ವಸತಿ ರಹಿತರಿಗೆ ನಿವೇಶನ ನೀಡುವಂತೆ ಆಗ್ರಹಿಸಿ ಮೂಡಿಗೆರೆ ತಾಲ್ಲೂಕು ಹೆಸಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂರಾರು ನಿವಾಸಿಗಳು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಕಛೇರಿಗೆ ಕಾಲ್ನಡಿಗೆ ಜಾಥಾ ನಡೆಸಿದರು.
ಮೂಡಿಗೆರೆಯಿಂದ ಕಾಲ್ನಾಡಿಗೆಯ ಮೂಲಕ ಘೋಷಣೆಗಳನ್ನು ಕೂಗುತ್ತಾ ನೂರಾರು ಪುರುಷರು ಮತ್ತು ಮಹಿಳೆಯರು ಜಾಥಾ ನಡೆಸಿದರು.
ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಆವರಣದಲ್ಲಿ ಸಮಾವೇಶಗೊಂಡು ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ತಮ್ಮ ಮನವಿಯಲ್ಲಿ ; ಮೂಡಿಗೆರೆ ತಾಲ್ಲೂಕು ಹೆಸಗಲ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಹಲವು ಬಡ ಕುಟುಂಬಗಳು ಬಾಡಿಗೆ ಮನೆಯಲ್ಲಿ ವಾಸಿಸುತ್ತ ಹಲವಾರು ವರ್ಷಗಳಿಂದಲೂ ವಸತಿಗಾಗಿ ಸರ್ಕಾರಕ್ಕೆ ಹಾಗೂ ಗ್ರಾಮ ಪಂಚಾಯ್ತಿಗೆ ಮನವಿ ಸಲ್ಲಿಸುತ್ತಿದ್ದು ಹೆಸಗಲ್ ಗ್ರಾಮದ ಕೊಡಗಿಬೈಲ್ ಬಳಿ ಸರ್ವೇ ನಂ. 105, 51, 144, 102 ಹಾಗೂ ಇನ್ನಿತರೆ ಸರ್ವೇ ನಂಬರ್ಗಗಳಲ್ಲಿ ಸುಮಾರು 40 ಎಕರೆಗೂ ಅಧಿಕ ಸರ್ಕಾರಿ ಭೂಮಿ ಹಾಗೂ ಗೋಮಾಳ ಜಮೀನು ಇರುವುದು ತಿಳಿದುಬಂದಿರುತ್ತದೆ. ಈ ಬಗ್ಗೆ ಪಟ್ಟಣ ಪಂಚಾಯಿತಿಯವರು ವಸತಿ ರಹಿತರಿಗಾಗಿ ಈ ಹೆಸಗಲ್ ಗ್ರಾಮದ ವ್ಯಾಪ್ತಿಗೆ ಬರುವ ಈ ಮೇಲ್ಕಂಡ ಜಮೀನನ್ನು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಸತಿ ರಹಿತರಿಗೆ ಮೀಸಲಿರಿಸಲು ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವುದು ತಿಳಿದು ಬಂದಿರುತ್ತದೆ. ಪಂಚಾಯತ್ ವ್ಯಾಪ್ತಿಯಲ್ಲಿ 600 ಕ್ಕೂ ಅಧಿಕ ವಸತಿರಹಿತರಿದ್ದು ಹೆಸಗಲ್ ಗ್ರಾಮದ ಪಂಚಾಯಿತಿಯೊಳಗೆ ಸದರಿ ಭೂಮಿ ಇರುವುದರಿಂದ ಪ್ರಥಮ ಆಧ್ಯತೆಯಾಗಿ ಗ್ರಾಮ ವ್ಯಾಪ್ತಿಯ ವಸತಿ ರಹಿತರಿಗೆ ವಸತಿ ನೀಡುವುದು ನ್ಯಾಯಯುತವಾಗಿರುತ್ತದೆ.
ತತ್ಕೊಳ ಗ್ರಾಮದಲ್ಲಿ ಕೂಡಲೇ ಬೋರ್‌ವೆಲ್ ಕೊರೆಸಿ ಸ್ಥಳೀಯರಿಗೆ ಶುದ್ಧ ನೀರನ್ನು ಒದಗಿಸುವುದು ಮತ್ತು ರದ್ದುಗೊಳಿಸಿರುವ 94ಸಿ ಅರ್ಜಿಯನ್ನು ಪುನರ್ ಆರಂಭಿಸಿ ಅರ್ಹರಿಗೆ ಹಕ್ಕು ಪತ್ರ ವಿತರಿಸುವುದು, ಹೆಸಗಲ್ ಕಾಲೋನಿ ಸರ್ವೇ ನಂ. 3/1ರಲ್ಲಿರುವ ಸುಮಾರು4 ಎಕರೆ 30 ಗುಂಟೆ ಜಮೀನಿನಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ವಾಸವಾಗಿರುವ ಸುಮಾರು 60ಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕು ಪತ್ರ ನೀಡುವುದು.

ಸದರಿ ಹೆಸಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೇ ಸುಮಾರು 600ಕ್ಕೂ ಅಧಿಕ ವಸತಿ ರಹಿತರಿದ್ದು ಸದರಿಯವರು ಈ ವರೆಗೆ ಹಲವಾರು ಬಾರಿ ಗ್ರಾಮ ಪಂಚಾಯಿತಿಗೂ ಹಾಗೂ ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಿದರೂ ಸಹ ಈ ವರೆಗೆ ಯಾವುದೇ ಭೂಮಿ ಮಂಜೂರಾತಿ ದೊರೆತಿರುವುದಿಲ್ಲ ಆದ್ದರಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಮೀನನ್ನು ಗ್ರಾಮದವರಿಗೆ ಮೀಸಲಿರುಸುವಂತೆ ಕೋರಿ ಮತ್ತು ಬಾಪುನಗರ ಹಾಗೂ ಸುಭಾಷ್ ನಗರದಲ್ಲಿ ಜೆ. ಜೆ. ಎಂ ಕುಡಿಯುವ ನೀರಿನ ಕಾಮಗಾರಿಗಳನ್ನು ಆವೈಜ್ಞಾನಿಕವಾಗಿ ಮಾಡಿ ಕಳಪೆ ಕಾಮಗಾರಿ ನಡೆಸಿ ಈ ವರೆಗೆ ಕುಡಿಯುವ ನೀರಿನ ಸಂಪರ್ಕವನ್ನು ಕೊಡದೆ ಕರ್ತವ್ಯಲೋಪ ಎಸಗಿರುತ್ತಾರೆ ಸದರಿ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಂಜಿನಿಯರ್‌ಗಳು ಹಾಗೂ ಸಂಬಂಧಪಟ್ಟವರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್, ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಮುಂಡರಾದ ಜಿ.ಹೆದ್. ಹಾಲಪ್ಪಗೌಡ, ದೀಪಕ್ ದೊಡ್ಡಯ್ಯ, ಗ್ರಾಮ ಪಂಚಾಯಿತಿ ಸದಸ್ಯ ಶಿವಣ್ಣ, ಪ್ರಶಾಂತ್, ಹೆಸಗಲ್ ಗ್ರಾಮ ಪಂಚಾಯಿತಿಯ ಸದಸ್ಯರು, ಮಾಜಿ ಅಧ್ಯಕ್ಷರು ಮತ್ತು ಸದಸ್ಯರು, ವಿವಿಧ ರಾಜಕೀಯ ಪಕ್ಷಗಳ ಮತ್ತು ಸಂಘ ಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು.



