November 8, 2025

 

 

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಭಾಗದಲ್ಲಿ ಶುಕ್ರವಾರ ಇಬ್ಬರು ರೈತರನ್ನು ಬಲಿತೆಗೆದುಕೊಂಡ ಒಂಟಿ ಸಲಗವನ್ನು ಸೆರೆಹಿಡಿಯಲು ಆದೇಶ ಹೊರಡಿಸಲಾಗಿದೆ.

ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಗೆ ಒಳಪಡುವ ಪರಿಸರದಲ್ಲಿ ಮಾನವ ಜೀವಕ್ಕೆ ಅಪಾಯಕಾರಿಯಾಗಿ ತಿರುಗಾಡುತ್ತಿರುವ ಒಂಟಿ ಸಲಗ ಶುಕ್ರವಾರ ಕೆರೆಕಟ್ಟೆ ಭಾಗದಲ್ಲಿ ಸೊಪ್ಪುತರಲು ಹೋಗಿದ್ದ ಇಬ್ಬರು ರೈತರನ್ನು ತುಳಿದು ಸಾಯಿಸಿತ್ತು.

ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಕಾರ್ಕಳ ವನ್ಯಜೀವಿ ವ್ಯಾಪ್ತಿಯ ಕೆರೆಕಟ್ಟೆ ವನ್ಯಜೀವಿ ವಲಯದ ಅರಣ್ಯ ಪ್ರದೇಶಗಳಲ್ಲಿ ಒಂಟಿ ಕಾಡಾನೆಯು ಸಂಚರಿಸುತ್ತಿದೆ .

ಕಳೆದ 10ರಿಂದ 15 ವರ್ಷಗಳಿಂದ ಆಗುಂಬೆ, ಕೆರೆಕಟ್ಟೆ ಕುದುರೆಮುಖ ಪ್ರದೇಶಗಳಲ್ಲಿ ಒಂಟಿ ಸಲಗ ಓಡಾಡಿಕೊಂಡು ಹಲವಾರು ಕಡೆಗಳಲ್ಲಿ ದಾಳಿ ಮಾಡಿ  ಬೆಳೆಗಳನ್ನು ಹಾಳು ಮಾಡಿದ್ದೆ ಅಲ್ಲದೆ ತುಂಗಭದ್ರಾ ಮೀಸಲು ಅರಣ್ಯದ ಮುಡುಬಾ ಸುತ್ತುಗಟ್ಟಿನ ಇಬ್ಬರು ವ್ಯಕ್ತಿಗಳ ಮೇಲೆ ದಾಳಿ ಮಾಡಿ ಹತ್ಯೆ ಮಾಡಿದೆ.

ಕಾಡಾನೆಯನ್ನು ಸೆರೆ ಹಿಡಿಯದಿದ್ದಲ್ಲಿ ಇನ್ನೂ ಇಂತಹ ಘಟನೆಗಳು ಪುನರಾವರ್ತನೆಯಾಗುವ ಸಾಧ್ಯತೆಗಳಿದ್ದು ಸೆರೆ ಹಿಡಿಯುವ ಅತೀ ಅವಶ್ಯಕತೆ ಇದು ಈ ಕಾಡಾನೆ ಸೆರೆ ಹಿಡಿಯಲು ಬೇರೆ ಪಳಗಿದ ಆನೆಗಳ ಸಹಾಯ ಪಡೆಯಬೇಕಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದರು.

ಕಾಡಾನೆಯನ್ನು ಸೆರೆ ಹಿಡಿಯಲು ಆನೆ ಶಿಬಿರದಿಂದ ಪಳಗಿದ ಆನೆ ಮತ್ತು ಮಾವುತರನ್ನು ನಿಯೋಜಿಸಬೇಕು ಹಾಗೂ ಸೆರೆ ಹಿಡಿದ ಕಾಡಾನೆಯನ್ನು ಯಾವ ಸ್ಥಳಕ್ಕೆ ಬಿಡಬೇಕು ಎಂದು ನಿರ್ದೇಶನ ನೀಡುವಂತೆ ಅವರು ಕೋರಿದ್ದರು.

ಈ ಹಿನ್ನೆಲೆಯಲ್ಲಿ ಕೆರೆಕಟ್ಟೆ ವನ್ಯಜೀವಿ ವಲಯದಲ್ಲಿ ಎರಡು ಮಾನವ-ಪ್ರಾಣಹಾನಿಗೆ ಕಾರಣವಾದ ಗಂಡಾನೆಯನ್ನು ಸೆರೆಹಿಡಿಯಲು ಆದೇಶ ಹೋರಡಿಸಲಾಗಿದೆ.

ಆನೆ ಗುರುತಿಸಿ ಸೆರೆ ಹಿಡಿದು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ದೊಡ್ಡ ಹರವೆ ಆನೆ ಶಿಬಿರಕ್ಕೆ ಸ್ಥಳಾಂತರಿಸಲು  ಅನುಮತಿ ನೀಡಲಾಗಿದೆ.

ಶುಕ್ರವಾರ ಇಬ್ಬರು ವ್ಯಕ್ತಿಗಳು ಕಾಡಾನೆ ದಾಳಿಗೆ ಬಲಿಯಾದ ನಂತರ ಜನರು ಹೆದ್ದಾರಿ ತಡೆ ನಡೆಸಿ ಪ್ರತಿಭಟಿಸಿದ್ದರು. ಸ್ಥಳಕ್ಕೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದರು.

ಆನೆ ಸೆರೆಹಿಡಿಯಬೇಕೆಂಬ ಒತ್ತಾಯ ತೀವ್ರವಾಗಿತ್ತಲ್ಲದೆ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಪಕ್ಷಭೇದ ಮರೆತು ಜನಾಕ್ರೋಶ ವ್ಯಕ್ತವಾಗಿತ್ತು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ