 
                
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಡಾನೆ ದಾಳಿಗೆ ಇಬ್ಬರು ರೈತರು ಬಲಿಯಾಗಿದ್ದಾರೆ.
ಶೃಂಗೇರಿಯ ಕೆರೆಕಟ್ಟೆಯಲ್ಲಿ ಕಾಡಾನೆಯ ಭೀಕರ ದಾಳಿಗೆ ಇಂದು ಶುಕ್ರವಾರ ಮುಂಜಾನೆ ಉಮೇಶ್ ಮತ್ತು ಹರೀಶ್ ಎಂಬ ರೈತರು ದುರ್ಮರಣ ಹೊಂದಿದ್ದಾರೆ.
ಒಂದೇ ಸ್ಥಳದಲ್ಲಿ ಇಬ್ಬರ ಮೇಲೆ ದಾಳಿ ಮಾಡಿದ್ದು, ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಸ್ಥಳೀಯರು, ರೈತ ಸಮಿತಿಗಳು ಹೋರಾಟಕ್ಕೆ ಕರೆ ನೀಡಿದ್ದಾರೆ.
ಸೂಕ್ತ ಕ್ರಮಕ್ಕೆ ಒತ್ತಾಯ:
ಆನೆ ತುಳಿದು ಇಬ್ಬರೂ ಸಾವನ್ನಪ್ಪಿರುವುದು ತುಂಬಾ ನೋವಿನ ಸಂಗತಿ ಎಂದು ಮಲೆನಾಡು ಕರಾವಳಿ ಹೋರಾಟ ಸಮಿತಿಯ ಅನಿಲ್ ಹೊಸಕೊಪ್ಪ ವಿಷಾದ ವ್ಯಕ್ತಪಡಿಸಿದ್ದಾರೆ .
ಮಲೆನಾಡಿನಲ್ಲಿ ಪದೇ ಪದೇ ಹೀಗೆ ಆಗುತ್ತಿರುವುದರಿಂದ ಜನ ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ . ಘಟನಾ ಸ್ಥಳಕ್ಕೆ ಕ್ಷೇತ್ರದ ಶಾಸಕರು ಹಾಗೂ ಸಂಸದರು ಆಗಮಿಸಿ ಬೇಕು ಎಂದು ಒತ್ತಾಯಿಸಿದ್ದಾರೆ.
ಘಟನೆ ನಡೆದ ಸ್ಥಳ (ವೈಡ್ ಲೈಫ್ ) ರಾಷ್ಟೀಯ ಉದ್ಯಾನವನ ವ್ಯಾಪ್ತಿಯಲ್ಲಿ ಬರುವುದರಿಂದ ಕೇಂದ್ರ ಪರಿಸರ ಸಚಿವರೂ ಹಾಗೂ ವನ್ಯಜೀವಿಗೆ ಸಂಬಂಧ ಪಟ್ಟವರು ಸ್ಥಳಕ್ಕೆ ಬರಬೇಕು ಎಂದು ಆಗ್ರಹಿಸಿದ್ದಾರೆ.
ಕುಟುಂಬಕ್ಕೆ ಪರಿಹಾರದ ಜೊತೆಗೆ ಆ ಭಾಗದ ಸಮಸ್ಸೆಗಳನ್ನು ಪರಿಹರಿಸಲು ಅನಿಲ್ ಹೊಸಕೊಪ್ಪ ಒತ್ತಾಯಿಸಿದ್ದಾರೆ.


 
 

 
                                                         
                                                         
                                                         
                                                         
                                                         
                                                         
                                                        