ಮೂಡಿಗೆರೆಯ ಬಿದರಳ್ಳಿ ಗ್ರಾಮದ 80 ವರ್ಷ ಪ್ರಾಯದ ಲಕ್ಷ್ಮಮ್ಮ ಎಂಬವರಿಗೆ ಯಾರು ಇಲ್ಲದೆ ಅನಾಥರಾಗಿದ್ದು ಹಾಗೂ ಕಾಯಿಲೆಯಿಂದ ಬಳಲುತ್ತಿದ್ದರು.
ಇವರನ್ನು ಮೂಡಿಗೆರೆಯ ಎಂಜಿಎಂ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಿ ನೋಡಲು ಯಾರು ಇಲ್ಲದ ಕಾರಣ ತುಮಕೂರು ಆಶ್ರಮ ದಲ್ಲಿಯೇ ಚಿಕಿತ್ಸೆ ಕೊಡುವ ಆಶ್ರಮಕ್ಕೆ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆ ಯ ಪಿಶ್ ಮೊನು ಅಬ್ದುಲ್ ರೆಹಮಾನ್, ಮೂರ್ತಿ, ಹಸನ್ ಅಲಿ ಅವರು ಆಶ್ರಮಕ್ಕೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.
ಇವರಿಗೆ ಗ್ರಾಮದ ಬಿ.ಎಸ್. ಜಯರಾಮ್ ಗೌಡ, ಬಿ.ಎಂ. ಬೈರೇಗೌಡರ, ಬಿ.ಎನ್. ಜಯಂತ್ ಗೌಡ, ಯೋಗೇಶ್ ಗ್ರಾಮ ಪಂಚಾಯತಿ ಅಧ್ಯಕ್ಷರು, ಆಟೋ ಗಣೇಶ್ ಮುಂತಾದವರು ಸಹಕಾರ ನೀಡಿದ್ದಾರೆ.
ಸಮಾಜಸೇವಕರ ಕಾರ್ಯಕ್ಕೆ ಗ್ರಾಮಸ್ಥರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.



