November 1, 2025

 

 

ದೇಶಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ನಡೆಸುವುದಾಗಿ ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದೆ.

ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್, ಬಿಹಾರದಲ್ಲಿ ನಡೆಸಿದ SIR ಯಶಸ್ವಿಯಾಗಿದೆ. ಈಗ ಎರಡನೇ ಹಂತದಲ್ಲಿ ಮುಂದೆ 1-2 ವರ್ಷದ ಒಳಗಡೆ  ಚುನಾವಣೆ ನಡೆಯಲಿರುವ  12 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ SIR ಶುರುವಾಗಲಿದೆ ಎಂದು ತಿಳಿಸಿದರು.

ಕಳೆದ 20 ವರ್ಷದ ಅವಧಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಸಾಕಷ್ಟು ಮತದಾರರ ವಿಳಾಸ ಬದಲಾವಣೆಯಾಗಿರುತ್ತದೆ, ವಿದೇಶಿಗರು ಪಟ್ಟಿಯಲ್ಲಿ ಸೇರಿರುತ್ತಾರೆ. ಕೆಲವರು ಮರಣದ ಬಳಿಕವೂ ಪಟ್ಟಿಯಲ್ಲಿ ಹೆಸರು ಉಳಿದುಕೊಂಡಿರುತ್ತದೆ. ಇದನ್ನು ತೆರವು ಮಾಡಲು SIR ಅಗತ್ಯವಿದೆ ಎಂದು ಆಯೋಗದ ನಿರ್ಧಾರವನ್ನು ಸಮರ್ಥಿಸಿಕೊಂಡರು.

ಎಲ್ಲೆಲ್ಲಿ ಎಸ್‌ಐಆರ್‌?

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಗೋವಾ, ಪುದುಚೇರಿ, ಛತ್ತೀಸ್‌ಗಢ, ಗುಜರಾತ್, ಕೇರಳ, ಮಧ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಲಕ್ಷದ್ವೀಪಗಳಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ನಡೆಯಲಿದೆ.

ರಾಷ್ಟ್ರವ್ಯಾಪಿ SIRನ ಮೊದಲ ಹಂತದಲ್ಲಿ ಒಳಗೊಳ್ಳುವ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮತದಾರರ ಪಟ್ಟಿಗಳನ್ನು ಸೋಮವಾರ ಮಧ್ಯರಾತ್ರಿ ಸ್ಥಗಿತಗೊಳಿಸಲಾಗುವುದು ಎಂದು ಅವರು ತಿಳಿಸಿದರು.

“ಆ ಪಟ್ಟಿಯಲ್ಲಿರುವ ಎಲ್ಲಾ ಮತದಾರರಿಗೆ ಬಿಎಲ್‌ಒಗಳು ವಿಶಿಷ್ಟ ಎಣಿಕೆ ನಮೂನೆಗಳನ್ನು ನೀಡುತ್ತಾರೆ. ಈ ಎಣಿಕೆ ನಮೂನೆಗಳು ಪ್ರಸ್ತುತ ಮತದಾರರ ಪಟ್ಟಿಯಿಂದ ಅಗತ್ಯವಿರುವ ಎಲ್ಲಾ ವಿವರಗಳನ್ನು ಹೊಂದಿರುತ್ತವೆ. ಬಿಎಲ್‌ಒಗಳು ಅಸ್ತಿತ್ವದಲ್ಲಿರುವ ಮತದಾರರಿಗೆ ಫಾರ್ಮ್‌ಗಳನ್ನು ವಿತರಿಸಲು ಪ್ರಾರಂಭಿಸಿದ ನಂತರ, ಎಣಿಕೆ ನಮೂನೆಗಳಲ್ಲಿ ಹೆಸರುಗಳನ್ನು ಹೊಂದಿರುವ ಎಲ್ಲರೂ ತಮ್ಮ ಹೆಸರುಗಳು 2003ರ ಮತದಾರರ ಪಟ್ಟಿಯಲ್ಲಿವೆಯೇ ಎಂದು ಪರಿಶೀಲಿಸಬೇಕು. ಇದೆ ಎಂದಾದರೆ, ಅವರು ಯಾವುದೇ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿಲ್ಲ” ಎಂದು ಸಿಇಸಿ ಹೇಳಿದರು.

Leave a Reply

Your email address will not be published. Required fields are marked *

Related News

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ