ದಿನಾಂಕ 31/10/2025 ರಂದು ಬಿ.ಎಸ್ ಜಯರಾಮ್ ಅಧ್ಯಕ್ಷರು ಮೂಡಿಗೆರೆ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಇವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆಯ ನಡೆಯಿತು.
ಶ್ರೀಮತಿ ದಯಾವತಿ ಎಂ.ಕಾರ್ಯನಿರ್ವಾಹಕ ಅಧಿಕಾರಿಗಳು ತಾಲ್ಲೂಕು ಪಂಚಾಯಿತಿ ಮೂಡಿಗೆರೆ ರವರು ಹಾಜರಿದ್ದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರುಗಳಿಗೆ ಹಾಗೂ ಅನುಷ್ಠಾನ ಇಲಾಖೆಯ ಅಧಿಕಾರಿಗಳಿಗೆ ಸ್ವಾಗತ ಕೋರಿದರು.
ಗೃಹಲಕ್ಷ್ಮಿ ಯೋಜನೆ:
ಇಲಾಖಾಧಿಕಾರಿಗಳು ಗೃಹಲಕ್ಷ್ಮಿ ಯೋಜನೆ ಬಗ್ಗೆ ಪ್ರಗತಿ ವರದಿ ಮಂಡಿಸಿದರು. ತಾಲ್ಲೂಕಿನಲ್ಲಿ ಒಟ್ಟು 29032 ಗೃಹಲಕ್ಷ್ಮಿ ಫಲಾನುಭವಿಗಳು ಇದ್ದು, ಇದರಲ್ಲಿ 28654 ಫಲಾನುಭವಿಗಳಿಗೆ ಯೋಜನೆಯ ಹಣ ಬರುತ್ತಿರುವುದಾಗಿ ಹಾಗೂ ಯೋಜನೆಯಿಂದ ಬಾಕಿ ಉಳಿದ ರೇಷನ್ ಕಾರ್ಡ್ NPCI 24, IT/GST 210, ತಿದ್ದುಪಡಿ/ಮರಣ 144 ಒಟ್ಟು 378 ರೇಷನ್ ಕಾರ್ಡ್ ಇದ್ದು,
ಐಟಿ/ಜಿ.ಎಸ್.ಟಿ, ತಿದ್ದುಪಡಿ/ಮರಣ ಈ ಸಮಸ್ಯೆಗಳಿಂದ ಉಳಿದ ಫಲಾನುಭವಿಗಳನ್ನು ಗೃಹಲಕ್ಷ್ಮಿ ಯೋಜನೆಗೆ ಒಳಪಡಿಸಲು ಆಗುತ್ತಿಲ್ಲವೆಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಈ ಹಿಂದೆ NPCI ಅನುಮೋದನೆ ನೀಡಲು ಅವಕಾಶ ಕಲ್ಪಿಸಿದ್ದು, ಈಗ ಅವಕಾಶ ತೆಗೆದುಹಾಕಿರುವುದಾಗಿ ಹಾಗೂ ಜೂನ್-2025, ಜುಲೈ-2025 ರ ಮಾಹೆಯ ಗೃಹಲಕ್ಷ್ಮಿ ಅನುದಾನ ಪಾವತಿಗಾಗಿ DPT ಕಳುಹಿಸಿರುವುದಾಗಿ ಸಭೆಗೆ ಮಾಹಿತಿ ನೀಡಿದರು. ಗೃಹಲಕ್ಷ್ಮೀ ಫಲಾನುಭವಿಗಳನ್ನು ಸೇರಿಸಿಕೊಂಡು ಗೃಹಲಕ್ಷ್ಮೀ ವಿವಿದೋದ್ದೇಶ ಸಹಕಾರ ಸಂಘ ಮಾಡಲು ತಾಲ್ಲೂಕಿಗೆ 11 ಗುರಿ ನೀಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಅನ್ನಭಾಗ್ಯ ಯೋಜನೆ:
ಆಹಾರ ಶಿರಸ್ತೇದಾರರು ಸಭೆಗೆ ಪ್ರಗತಿ ವರದಿ ಮಂಡಿಸಿದರು. ಸರ್ಕಾರದ ಮಾನದಂಡದಂತೆ ಈವರೆಗೂ ತಾಲ್ಲೂಕಿನಲ್ಲಿ ಒಟ್ಟು 843 ಪಡಿತರಚೀಟಿಯನ್ನು ಬಿಪಿಎಲ್ ಕಾರ್ಡಿನಿಂದ ಎಪಿಎಲ್ ಕಾರ್ಡಿಗೆ ವರ್ಗಾಯಿಸಲಾಗಿದೆ. ಧರ್ಮಸ್ಥಳ ಸಂಘದಲ್ಲಿ ಕೆಲಸ ಮಾಡುತ್ತಿರುವವರನ್ನು ಬಿಪಿಎಲ್ ಕಾರ್ಡಿನಿಂದ ಎಪಿಎಲ್ ಕಾರ್ಡಿಗೆ ವರ್ಗಾವಣೆ ಮಾಡಲು ವಿಲೇ ಇಡಲಾಗಿದೆ ಹಾಗೂ ಸರ್ಕಾರದ ಮಾನದಂಡಗಳ ಪ್ರಕಾರ ಅನರ್ಹ ಬಿ.ಪಿ.ಎಲ್. ಕಾರ್ಡ್ ಗಳನ್ನು ರದ್ದುಪಡಿಸಿ ಎಪಿಎಲ್ ಗೆ ವರ್ಗಾವಣೆ ಮಾಡುತ್ತಿರುವುದಾಗಿ ಸಭೆಗೆ ಮಾಹಿತಿ ನೀಡಿದರು.
ಗೃಹಜ್ಯೋತಿ ಯೋಜನೆ:
ಇಲಾಖಾಧಿಕಾರಿಗಳು ಗೃಹಜ್ಯೋತಿ ಯೋಜನೆ ಬಗ್ಗೆ ಪ್ರಗತಿ ವರದಿ ಮಂಡಿಸಿದರು. ತಾಲ್ಲೂಕಿನಲ್ಲಿ ಒಟ್ಟು 21329 ಗೃಹಜ್ಯೋತಿ ಫಲಾನುಭವಿಗಳು ಇದ್ದು, ಸರ್ಕಾರದಿಂದ ರೂ. 9358446/- ಅನುದಾನ ಬಿಡುಗಡೆಯಾಗಿರುತ್ತದೆ. ಹಾಗೂ ಸರ್ಕಾರದ ಆದೇಶದಂತೆ 128 ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಹಾಗೂ ಅಂಗನವಾಡಿ ಕೇಂದ್ರಗಳನ್ನು ಗೃಹಜ್ಯೋತಿ ಯೋಜನೆಗೆ ಒಳಪಡಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಗೃಹಜ್ಯೋತಿ ಯೋಜನೆಯಲ್ಲಿ ಅಧಿಕ ವಿದ್ಯುತ್ ಬಳಸಿರುವ ಫಲಾನುಭವಿಗಳ ಸಂಖ್ಯೆ 8266 ಇದ್ದು, ರೂ. 2685862/- ಬಿಲ್ ಪಾವತಿಸಿಕೊಳ್ಳಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಯುವನಿಧಿ ಯೋಜನೆ:
ಬಿ.ಎಸ್. ಜಯರಾಮ್ ಮಾನ್ಯ ಅಧ್ಯಕ್ಷರು ಮಾತನಾಡುತ್ತಾ, ಪದವಿ ಪಡೆದ 3077 ವಿಧ್ಯಾರ್ಥಿಗಳು ಹಾಗೂ ಡಿಪ್ಲೊಮೋ 39 ವಿಧ್ಯಾರ್ಥಿಗಳು ಯುವನಿಧಿ ಯೋಜನೆಯ ಸದುಪಯೋಗ ಪಡೆಯುತ್ತಿದ್ದು, ಸರ್ಕಾರದಿಂದ ರೂ.9289500/- ಅನುದಾನ ಪಾವತಿಯಾಗಿರುತ್ತದೆ. ಯುವನಿಧಿ ಫಲಾನುಭವಿಗಳು ಕೌಶಾಲ್ಯಾಭಿವೃದ್ದಿ ತರಭೇತಿಗೆ ಕಡ್ಡಾಯವಾಗಿ ಹಾಜರಾಗಬೇಕು. ಹೊಸದಾಗಿ ಯುವನಿಧಿ ಪ್ಲಸ್ ಎಂಬ ಯೋಜನೆ ಜಾರಿಗೆ ಬಂದಿರುವುದಾಗಿ ಸಭೆಗೆ ಮಾಹಿತಿ ನೀಡಿದರು.
ಶಕ್ತಿ ಯೋಜನೆ:
ಇಲಾಖಾಧಿಕಾರಿಗಳು ಶಕ್ತಿ ಯೋಜನೆ ಬಗ್ಗೆ ಪ್ರಗತಿ ವರದಿ ಮಂಡಿಸಿದರು. ತಾಲ್ಲೂಕಿನಲ್ಲಿ ಅಕ್ಟೋಬರ್-2025 ರ ಮಾಹೆಯಲ್ಲಿ 352749 ಫಲಾನುಭವಿಗಳು ಪ್ರಯಾಣಿಸಿದ್ದು, ರೂ.19663497/- ಸರ್ಕಾರದಿಂದ ಅನುದಾನ ಬಿಡುಗಡೆಯಾಗಿರುವುದಾಗಿ ಸಭೆಗೆ ತಿಳಿಸಿದರು. ಬಿ.ಎಸ್. ಜಯರಾಮ್ ಮಾನ್ಯ ಅಧ್ಯಕ್ಷರು ಮಾತನಾಡುತ್ತಾ ಬಿಳಗುಳದಲ್ಲಿ ಬಸ್ ನಿಲುಗಡೆಗೆ ಸ್ಥಳ ಗುರುತಿಸಿದ್ದು, ಫಲಕವನ್ನು ಹಾಕಲು ಕ್ರಮವಹಿಸುವಂತೆ ಸೂಚಿಸಿದರು. ರಾಜ್ಯ ಸರ್ಕಾರದಿಂದ 700 ಪಲ್ಲಕ್ಕಿ ಮಾದರಿಯ ಬಸ್ ನೀಡುತ್ತಿದ್ದು, ಕೊಟ್ಟಿಗೆಹಾರದಿಂದ ಬೆಂಗಳೂರಿಗೆ ಪಲ್ಲಕ್ಕಿ ಮಾದರಿಯ ಬಸ್ ಬಿಡುವಂತೆ ಸಭೆಯಲ್ಲಿ ತೀರ್ಮಾನಿಸಿ ಈ ಬಗ್ಗೆ ಸೂಕ್ತ ಕ್ರಮವಹಿಸುವಂತೆ ಇಲಾಖಾಧಿಕಾರಿಯವರಿಗೆ ಸೂಚಿಸಿದರು.
ರಾಜ್ಯ ಮಟ್ಟದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ನವಂಬರ್-17 ರಂದು ಕಡೂರು ತಾಲ್ಲೂಕಿನಲ್ಲಿ ನಡೆಸಲು ಉದ್ದೇಶಿಸಲಾಗಿದ್ದು, ಸದಸ್ಯರುಗಳು ಸಮಾವೇಶಕ್ಕೆ ಹಾಜರಾಗಲು ಹಾಗೂ ಫಲಾನುಭವಿಗಳಿಗೆ ಸಮಾವೇಶದ ಬಗ್ಗೆ ಮಾಹಿತಿ ನೀಡುವಂತೆ ಬಿ.ಎಸ್. ಜಯರಾಮ್ ಅಧ್ಯಕ್ಷರು ತಿಳಿಸಿದರು.
ಬಿಪಿಎಲ್ ಕಾರ್ಡ್ ರದ್ದುಗೊಳಿಸಿರುವ ಕುಟುಂಬಗಳಿಗೆ ಸರ್ಕಾರವು ನೀಡಿರುವ ಮಾನದಂಡಗಳ ಬಗ್ಗೆ ಸದಸ್ಯರುಗಳು ಮನದಟ್ಟು ಮಾಡುವಂತೆ ಹಾಗೂ ಅರ್ಹ ಫಲಾನುಭವಿಗಳು ವಂಚಿತರಾಗಿದ್ದಲ್ಲಿ ಮಾಹಿತಿ ನೀಡಲು ಸದಸ್ಯರುಗಳಿಗೆ ತಿಳಿಸಲಾಯಿತು.
ಸಭೆಯಲ್ಲಿ ಹೊಸಕೆರೆ ರಮೇಶ್, ಮೆಲ್ವಿನ್ , ಸಮಿತಿ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.




