November 1, 2025

 

 

ಸವಿತಾ ಸಮಾಜದ ಬಂಧುಗಳು ನನ್ನ ನಡೆ ನುಡಿಯನ್ನು ದಶಕಗಳಿಂದಲೂ ಬಲ್ಲವರಾಗಿದ್ದು, ನನ್ನ ವ್ಯಕ್ತಿತ್ವದ ಅರಿವು ಅವರಿಗಿದೆ. ಆದ್ದರಿಂದಲೇ ರಾಜಕಾರಣದ ಕೆಸರೇರಚಾಟಕ್ಕೆ ಕಿವಿಕೊಡದೆ ಸವಿತಾ ಸಮಾಜದ ಮುಖಂಡರುಗಳು ನನ್ನ ಮನೆಗೆ ಬಂದು ಶ್ರೀ ಸವಿತಾ ಮಹರ್ಷಿಗಳಿಗೆ ಪೂಜೆ ಸಲ್ಲಿಸಿ ಸವಿತಾ ಸಮಾಜಕ್ಕೆ ಅಪಮಾನವಾಗುವ ಪದದ ವಿರುದ್ಧ ಉಭಯ ಸದನದಲ್ಲಿ ಮಾತನಾಡಿ ಸರ್ಕಾರದ ಗಮನಕ್ಕೆ ತರುವ ಜವಾಬ್ದಾರಿಯನ್ನು ನನ್ನ ಮೇಲೆ ನಂಬಿಕೆ ಇರಿಸಿ ನನಗೆ ನೀಡಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯರಾದ ಸಿ.ಟಿ. ರವಿ ಹೇಳಿದರು.

ಶ್ರೀ ಸವಿತಾ ಮಹರ್ಷಿ ಭಾವಚಿತ್ರದೊಂದಿಗೆ ತಮ್ಮ ಮನೆಗೆ ಬಂದ ಜಿಲ್ಲಾ ಸವಿತಾ ಸಮಾಜ ಚಿಕ್ಕಮಗಳೂರು ಹಾಗೂ ಎಲ್ಲಾ ತಾಲೂಕು, ಹೋಬಳಿ ಸವಿತಾ ಸಮಾಜದ ಮುಖಂಡರುಗಳುನ್ನು ಸವಿತಾ ಮಹರ್ಷಿಗಳಿಗೆ ಜೈಕಾರ ಘೋಷಣೆ ಕೂಗುತ್ತ ಬರಮಾಡಿಕೊಂಡು ಅವರ ಮನೆಯ ಪೂಜಾ ಗೃಹದಲ್ಲಿ ಪ್ರತಿಷ್ಠಾಪಿಸಿ, ತಮ್ಮ ಪತ್ನಿಯೊಂದಿಗೆ ಪುಷ್ಪಾರ್ಚನೆ ಮಾಡಿ, ಸವಿತಾ ಸಮಾಜದ ಮುಖಂಡರಿಂದ ಭಿನ್ನವತ್ತಳಿಕೆ ಪತ್ರವನ್ನು ಪಡೆದು ಮಾತನಾಡಿದ ಅವರು ಹಿಂದೂ ಧರ್ಮದಲ್ಲಿ ಯಾವ ಜಾತಿಯು ಕನಿಷ್ಠವಲ್ಲ. ಜಾತಿ ರಹಿತ ಹಾಗೂ ಅಸ್ಪೃಶ್ಯತೆ ರಹಿತ ಸಮಾಜ ಹಿಂದೂ ಸಮಾಜ ನಿರ್ಮಾಣದ ಬಗ್ಗೆ ನಾನು ಸಂಕಲ್ಪ ತೊಟ್ಟಿದ್ದೇನೆ. ಸವಿತಾ ಸಮಾಜದ ಬಂಧುಗಳು ನನ್ನ ಆತ್ಮಬಂಧುಗಳಾಗಿದ್ದು ನನ್ನನ್ನು ಬಹಳ ಹತ್ತಿರದಿಂದ ಬಲ್ಲವರಾಗಿದ್ದಾರೆ. ರಾಜಕೀಯ ಕೆಸರೆರಚಾಟದಲ್ಲಿ ಸವಿತಾ ಸಮಾಜಕ್ಕೆ ಅಪಮಾನವಾಗುವ ಪದ ಬಳಕೆಯಾಗುತ್ತಿದ್ದು, ನಾನು ಪದ ಬಳಕೆ ಮಾಡಿದ್ದೇನೆ ಎಂಬ ವಿಷಯವೇ ಅವರುಗಳಲ್ಲಿ ಆಶ್ಚರ್ಯಕ್ಕೆ ಕಾರಣವಾಗಿದೆ. ನಾನು ಬಳಸಿರಲಿ ಅಥವಾ ಬಳಸದೆ ಇರಲಿ ಸವಿತಾ ಸಮಾಜದ ಬಂಧುಗಳ ಮನಸ್ಸಿಗೆ ನೋವಾಗಿದೆ. ಆ ಕಾರಣದಿಂದ ಕ್ಷಮೆ ಕೇಳುತ್ತೇನೆ ಎಂದು ಹೇಳಿದರು.

ಸವಿತಾ ಸಮಾಜದ ಬಂಧುಗಳು ನನಗೆ ನೀಡಿರುವ ಭಿನ್ನವತ್ತಳಿಕೆಯಲ್ಲಿರುವ “ಸವಿತಾ ಸಮಾಜಕ್ಕೆ ಅಪಮಾನವಾಗುವ ನಿಷೇಧಿತ  ಪದ ಬಳಸುವ ವ್ಯಕ್ತಿಗಳ ಮೇಲೆ ದೂರು ದಾಖಲಿಸಿ ಅವರು ನ್ಯಾಯಾಲಯದಲ್ಲಿ ದಂಡ ಸಲ್ಲಿಸುವ ವಿಷಯವನ್ನು ಈ ಬಾರಿಯ ಅಧಿವೇಶನದಲ್ಲಿ ಮಂಡಿಸಿ ಸರ್ಕಾರದ ಗಮನಕ್ಕೆ ತಂದು ಅದು ಸವಿತಾ ಸಮಾಜ ದೌರ್ಜನ್ಯ ತಡೆ ಕಾಯ್ದೆ ರೂಪುಗೊಳಿಸುವ ಹಾಗೂ ಸವಿತಾ ಸಮಾಜವನ್ನು ೨ ಎ ಕೆಟಗರಿಯಲ್ಲಿ ಸೇರಿಸಿದ್ದು, ಈ ಸಮುದಾಯವನ್ನು ಎಸ್ಸಿ. ಎಸ್ಟಿ ಅಥವಾ ಪ್ರವರ್ಗ ೧ ಕೆಟಗರಿಯಲ್ಲಿ ಸೇರಿಸಿ ಪ್ರತ್ಯೇಕ ಸ್ಥಾನಮಾನ ನೀಡುವ ಬಗ್ಗೆ ಸದನದಲ್ಲಿ ವಿಷಯ ಮಂಡನೆ ಮಾಡುವ ಜವಾಬ್ದಾರಿಯನ್ನು ನನಗೆ ನೀಡಿದ್ದು ಇದನ್ನು ಕಾರ್ಯಗತಗೊಳಿಸುತ್ತೇನೆ ಎಂದು ಹೇಳಿದರು.

ಜಿಲ್ಲೆಯ ಎಲ್ಲಾ ತಾಲೂಕಿನ, ಹೋಬಳಿಯ ಮುಖಂಡರೊಂದಿಗೆ ಶ್ರೀ ಸವಿತಾ ಮಹರ್ಷಿ ಭಾವಚಿತ್ರವನ್ನು ಮೆರವಣಿಗೆಯಲ್ಲಿ ತಂದ ಜಿಲ್ಲಾ ಸವಿತಾ ಸಮಾಜ ಚಿಕ್ಕಮಗಳೂರಿನ ಜಿಲ್ಲಾಧ್ಯಕ್ಷರಾದ ವಿಶ್ವನಾಥ ಸಂಕಲ್ಪರವರು ಮಾತನಾಡಿ ಸವಿತಾ ಸಮಾಜಕ್ಕೆ ಅಪಮಾನವಾಗುವ ಪದವನ್ನು ವಿಧಾನ ಪರಿಷತ್‌ ಸದಸ್ಯರಾದ ಸಿ.ಟಿ. ರವಿಯವರು ಹೇಳಿರಬಹುದು ಅಥವಾ ಹೇಳದೆ ಇರಬಹುದು, ಆದರೆ ಈ ವಿಷಯ ಚರ್ಚಾ ವಸ್ತುವಾಗಿ ನಮ್ಮ ಸಮಾಜದ ಬಂಧುಗಳು ಮುಜುಗರಕ್ಕೆ ಒಳಗಾಗುವಂತೆ ಮಾಡಿದೆ.  ಈಗಾಗಲೇ ಹಲವಾರು ನಾಯಕರುಗಳು, ಗಣ್ಯ ವ್ಯಕ್ತಿಗಳು ಬಳಸಿದ್ದು ಆಗ ನಮ್ಮ ಸಮಾಜದ ಬಂಧುಗಳು ಹೋರಾಟ ಮಾಡಿದ್ದೇವೆ. ಅವರು ಕ್ಷಮೆ ಕೇಳಿರಬಹುದು ಆದರೆ ಅದರ ಫಲ ಶೂನ್ಯ. ನಮ್ಮ ಸಮಾಜಕ್ಕೆ ಅಪಮಾನವಾಗುವ ಪದವೆಂದು ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ನಿಷೇಧಿತ ಪದವೆಂದು ಘೋಷಣೆ ಮಾಡಿದ್ದರು. ಆದರೆ ಆ ಪದ ಬಳಸಿದರೆ ಯಾವ ರೀತಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿಲ್ಲ.

ಈ ಬಾರಿಯ ಅಧಿವೇಶನಕ್ಕೂ ಮುನ್ನ ನಮ್ಮ ಸಮಾಜಕ್ಕೆ ಅಪಮಾನ ಮಾಡುವ ನಿಷೇಧಿತ ಪದ ಬಳಸಿದರೆ ದೂರು ದಾಖಲಿಸುವ, ನ್ಯಾಯಾಲಯದಲ್ಲಿ ದಂಡ ಕಟ್ಟುವ ಕಾಯ್ದೆ ತರುವಂತೆ ಮನವಿಯನ್ನು ಜನಪ್ರತಿನಿಧಿಗಳಿಗೆ ನೀಡಲಿದ್ದೇವು. ಆದರೆ ಈ ಕಹಿ ಘಟನೆ ನಡೆದಿದ್ದು ಈ ಸಂದರ್ಭದಲ್ಲಿ ನಾವು ಅವರಿಗೆ  ಸವಿತಾ ಸಮಾಜದ ನಿಷೇಧಿತ ಪದ ಬಳಸುವ ವ್ಯಕ್ತಿಗಳ ಮೇಲೆ ದೂರು ದಾಖಲಿಸಿ ಅವರು ನ್ಯಾಯಾಲಯದಲ್ಲಿ ದಂಡ ಸಲ್ಲಿಸುವ ವಿಷಯವನ್ನು ಈ ಬಾರಿಯ ಅಧಿವೇಶನದಲ್ಲಿ ಮಂಡಿಸಿ ಸರ್ಕಾರದ ಗಮನಕ್ಕೆ ತಂದು ಅದು ಕಾಯ್ದೆ ರೂಪುಗೊಳಿಸುವ ಹಾಗೂ ಸವಿತಾ ಸಮಾಜವನ್ನು ೨ ಎ ಕೆಟಗರಿಯಲ್ಲಿ ಸೇರಿಸಿದ್ದು, ಈ ಸಮುದಾಯವನ್ನು ಎಸ್ಸಿ. ಎಸ್ಟಿ ಅಥವಾ ಪ್ರವರ್ಗ ೧ ಕೆಟಗರಿಯಲ್ಲಿ ಸೇರಿಸಿ ಪ್ರತ್ಯೇಕ ಸ್ಥಾನಮಾನ ನೀಡುವ ಬಗ್ಗೆ ಸದನದಲ್ಲಿ ವಿಷಯ ಮಂಡನೆ ಮಾಡುವಂತೆ ಇವರೆ ಸೂಕ್ತ ವ್ಯಕ್ತಿಯೆಂದು ಒತ್ತಾಯಿಸಿದ್ದೇವೆ. ಈ ಘಟನೆಗಳಿಂದ ಸವಿತಾ ಸಮಾಜದ ಬಂಧುಗಳ ಮನಸ್ಸಿಗೆ ಆಗಿರುವ ನೋವಿಗೆ ಕ್ಷಮೆ ಕೇಳಿದ್ದು ನಮ್ಮ ಬೇಡಿಕೆ ಈಡೇರಿಕೆಯ ಬಗ್ಗೆ ಸಕಾರಾತ್ಮಕವಾಗಿ ಸ್ಪಂಧಿಸಿದ್ದು, ರಾಜ್ಯಾಧ್ಯಂತ ಹೋರಾಟ ಮಾಡಿದ ಎಲ್ಲಾ ಸವಿತಾ ಸಮಾಜದ ಬಂಧುಗಳಿಗು ಧನ್ಯವಾದಗಳನ್ನು ತಿಳಿಸುತ್ತ, ಶಾಶ್ವತ ಪರಿಹಾರಕ್ಕೆ ನಾವು ಗಮನ ಹರಿಸಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸವಿತಾ ಸಮಾಜ ಚಿಕ್ಕಮಗಳೂರಿನ ಹಾಗೂ ತಾಲೂಕು ಸವಿತಾ ಸಮಾಜ ಚಿಕ್ಕಮಗಳೂರು ಅಧ್ಯಕ್ಷರಾದ ಜೆ. ಸತ್ಯನಾರಾಯಣ, ಮೂಡಿಗೆರೆ ತಾಲೂಕು ಅಧ್ಯಕ್ಷ ಮಹೇಶ್‌, ಜಿಲ್ಲಾ ಖಜಾಂಚಿ ಟೈಟಾನಿಕ್‌ ಮಂಜು, ತಾಲೂಕು ಖಜಾಂಚಿ ಚಂದ್ರಶೇಖರ್‌, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಂದೇಶ್‌, ಆಲ್ದೂರು ಹೋಬಳಿ ಮುಖಂಡರುಗಳಾದ ಸುಮಂತ್‌,  ಮದನ್‌, ಸತೀಶ್‌ ಪದ್ಮನಾಭ, ಕೌಶಿಕ್‌, ಹೆಚ್.ಎಸ್.ರತೀಶ್‌ ‌, ತಾಲೂಕು ಉಪಾಧ್ಯಕ್ಷರಾದ ವಿಜಯ್‌ ಕುಮಾರ್‌, ಧರ್ಮರಾಜ್‌, ಪ್ರದೀಪ್‌ ಬಾಲಕೃಷ್ಣ, ಮೆಹಬೂಬು ಮುಂತಾದವರಿದ್ದರು

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ