 
                
ಪತಿ ಪತ್ನಿಯ ನಡುವಿನ ನಿತ್ಯ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಡೆದಿದೆ.
ಪತ್ನಿಯನ್ನು ಕಬ್ಬೀಣದ ರಾಡ್ ನಿಂದ ಹೊಡೆದು ಕೊಲೆ ಮಾಡಲಾಗಿದೆ.
ಕಳಸ ತಾಲ್ಲೂಕಿನ ಮರಸಣಿಗೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮರಸಣಿಗೆ ಸಮೀಪದ ಯಮಗೊಂಡ ಎಸ್ಟೇಟ್ ಕೂಲಿ ಲೈನಿನಲ್ಲಿ ಘಟನೆ ನಡೆದಿದೆ.
ಮಂಜುಳ (32) ಮೃತ ದುರ್ದೈವಿ, ರಕ್ತಸ್ರಾವದಿಂದ ಬಳಲುತ್ತಿದ್ದ ಮಂಜುಳಾನ್ನ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.
ಮಗುವಿನ ಎದುರೇ ತಾಯಿಯನ್ನ ಕೊಂದ ಪಾಪಿ ಗಂಡ.
ಯಮಗೊಂಡ ಕಾಫಿತೋಟದ ಲೈನ್ ಮನೆಯಲ್ಲಿ ವಾಸವಿದ್ದ ಮಂಜುಳಾ ಹಾಗೂ ಆತನ ಪತಿ ನಿತ್ಯ ಜಗಳ ಆಡೋದ ನೋಡಿ ಕೆಲಸಕ್ಕೆ ಬರಬೇಡಿ ಎಂದಿದ್ದ ತೋಟದ ರೈಟರ್, ತೋಟದ ಕಾರ್ಮಿಕರ ಮನೆಯಲ್ಲಿ ಗಂಡ ಹೆಂಡತಿ ಜಗಳ ತಾರಕ್ಕಕ್ಕೆರಿ ಪತಿ ಕಬ್ಬಿಣದ ರಾಡ್ ನಿಂದ ಹೊಡೆದು ಪತ್ನಿಯನ್ನು ಕೊಲೆ ಮಾಡಿದ್ದಾನೆ.
ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


 
 

 
                                                         
                                                         
                                                         
                                                         
                                                         
                                                        