
10 ನೇ ಅಖಿಲ ಭಾರತೀಯ ಪೊಲೀಸ್ ಜೂಡೋ ಕ್ಲಸ್ಟರ್ -2025
ಇತ್ತೀಚೆಗೆ ಜಮ್ಮು ಕಾಶ್ಮೀರದ ಶ್ರೀನಗರದ ಶೇರ್.ಐ.ಕಾಶ್ಮೀರ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ “ಪೆಂಕ್ ಸಿಲಾತ್” ಕ್ರೀಡೆಯಲ್ಲಿ ಬಸವರಾಜ್ ಪಾಸ್ಚಪುರ, ಪೋಲಿಸ್ ಇನ್ಸ್ಪೆಕ್ಟರ್ ISD , ಬೆಂಗಳೂರು ಹಾಗೂ ಗಿರೀಶ್ ಟಿ.ಎಸ್. ಹೆಡ್ ಕಾನ್ಸ್ಟೇಬಲ್ DCRE ಚಿಕ್ಕಮಗಳೂರು ಜಿಲ್ಲೆ ಇವರು ಭಾಗವಹಿಸಿ ಬೆಳ್ಳಿ ಪದಕ ಪಡೆದಿರುತ್ತಾರೆ.
ವಿಶೇಷವಾಗಿ ಇವರು ಸತತವಾಗಿ ಮೂರನೇ ಬಾರಿ ಅಖಿಲ ಭಾರತೀಯ ಪೊಲೀಸ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ನಮ್ಮ ರಾಜ್ಯ ಪೊಲೀಸ್ ಹೆಮ್ಮೆಯ ಕ್ರೀಡಾಪಟುಗಳಾಗಿರುತ್ತಾರೆ.
ಸತತ ಮೂರನೇ ಬಾರಿ ಅಖಿಲ ಭಾರತೀಯ ಪೊಲೀಸ್ ಕ್ರೀಡಾಕೂಟದಲ್ಲಿ ಪದಕ ಗೆದ್ದು ರಾಜ್ಯದ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಪಸರಿಸಿದ ನಮ್ಮ ಹೆಮ್ಮೆಯ ಪೊಲೀಸ್ ಕ್ರೀಡಾಪಟುಗಳಿಗೆ ರಾಜ್ಯದ ಹಲವು ಗಣ್ಯರು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.