿದರು. ಪ್ರವಾಸೋದ್ಯಮ ಇಲಾಖೆಯಿಂದ ನೊಂದಣಿ ಆಗದೆ ಹೋಂ ಸ್ಟೇ ನಡೆಸುತ್ತಿರುವರ ಬಗ್ಗೆ ಪತ್ತೆ ಹಚ್ಚಿ ದೂರು ನೀಡಲಾಗುವುದು. ಅನಧಿಕೃತ ಹೋಂಸ್ಟೇಗಳು ಯಾವುದಾದರೂ ಇದ್ದಲ್ಲಿ ಕೂಡಲೇ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯ ಎಂದರು.
ಸಭೆಯಲ್ಲಿ ಸಂಜಯ್ ಕೊಟ್ಟಿಗೆಹಾರ ಸ್ವಾಗತಿಸಿ. ದೀಕ್ಷಿತ್ ಚಿಪ್ರಗುತ್ತಿ ವಂದನಾರ್ಪಣೆ ಮಾಡಿದರು