
ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ಲೀಜನ್ ಮೂಡಿಗೆರೆ, ವೈದ್ಯಕೀಯ ಮಹಾವಿದ್ಯಾಲಯ ಚಿಕ್ಕಮಗಳೂರು ಹಾಗೂ ತೋಟಗಾರಿಕಾ ಮಹಾವಿದ್ಯಾಲಯ ಮೂಡಿಗೆರೆ ವತಿಯಿಂದ ಜೂನ್ 22ರಂದು ಮೂಡಿಗೆರೆ ಪಟ್ಟಣದ ಜೇಸಿ ಭವನದಲ್ಲಿ ಬೆಳಗ್ಗೆ 10ಗಂಟೆಗೆ ವೃತ್ತಿ ಶಿಕ್ಷಣ ಮಾರ್ಗದರ್ಶಿ ಕಾರ್ಯಗಾರ ಏರ್ಪಡಿಸಲಾಗಿದೆ ಎಂದು ಸೀನಿಯರ್ ಛೇಂಬರ್ ಸಂಸ್ಥೆಯ ಅಧ್ಯಕ್ಷ ಬಿ.ಬಸವರಾಜ್ ಹೇಳಿದರು.
ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಗಾರದಲ್ಲಿ ಮೂಡಿಗೆರೆ ಬಾಲಿಕಾ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಚ್.ಪೂಣೇಶ್ ಅವರು, ಪ್ರಸಕ್ತ ಸಾಲಿನಲ್ಲಿ ಸಿಇಟಿ ಮತ್ತು ನೀಟ್, ಕಾಮೆಡ್-ಕೆ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಐಚ್ಚಿಕ ಕೋರ್ಸ್, ಸಿಇಟಿ ಮುಖಾಂತರ ಸೀಟ್‍ಗಳ ಆಯ್ಕೆ ಪ್ರಕ್ರಿಯೆಗಳ ಬಗ್ಗೆ ಮಾರ್ಗದರ್ಶನ ನೀಡಲಿದ್ದಾರೆ. ಚಿಕ್ಕಮಗಳೂರಿನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡಾ. ಆರ್.ಲೋಹಿತ್ ಕುಮಾರ್ ಅವರು, ಯುಜಿ ನೀಟ್ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಕೋರ್ಸ್‍ಗಳ ಆಯ್ಕೆ ಹಾಗೂ ಎಂಬಿಬಿಎಸ್, ಬಿ.ಡಿಎಸ್, ನರ್ಸಿಂಗ್, ಅಲೈಡ್ ಹೆಲ್ತ್ ಸೈನ್ಸ್, ಪ್ಯಾರಾ ಮೆಡಿಕಲ್ ಕೋರ್ಸ್ ಬಗ್ಗೆ ಮಾಹಿತಿ ನೀಡಲಿದ್ದಾರೆಂದು ಹೇಳಿದರು.
ತೋಟಗಾರಿಕಾ ಕಾಲೇಜಿನ ಡಾ. ವೈ.ಕಾಂತರಾಜ್ ಅವರು, ಬಿಎಸ್ಸಿ, ಆಗ್ರಿ, ಬಿವಿಎಸ್ಸಿ, ಹಾರ್ಟಿಕಲ್ಚರ್, ಫಿಶರೀಸ್, ಡೈರಿ ಸೈನ್ಸ್, ಫುಡ್ ಟೆಕ್ನಾಲಜಿ, ಫಾರೆಸ್ಟರಿ ಹಾಗೂ ಇತರೆ ಕೋರ್ಸ್‍ಗಳ ಬಗ್ಗೆ, ಬೇಲೂರಿನ ಸರಕಾರಿ ಪಾಲಿಟೆಕ್ನಿಕ್‍ನ ಹಿರಿಯ ಶ್ರೇಣಿ ಉಪನ್ಯಾಸಕಿ ನಾಗಶ್ರೀ ತ್ಯಾಗರಾಜ್ ಅವರು, ಡಿಪ್ಲಮೋ ಎಂಜಿನಿಯರಿಂಗ್ ಕೋರ್ಸ್‍ಗಳ ಬಗ್ಗೆ, ಹಾಸನದ ನೌಫೀಸ್ ಕಾಲೇಜ್ ಆಫ್ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕಿ ಡಾ.ಎ.ಎನ್.ಮೈನಾ ಅವರು, ತಾಂತ್ರಿಕ ಶಿಕ್ಷಣ ಎಂಜಿನಿಯರಿಂಗ್ ವಿಭಾಗದ ಬಗ್ಗೆ ಮಾಹಿತಿ ನೀಡಲಿದ್ದಾರೆ.
ವಿದ್ಯಾರ್ಥಿಗಳ ಗೊಂದಲವನ್ನು ಪರಿಹರಿಸಿಕೊಳ್ಳಲು ಇದೊಂದು ಸುವರ್ಣಾವಕಾಶವಾಗಿದೆ. ಕಾರ್ಯಾಗಾರದಲ್ಲಿ ಭಾಗವಹಿಸಲು ಪೋಷಕರಿಗೂ ಅವಕಾಶವಿರುತ್ತದೆ. ವಿದ್ಯಾರ್ಥಿಗಳು ಜೂನ್ 20 ಸಂಜೆ 6 ಗಂಟೆಯೊಳಗೆ ತಮ್ಮ ಹೆಸರು ನೋಂದಾಯಿಸಿ ಕಾರ್ಯಗಾರದ ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನವಿ ಮಾಡಿದ ಅವರು, ಮೊದಲು ನೊಂದಾಯಿಸಿದ 100 ಮಂದಿ ವಿದ್ಯಾರ್ಥಿಗಳಿಗೆ ಅವಕಾಶವಿರುತ್ತದೆ.
ಭಾಗವಹಿಸಲಿಚ್ಚಿಸುವವರು 9480264021, 9448156915, 9482322784, 9480511900, 9482393757 ಸಂಖ್ಯೆಗಳಿಗೆ ಕರೆ ಸಂಪರ್ಕಿಸಬೇಕೆಂದು ಮನವಿ ಮಾಡಿದರು.
ಸಂಸ್ಥೆಯ ಖಚಾಂಚಿ ಬಿ.ಎನ್.ಮನ್‍ಮೋಹನ್, ನಿರ್ದೇಶಕರಾದ ಅತುಲ್‍ರಾವ್, ನಯನಾ ಕಣಚೂರು, ಗಣೇಶ್ ಮಗ್ಗಲಮಕ್ಕಿ, ಎಂ.ಡಿ.ವಿಜಯ್‍ಕುಮಾರ್, ಕೆ.ಎನ್.ರವಿ ಉಪಸ್ಥಿತರಿದ್ದರು.