ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಸಮೀಕ್ಷೆಯ ನಡೆಸಿದ ಶಿಕ್ಷಕರಿಗೆ ಗಳಿಕೆ ರಜೆಗಳನ್ನು ಮಂಜೂರು ಮಾಡಬೇಕೆಂದು ಮೂಡಿಗೆರೆ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಆರ್. ನವೀನ್ ಮನವಿ ಮಾಡಿದ್ದಾರೆ.
ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿರುವ ಅವರು ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಸಮೀಕ್ಷೆಯ ನಡೆಸಿದ ಶಿಕ್ಷಕರಿಗೆ ಗಳಿಕೆ ರಜೆಗಳನ್ನು ಮಂಜೂರು ಮಾಡಬೇಕೆಂದು ಮೂಡಿಗೆರೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಲಾಗಿತ್ತು.
ನೌಕರರ ಸಂಘದ ವತಿಯಿಂದ ನೀಡಿದ್ದ ಮನವಿಗೆ ಸ್ಪಂದಿಸಿ ಸಹಾಯಕ ನಿರ್ದೇಶಕರು(ಸಮಾಜ ಕಲ್ಯಾಣ ಇಲಾಖೆ)ಮೂಡಿಗೆರೆ ಕಚೇರಿ ವತಿಯಿಂದ ಉಪ ನಿರ್ದೇಶಕರು(ಸಮಾಜ ಕಲ್ಯಾಣ ಇಲಾಖೆ),ಚಿಕ್ಕಮಗಳೂರು ಇವರಿಗೆ ಪತ್ರ ರವಾನಿಸಿರುತ್ತಾರೆ.
ಈ ಬಗ್ಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸ್ಪಂದಿಸಿ ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಶಿಕ್ಷಕರುಗಳಿಗೆ ಗಳಿಕೆ ರಜೆಗಳನ್ನು ಮಂಜೂರು ಮಾಡಬೇಕೆಂದು ಕೋರಿದ್ದಾರೆ.




