
ಮೂಡಿಗೆರೆ ಜೇಸಿಐ ವತಿಯಿಂದ ಹತ್ತನೇ ತರಗತಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಶತಾಯುಷಿ ಹಾಲಮ್ಮನವರಿಗೆ ಸನ್ಮಾನಿಸಲಾಯಿತು.
ಕಳೆದ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದ ಮೂಡಿಗೆರೆ ಬೆಥನಿ ಶಾಲೆಯ ವಿದ್ಯಾರ್ಥಿಗಳಾದ ಅಪೇಕ್ಷ, ರಚನ ಮತ್ತು ಇಂದುಶ್ರೀ ಇವರುಗಳಿಗೆ ಸನ್ಮಾನಿಸಲಾಯಿತು.
101 ವರ್ಷ ತುಂಬಿದ ಮೂಡಿಗೆರೆ ತಾಲ್ಲೂಕು ಬಾಳೂರು ಹೋಬಳಿ, ಹಾದೋನಿ ಗ್ರಾಮದ ದಿ.ಪುಟ್ಟೇಗೌಡರ ಧರ್ಮಪತ್ನಿ ಮತ್ತು ಮೂಡಿಗೆರೆ ಜೇಸಿಐ ಅಧ್ಯಕ್ಷ ಪ್ರದೀಪ್ ಕುನ್ನಹಳ್ಳಿಯವರ ಅಜ್ಜಿಯವರಾದ ಶ್ರೀಮತಿ ಹಾಲಮ್ಮನವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಜೇಸಿಐ ಮಾಜಿ ಅಧ್ಯಕ್ಷ ನಯನಾ ಕಣಚೂರು ಭಾಗವಹಿಸಿ ಮಾತನಾಡಿ ; ಜೇಸಿಐ ಸಂಸ್ಥೆಯು ವಿದ್ಯಾರ್ಥಿ ಮತ್ತು ಯುವಜನರಲ್ಲಿ ಸಕಾರಾತ್ಮಕ ವ್ಯಕ್ತಿತ್ವವನ್ನು ಪ್ರೇರೇಪಿಸುವ ಜಾಗತಿಕ ಮಟ್ಟದ ಉತ್ತಮ ಸಂಸ್ಥೆಯಾಗಿದೆ. ಇಲ್ಲಿ ಹಲವಾರು ತರಬೇತಿಗಳ ಮೂಲಕ ವ್ಯಕ್ತಿತ್ವ ವಿಕಸನಕ್ಕೆ ಮಾರ್ಗದರ್ಶನ ಮಾಡಲಾಗುತ್ತದೆ. ಜೇಸಿಐ ಸಂಸ್ಥೆಯಿಂದ ವೈಯುಕ್ತಿಕವಾಗಿ ನನಗೆ ಬಹಳಷ್ಟು ಉತ್ತಮ ಅವಕಾಶಗಳು ಒದಗಿ ಬಂದಿವೆ. ಯುವಕರು ತಮಗೆ ಸಿಗುವ ಸಣ್ಣ ಸಣ್ಣ ಅವಕಾಶಗಳನ್ನು ಮೆಟ್ಟಿಲು ಮಾಡಿಕೊಂಡು ಜೀವನದಲ್ಲಿ ಸಾಧನೆಯೆಡೆಗೆ ಸಾಗಬೇಕು ಎಂದು ಕಿವಿಮಾತು ಹೇಳಿದರು.
ಜೇಸಿಐ ಮೂಡಿಗೆರೆ ಅಧ್ಯಕ್ಷ ಪ್ರದೀಪ್ ಕುನ್ನಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವ ಅಧ್ಯಕ್ಷ ಹಾಗೂ ಜೇಸಿಐ ವಲಯ ಕಾರ್ಯದರ್ಶಿ ಸುಪ್ರೀತ್ ಕಾರಬೈಲ್, ಜೇಸಿಐ ಮೂಡಿಗೆರೆ ಕಾರ್ಯದರ್ಶಿ ಹಮೀದ್ ಸಬ್ಬೇನಹಳ್ಳಿ, ಕಾರ್ಯಕ್ರಮ ನಿರ್ದೇಶಕಿ ಕಮಲಾ ಸತೀಶ್, ಜೆಜೆಸಿ ಕಾರ್ಯದರ್ಶಿ ಈಶಾನ್ವಿ, ಕೃತಿ ಪ್ರದೀಪ್ ಸೇರಿದಂತೆ ಜೇಸಿಐ ಮತ್ತು ಲೇಡಿ ಜೇಸಿ ಪೂರ್ವಾಧ್ಯಕ್ಷರು, ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.