ಮೂಡಿಗೆರೆ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (TAPCMS) ಆಡಳಿತ ಮಂಡಳಿಗೆ ಇಂದು (ಭಾನುವಾರ) ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ
ಒಟ್ಟು 8 ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಎನ್.ಡಿ.ಎ ಮೈತ್ರಿಕೂಟದ ಅಭ್ಯರ್ಥಿಗಳು ಸಂಪೂರ್ಣ ಮೇಲುಗೈ ಸಾಧಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ ಟಿಎಪಿಎಂಎಸ್ ಅಭಿವೃದ್ಧಿ ವೇದಿಕೆ ಹೆಸರಿನಲ್ಲಿ ರಚಿಸಿಕೊಂಡಿದ್ದ ತಂಡದ ಅಭ್ಯರ್ಥಿಗಳಿಗೆ ಸೋಲುಂಟಾಗಿದೆ.
ಒಟ್ಟು 8 ಸ್ಥಾನಗಳಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಕೂಟ 7 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ. 1 ಸ್ಥಾನದಲ್ಲಿ ಟಿಎಪಿಸಿಎಂಎಸ್ ಅಭಿವೃದ್ಧಿ ವೇದಿಕೆ ಅಭ್ಯರ್ಥಿ ಜಯಗಳಿಸಿದ್ದಾರೆ




ಸಾಮಾನ್ಯ ಕ್ಷೇತ್ರದಿಂದ ಎನ್ ಡಿ ಎ ಅಭ್ಯರ್ಥಿ ಪಿ. ಜಿ ಅನುಕುಮಾರ್ ಪಟ್ಟದೂರು ಮತ್ತು ಟಿ ಎ ಪಿ ಸಿ ಎಂ ಎಸ್ ಅಭಿವೃದ್ಧಿ ವೇದಿಕೆ ಅಭ್ಯರ್ಥಿ ರಂಜನ್ ಅಜಿತ್ ಕುಮಾರ್ ಜಯಶಾಲಿಯಾಗಿದ್ದಾರೆ
ಬಿಸಿಎಂ ಬಿ. ಕ್ಷೇತ್ರದಿಂದ ಎಂ.ಕೆ. ಚಂದ್ರೇಶ್ ಮಗ್ಗಲಮಕ್ಕಿ ಜಯಶಾಲಿಯಾಗಿದ್ದಾರೆ
ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಎನ್ ಡಿ ಎ ಅಭ್ಯರ್ಥಿ ಬಿ. ಎಲ್. ವಿದ್ಯಾ ರಾಜು ಕನ್ನಾಪುರ ಮತ್ತು ಪುಟ್ಟಮ್ಮ ಕುನ್ನಹಳ್ಳಿ ಜಯಗಳಿಸಿದ್ದಾರೆ
ಬಿಸಿಎಂ ಎ ಕ್ಷೇತ್ರದಿಂದ ಎನ್‌ಡಿಎ ಅಭ್ಯರ್ಥಿ ಶೇಖರ್ ಪೂಜಾರಿ ಜಕ್ಕಳಿ ಜಯಶಾಲಿಯಾಗಿದ್ದಾರೆ
ಪರಿಶಿಷ್ಟ ಜಾತಿ ಕ್ಷೇತ್ರದಿಂದ ಎನ್ ಡಿ ಎ ಅಭ್ಯರ್ಥಿ ಗಣೇಶ್ ಕೆಸವಳಲು ಜಯಗಳಿಸಿದ್ದಾರೆ
ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಎನ್.ಡಿ.ಎ ಅಭ್ಯರ್ಥಿ ರಮೇಶ್ ಕುನ್ನಹಳ್ಳಿ ವಿಜೇತರಾಗಿದ್ದಾರೆ.
ಎ ಶ್ರೇಣಿಯ 5 ನಿರ್ದೇಶಕರು ಈಗಾಗಲೇ ಎನ್.ಡಿ.ಎ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬಿ ಶ್ರೇಣಿಯ 7 ನಿರ್ದೇಶಕರ ಗೆಲುವಿನೊಂದಿಗೆ ಬಿಜೆಪಿ ಜೆಡಿಎಸ್ ಮೈತ್ರಿಕೂಟ ನಿಚ್ಚಳ ಬಹುಮತ ಪಡೆದಿದೆ
ಒಟ್ಟು. 1043 ಮತದಾರರಲ್ಲಿ 1015 ಮತಗಳು ಚಲಾವಣೆಯಾಗಿದ್ದವು
ಅಭ್ಯರ್ಥಿಗಳ ಮತಗಳಿಕೆ ವಿವರ





