
ಮೂಡಿಗೆರೆ ಹಿಂದೂ ಕಾರ್ಯಕರ್ತರು ಮಂಗಳೂರಿನಲ್ಲಿ ಹತ್ಯೆಯಾದ ಹಿಂದೂ ಕಾರ್ಯಕರ್ತ ಸಹಾಸ್ ಶೆಟ್ಟಿ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಮೂಡಿಗೆರೆ ಪಟ್ಟಣ ಪಂಚಾಯಿತಿ ಸದಸ್ಯ ಅನುಕುಮಾರ್ ಮಾತನಾಡಿ’ ಸುಹಾಸ್ ಶೆಟ್ಟಿ ಹತ್ಯೆಯ ಪ್ರಕರಣವನ್ನು ಕೇಂದ್ರ ಸರ್ಕಾರ ಎನ್ ಐಎ ತನಿಖೆಗೆ ವಹಿಸಿರುವುದು ಸ್ವಾಗತಾರ್ಹ ಕಾರ್ಯವಾಗಿದೆ. ಹಿಂದೂ ಕಾರ್ಯಕರ್ತರ ಕೊಲೆಯಾಗುತ್ತಿರುವುದು ಬೇಸರದ ಸಂಗತಿಯಾಗಿದೆ. ಮಂಗಳೂರು ಭಾಗದಲ್ಲಿ ಇಂತಹ ದುಷ್ಕೃತ್ಯಗಳು ನಿಲ್ಲಬೇಕು. ಕೋಮು ಸೌಹಾರ್ದತೆಯು ಜಿಲ್ಲೆಯಲ್ಲಿ ನೆಲೆಸಬೇಕು’ ಎಂದರು.
ಮುಖಂಡ ಸಂಜಯ್ ಗೌಡ ಮಾತನಾಡಿ’ ಸುಹಾಸ್ ಶೆಟ್ಟಿ ದಕ್ಷ ಮುಖಂಡರಾಗಿದ್ದರು. ಅವರ ಸಾವು ಹಿಂದೂ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬಕ್ಕೆ ಹಿಂದೂ ಕಾರ್ಯಕರ್ತರು ಸ್ಪಂಧಿಸಲು ಸದಾ ಸಿದ್ದರಿದ್ದೇವೆ’ ಎಂದರು.
ಸುಹಾಸ್ ಶೆಟ್ಟಿ ಮನೆಯವರಿಗೆ ಕಾರ್ಯಕರ್ತರ ವತಿಯಿಂದ ಧನ ಸಹಾಯ ಮಾಡಲಾಯಿತು.
ಈ ಸಂದರ್ಭದಲ್ಲಿ ತ್ರಿಪುರ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ರಘು, ಬಿಜೆಪಿ ಮುಖಂಡರಾದ ಕನ್ನೇಹಳ್ಳಿ ಭರತ್, ಜಿಲ್ಲಾ ಎಸ್ ಸಿ ಮೋರ್ಚಾ ಮುಖಂಡ ಸುಜೀತ್, ದೇವರಾಜ್, ಕೆಂಪೇಗೌಡ ಒಕ್ಕಲಿಗರ ಸಂಘದ ಮುಖಂಡ ಬ್ರಿಜೇಶ್ ಕಡಿದಾಳ್, ಪ್ರಸಾದ್ ಬಕ್ಕಿ, ಜೆಡಿಎಸ್ ಮುಖಂಡರಾದ ಸಂಪತ್, ಹಿಂದೂ ಕಾರ್ಯಕರ್ತರಾದ ಮಧು ಹೆಗ್ಗರವಳ್ಳಿ, ಕಾರ್ತಿಕ್ ಪಟ್ಟದೂರು, ಎ.ಆರ್.ಅಭಿಲಾಷ್, ವಿನಯ್, ಸಂತೋಷ್ ಮೇಕನಗದ್ದೆ, ರಾಜ್ ಮೋಹನ್, ಉತ್ತಮ್, ಪ್ರದೀಪ್ ಬಿನ್ನಡಿ ಹಾಗೂ 70ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರು ಇದ್ದರು