 
                
ಮದುವೆ ಹಿಂದಿನ ದಿನ ಯುವತಿ ಹೃದಯಘಾತದಿಂದ ಸಾವಪ್ಪಿದ ಘಟನೆ ನಡೆದಿದೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಲೋ ಬಿಪಿ ಹಾಗೂ ಹೃದಯಾಘಾತದಿಂದ ಈ ಪ್ರಕರಣ ಅಜ್ಜಂಪುರ ತಾಲೂಕಿನ ಸೊಲ್ಲಾಪುರ ಗ್ರಾಮದಲ್ಲಿ ನಡೆದಿದೆ.
24 ವರ್ಷದ ಶೃತಿ ಮೃತ ದುರ್ದೈವಿ. ತರೀಕೆರೆಯ ದಿಲೀಪ್ ಜೊತೆ ಮದುವೆ ಶುಕ್ರವಾರ ನಿಶ್ಚಯವಾಗಿತ್ತು.
ಗುರುವಾರ ಮದುವೆ ಶಾಸ್ತ್ರ ಆರಂಭಗೊಂಡು ಶುಕ್ರವಾರ ಮದುವೆ ನಡೆಯಬೇಕಾಗಿತ್ತು. ಆದರೆ ವಿಧಿಯ ಕ್ರೂರ ಅಟ್ಟಹಾಸವೇ ಬೇರೆಯಾಗಿತ್ತು. ಲೋ ಬಿಪಿ ಹಾಗೂ ಹೃದಯಾಘಾತದಿಂದ ಯುವತಿ ಕೊನೆಯುಸಿರೆಳೆದಿದ್ದಾರೆ.
ಮದುವೆ ಮನೆಯ ಸಂಭ್ರಮ ಕೊನೆಗೊಂಡು ಸ್ಮಶಾನ ಮೌನ ಆವರಿಸಿತ್ತು. ಪೋಷಕರು ಬಂಧುಗಳ ಆಕ್ರಂದನ ಮುಗಿಲು ಮುಟ್ಟಿದೆ


 
 

 
                                                         
                                                         
                                                         
                                                         
                                                         
                                                         
                                                        