ಮೂಡಿಗೆರೆ ತಾಲ್ಲೂಕು ಪ್ರಾಥಮಿಕ ಕೃಷಿ ಮತ್ತು ವ್ಯವಸಾಯ ಉತ್ಪನ್ನ ಸಹಕಾರ ಸಂಘದ (ಟಿಎಪಿಸಿಎಂಎಸ್) ನಿರ್ದೇಶಕರ ಆಯ್ಕೆಗಾಗಿ ನವೆಂಬರ್ 2ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಗುರುವಾರ ನಾಮಪತ್ರ ಸಲ್ಲಿಸಿದರು.
ನೂರಾರು ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ಸಾಗಿದ ಅಭ್ಯರ್ಥಿಗಳು ಟಿಎಪಿಸಿಎಂಎಸ್ ಸಭಾಂಗಣದಲ್ಲಿ ಚುನಾವಣಾ ಅಧಿಕಾರಿಗಳಿಗೆ ತಮ್ಮ ನಾಮಪತ್ರ ಸಲ್ಲಿಸಿದರು
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಮತ್ತು ಮೈತ್ರಿ ಅಭ್ಯರ್ಥಿ ಪಿ.ಪಿ. ಅನುಕುಮಾರ್ ; ಮತದಾರರು ನಾವು ಮಾಡಿರುವ ಸಾಧನೆಗಳನ್ನು ಗಮನಿಸಿ ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದ್ದು ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಒಮ್ಮತದಿಂದ ಚುನಾವಣೆ ಎದುರಿಸುತ್ತಿದ್ದೇವೆ ಎರಡು ಪಕ್ಷಗಳ ಕಾರ್ಯಕರ್ತರು ನೂರಕ್ಕೆ ನೂರರಷ್ಟು ಶ್ರಮ ಹಾಕುತ್ತಿದ್ದಾರೆ ಮೈತ್ರಿ ಅಭ್ಯರ್ಥಿಗಳು ಎಲ್ಲಾ ಎಂಟು ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದರು.






ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಗಳಾಗಿ ಪಿ.ಜಿ ಅನು ಕುಮಾರ್, ಹೆಚ್ಎಸ್ ಮಂಜುನಾಥ್, ಎಂ. ಕೆ ಚಂದ್ರೇಶ್, ಪುಟ್ಟಮ್ಮ(ಗೌರಮ್ಮ), ವಿದ್ಯಾ ರಾಜು, ಶೇಖರ್ ಪೂಜಾರಿ, ಗಣೇಶ್ ಮತ್ತು ರಮೇಶ್ ನಾಮಪತ್ರ ಸಲ್ಲಿಸಿದರು
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಉಪಸಭಾಪತಿ ಎಂ ಕೆ ಪ್ರಾಣೇಶ್, ಮುಖಂಡರಾದ ಹಳಸೆ ಶಿವಣ್ಣ, ಗಜೇಂದ್ರ ತರುವೆ, ದೀಪಕ್ ದೊಡ್ಡಯ್ಯ, ಲಕ್ಷ್ಮಣ್ ಗೌಡ, ಡಿಬಿ ಅಶೋಕ್, ಡಿಬಿ ಜಯಪ್ರಕಾಶ್, ಜೆಎಸ್ ರಘು, ಬಿ.ಎಂ. ಬೈರೇಗೌಡ, ಉತ್ತಮ್ ಕುಮಾರ್, ಪಿ.ಕೆ.ನಾಗೇಶ್, ಎಸ್.ಪಿ. ರಾಜು, ಹೆಚ್.ಡಿ.ರಾಮೇಗೌಡ, ಭರತ್ ಬಾಳೂರು, ಮಗ್ಗಲಮಕ್ಕಿ ರವಿ, ರೆಹಮಾನ್, ಲೋಹಿತ್ ಬಿದರಹಳ್ಳಿ, ಮಂಜು ಪಟೇಲ್, ಕೆ.ಆರ್. ಶಿವಾನಂದ, ರಘು ಪಟ್ಟದೂರು, ಧನಿಕ್ ಕೋಡದಿಣ್ಣೆ, ಪ್ರಶಾಂತ್ ಬಿಳಗಳ, ಬೆಟ್ಟಗೆರೆ ಮಂಜುನಾಥ್ ಮುಂತಾದವರು ಉಪಸಿದ್ಧರಿದ್ದರು



