ಮೂಡಿಗೆರೆ ತಾಲ್ಲೂಕಿನ ಪ್ರತಿಷ್ಠಿತ ಟಿ ಎ ಪಿ ಸಿ ಎಂ ಎಸ್ ನ ಆಡಳಿತ ಮಂಡಳಿ ಚುನಾವಣೆ ಕೆಲವೇ ದಿನಗಳು ಬಾಕಿ ಉಳಿದಿದ್ದು ಸ್ಪರ್ಧಾಳುಗಳ ಮಾತಯಾಚನೆ ಭರ್ಜರಿಯಾಗಿ ನಡೆಯುತ್ತಿದೆ.
ಐದು ವರ್ಷಕೊಮ್ಮೆ ನಡೆಯುವ ಚುನಾವಣೆಯಲ್ಲಿ ಬಿ. ಶ್ರೇಣಿಯ 8 ಸ್ಥಾನಗಳಿಗೆ ನವಂಬರ್ 2 ರಂದು ನಡೆಯುವ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಬೆಂಬಲಿತ ಎನ್.ಡಿ.ಎ ಅಭ್ಯರ್ಥಿಗಳಿಗೆ ಎದುರಾಳಿಗಳಾಗಿ ಟಿಎಪಿಸಿಎಂಎಸ್ ಅಭಿವೃದ್ಧಿ ವೇದಿಕೆ ಹೆಸರಿನಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷರ ಪ್ರತ್ಯೇಕ ಗುಂಪು ಕಣದಲ್ಲಿ ಇದೆ.
ಒಟ್ಟು 8 ಸ್ಥಾನಕ್ಕೆ 16 ಅಭ್ಯರ್ಥಿಗಳು ಸ್ಪರ್ಧೆಗೆ ನಾಮಪತ್ರ ಸಲ್ಲಿಸಿ ಕಣದಲ್ಲಿ ಇದ್ದಾರೆ. ಈ ಬಾರಿ ಚುನಾವಣೆಯನ್ನು ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಪ್ರತಿಷ್ಟೆಯಾಗಿ ತೆಗೆದುಕೊಂಡಿದ್ದು, ಎರಡೂ ಗುಂಪುಗಳ ಅಭ್ಯರ್ಥಿಗಳು ಮತದಾರರನ್ನು ಸೆಳೆಯುವ ತಂತ್ರಗಾರಿಕೆ ನಡೆಸುತ್ತಿದ್ದಾರೆ.
ಸಂಸ್ಥೆಯಲ್ಲಿನ 13 ನಿರ್ದೇಶಕರ ಬಲದಲ್ಲಿ ಎ ಶ್ರೇಣಿಯ 5 ನಿರ್ದೇಶಕರನ್ನು ಮೂಡಿಗೆರೆ ಮತ್ತು ಕಳಸ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಆಯ್ಕೆ ಮಾಡಲಾಗುತ್ತದೆ. ಅದರಂತೆ ಬಿಜೆಪಿ ಮತ್ತು ಜೆಡಿಎಸ್ ನ ಐದು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಪ್ರತಿಸ್ಪರ್ಧಿಗಳು ಯಾರೂ ನಾಮಪತ್ರ ಸಲ್ಲಿಸದ ಕಾರಣ ಬಿಜೆಪಿ ಜೆಡಿಎಸ್ ಬೆಂಬಲಿತ ಎನ್.ಡಿ.ಎ ಮೈತ್ರಿಕೂಟದ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದಂತಾಗಿದೆ.
ಈ ಬಾರಿ ಒಟ್ಟು 1043 ಮತಗಳಿದ್ದು ಓರ್ವ ಮತದಾರನಿಗೆ 8 ಮತಗಳನ್ನು ಚಲಾಲಿಸಲು ಅವಕಾಶ ಇರುತ್ತದೆ. ಮತದಾರರು ಮೂಡಿಗೆರೆ ಮತ್ತು ಕಳಸ ತಾಲ್ಲೂಕುಗಳ ಗ್ರಾಮೀಣ ಪ್ರದೇಶಗಳಲ್ಲಿ ಹಂಚಿ ಹೋಗಿದ್ದಾರೆ. ಹಾಗಾಗಿ ಅಭ್ಯರ್ಥಿಗಳು ಎರಡೂ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಮತದಾರರ ಮನೆ ಮನೆಗಳನ್ನು ಹುಡುಕಿ ಮತಯಾಚನೆ ಮಾಡಬೇಕಾದ ಅನಿವಾರ್ಯತೆ ಇದೆ.
ಬಿಜೆಪಿ ಜೆಡಿಎಸ್ ಬೆಂಬಲಿತರಲ್ಲಿ ಪಿ.ಜಿ.ಅನುಕುಮಾರ್ (ಪಟ್ಟದೂರು ಪುಟ್ಟಣ್ಣ ), ಎಂ.ಕೆ. ಚಂದ್ರೇಶ್ , ಹೆಚ್ ಎಸ್ ಮಂಜುನಾಥ್ ಬಿ.ಹೊಸಳ್ಳಿ , ಶೇಖರ್ ಪೂಜಾರಿ , ಗಣೇಶ್ , ರಮೇಶ್ ಕುನ್ನಹಳ್ಳಿ, ವಿದ್ಯಾರಾಜು, ,ಪುಟ್ಟಮ್ಮ ಚಂದ್ರೆಗೌಡ ಕಣದಲ್ಲಿದ್ದಾರೆ. ಇವರಲ್ಲಿ ಎಂ.ಕೆ. ಚಂದ್ರೇಶ್ ಸಂಸ್ಥೆಯ ನಾಮ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಉಳಿದವರು ಇದೇ ಮೊದಲ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಟಿಎಪಿಸಿಎಂಎಸ್ ಅಭಿವೃದ್ಧಿ ವೇದಿಕೆ ಹೆಸರಿನ ತಂಡದಲ್ಲಿ ಎಂ ಎಂ ಲಕ್ಷ್ಮಣಗೌಡ , ರಂಜನ್ ಅಜಿತ್ ಕುಮಾರ್ , ಯು.ಹೆಚ್. ಹೇಮಶೇಖರ್, ಎಂ ಎಸ್ ಅನಂತ್, ಸುರೇಶ , ಕೆ ಪಿ ಭಾರತಿ, ಶಾಂತಲಾ ನಾಗೇಶ್ , ಮನು ಮಾಲಹಳ್ಳಿ ಕಣದಲ್ಲಿದ್ದಾರೆ. ಇವರಲ್ಲಿ ಎಂ.ಎಂ. ಲಕ್ಷ್ಮಣಗೌಡ, ರಂಜನ್ ಅಜಿತ್ ಕುಮಾರ್, ಯು.ಹೆಚ್. ಹೇಮಶೇಖರ್, ಕೆ.ಪಿ. ಭಾರತಿ ಈಗಾಗಲೇ ಸಂಸ್ಥೆಯ ಅಧ್ಯಕ್ಷರು, ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದು, ಉಳಿದವರು ಹೊಸ ಮುಖಗಳು.
ಚುನಾವಣೆ ರೈತಭವನದಲ್ಲಿ ನವಂಬರ್ 2 ರ ಬೆಳಗ್ಗೆ 9 ರಿಂದ ಸಂಜೆ 4ಗಂಟೆವರೆಗೆ ನಡೆಯಲಿದೆ ಆ ದಿನವೇ ಫಲಿತಾಂಶ ಹೊರಬಿಳಲಿದೆ ಗೆಲುವು ಯಾರಿಗೆ ಎಂದು ಕಾದು ನೋಡಬೇಕಾಗಿದೆ.
ಕಳೆದ ಚುನಾವಣೆಯಲ್ಲಿ ಗಳಿಸಿದ್ದ ಮಾತುಗಳು ವಿವರ




