ಸಂಘಟನೆಯ ಕಚೇರಿ ಇದ್ದರೆ ಸಂಘಟನೆ ಮೂಲಕ ಬಡವರ, ನೊಂದವರ ಸಂಕಷ್ಟಕ್ಕೆ ಮುಂದಾಗಲು ಹಾಗೂ ಜನರಿಗೆ ಸೇವೆ ನೀಡಲು ಸಹಕಾರಿಯಾಗುತ್ತದೆ ಎಂದು ಡಿಎಸ್‍ಎಸ್ ಅಂಬೇಡ್ಕರ್ ಧ್ವನಿ ರಾಜ್ಯಾಧ್ಯಕ್ಷೆ ವಸಂತಕುಮಾರಿ ಹೇಳಿದರು.
ಅವರು ಇತ್ತೀಚೆಗೆ ಮೂಡಿಗೆರೆ ತಾಲೂಕಿನ ಜನ್ನಾಪುರದಲ್ಲಿ ಡಿಎಸ್‍ಎಸ್ ಅಂಬೇಡ್ಕರ್ ಧ್ವನಿ ಸಂಘಟನೆಯ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದರು.
ಡಿಎಸ್‍ಎಸ್ ಅಂಬೇಡ್ಕರ್ ಧ್ವನಿ ಸಂಘಟನೆ ಅತ್ಯಂತ ಪ್ರಬಲವಾಗಿದೆ. ಕಚೇರಿ ತೆರೆದು ನಿರಂತರ ಜನರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸಲು ಶ್ರಮಿಸಬೇಕು. ಜತೆಗೆ ಸಂಕಷ್ಟಕ್ಕೊಳಗಾದವರಿಗೆ ನ್ಯಾಯ ಕೊಡಿಸುವ ಕಾರ್ಯ ಮಾಡಬೇಕೆಂದು ಸಲಹೆ ನೀಡಿದರು.
ಜಿಲ್ಲಾಧ್ಯಕ್ಷ ಸುಂದ್ರೇಶ್ ಹೊಯ್ಸಳಲು ಮಾತನಾಡಿ, ಈಗಾಗಲೆ ಹಳ್ಳಿಹಳ್ಳಿಗಳಲ್ಲಿ ಜನಪರ ಕಾರ್ಯಕ್ರಮ ರೂಪಿಸಿ ಸಂಘಟನೆಯನ್ನು ಎತ್ತರಕ್ಕೆ ಬೆಳೆಸಲು ಶ್ರಮಿಸುತ್ತಿದೆ. ಇಲ್ಲಿ ಕೂಲಿ ಕಾರ್ಮಿಕರು ಹೆಚ್ಚಾಗಿ ಇರುವುದರಿಂದ ಅವರ ಸಮಸ್ಯೆ ಬಗೆಹರಿಸಲು ತನ್ನೊಂದಿಗೆ ಎಲ್ಲಾ ಸದಸ್ಯರು ಸಹಕರಿಸಬೇಕೆಂದು ಮನವಿ ಮಾಡಿದರು.
ತಾಲೂಕು ಅಧ್ಯಕ್ಷ ಪೂರ್ಣೇಶ್ ಬೆಟ್ಟದಮನೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪದ್ಮಾ, ಭೀಮಾಕೊರೇಗಾವ್ ತಾಲೂಕು ಅಧ್ಯಕ್ಷ ಸುಂದ್ರೇಶ್ ಕನ್ನಾಪುರ, ಗೌರವಾಧ್ಯಕ್ಷ ಪೂವಪ್ಪ ಆನೇದಿಬ್ಬ, ಮುಖಂಡರಾದ ಇಂದ್ರೇಶ್, ಹರೀಶ್ ಕೆಲ್ಲೂರು, ಚಂದನ ಆನೆದಿಬ್ಬ, ಭಾನುಪ್ರಕಾಶ್, ಹರೀಶ್ ಚೇಗು, ಪ್ರತಿಮ, ಸತೀಶ್, ಕುಮಾರ್, ಸತೀಶ್, ಕಿರಣ್, ಪ್ರತಾಪ್ ಮತ್ತಿತರರಿದ್ದರು.



