November 8, 2025

 

 

ಕಾಫಿ ಎಸ್ಟೇಟ್ ಒಂದರಲ್ಲಿ ಮಾಂಸಕ್ಕಾಗಿ ಕಾಡುಕೋಣ ಶಿಕಾರಿ ಮಾಡಿದ್ದ ಆರೋಪದ ಮೇಲೆ ಎಸ್ಟೇಟ್ ಮ್ಯಾನೇಜರ್ ಸೇರಿ ಆರು ಮಂದಿಯನ್ನು ಬಂಧಿಸಿದ್ದು, ಎಸ್ಟೇಟ್ ಮಾಲೀಕ ಸೇರಿ ಇನ್ನೂ ನಾಲ್ಕು ಮಂದಿ ಪರಾರಿಯಾಗಿರುವ ಘಟನೆ ನಡೆದಿದೆ.

ಈ ಬಗ್ಗೆ ಮೂಡಿಗೆರೆ ವಲಯ ಅರಣ್ಯಾಧಿಕಾರಿಗಳ ಕಛೇರಿಯಿಂದ ಮಾಹಿತ ನೀಡಿದ್ದು, ಮಾಹಿತಿಯಂತೆ :

ಚಿಕ್ಕಮಗಳೂರು ವೃತ್ತ, ಮೂಡಿಗೆರೆ ವಲಯದ ವಲಯ ಅರಣ್ಯಾಧಿಕಾರಿಗಳವರಿಗೆ ಬಂದ ಖಚಿತ ಮಾಹಿತಿಯಂತೆ ದಿನಾಂಕ:07-11-2025 ರಂದು ಬೆಳಿಗ್ಗೆ 9 ಗಂಟೆಯ ಸಮಯದಲ್ಲಿ ಮೂಡಿಗೆರೆ ಪ್ರಾದೇಶಿಕ ಅರಣ್ಯ ವಲಯದ ಭಾರತೀಬೈಲ್ ಶಾಖೆ ವ್ಯಾಪ್ತಿಯಲ್ಲಿ ಬಾಳೂರು ಹೋಬಳಿ, ಬಾಳೂರು ಗ್ರಾಮದ ಮಂಜಯ್ಯ ಬಿನ್ ಬೈರಯ್ಯ ಇವರ ಮನೆಯಲ್ಲಿ ಕಾಡುಪ್ರಾಣಿಯನ್ನು ಕಳ್ಳಬೇಟೆಯಾಡಿ ಮಾಂಸವನ್ನು ಕದ್ದು, ಶೇಖರಿಸಿರುವುದಾಗಿ ಮಾಹಿತಿ ಲಭ್ಯವಾಗಿತ್ತು.

ಖಚಿತ ಮಾಹಿತಿ ಮೇರೆಗೆ,  ಮಂಜಯ್ಯ  ಇವರ ಮನೆಯನ್ನು ತಪಾಸಣೆ ಮಾಡಲಾಗಿ ಒಂದು ಪಾತ್ರೆಯಲ್ಲಿ ಅರೆಬೇಯಿಸಿದ ಸುಮಾರು 1 ಕೆ.ಜಿ.ಯಷ್ಟು ಮಾಂಸವಿರುವುದು ಕಂಡುಬಂತು. ನಂತರ ಸದರಿ ಮಾಂಸವನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗಿ, ಅದರ ವಾಸನೆ ಮತ್ತು ವರ್ತಲಗಳಿಂದ ಇದ್ದು ಯಾವುದೋ ಕಾಡುಪ್ರಾಣಿಯ ಮಾಂಸ ಇರಬಹುದೆಂದು ಮೇಲ್ನೋಟಕ್ಕೆ ಕಂಡು ಬಂದಿತ್ತು.

ಮನೆಯ ವಾರಸುದಾರರಾದ ಮಂಜಯ್ಯ ಇವರನ್ನು ವಿಚಾರಿಸಲಾಗಿ ಇದು ಕಾಡುಕೋಣದ ಮಾಂಸವಾಗಿದ್ದು, ಇದನ್ನು ನಿಡುವಾಳೆ ಗ್ರಾಮದ ಸೇಂಟ್ ಮೇರಿಸ್ ಕಲ್ಮನೆ ಎಸ್ಟೇಟ್ ಮರ್ಕಲ್ ಇಲ್ಲಿ ಕಳ್ಳ ಬೇಟೆಯಾಡಿ ಮಾಂಸವನ್ನು ಮಾಡಿರುವುದಾಗಿ, ಕಾಡುಕೋಣವನ್ನು ಜೀವನ್ ಇವರು ಕಲ್ಮನೆ ಎಸ್ಟೇಟ್ ಮಾಲೀಕತ್ವದ ಡಿ.ಬಿ.ಬಿ.ಎಲ್. ಬಂದೂಕಿನಿಂದ ಗುಂಡಿಕ್ಕಿದ್ದು, ಕಲ್ಮನೆ ಎಸ್ಟೇಟ್ ಮಾಲೀಕರು ಇವರ ಅನುಮತಿ ಮೇರೆಗೆ, ಸೇಂಟ್ ಮೇರಿಸ್ ಕಲ್ಮನೆ ಎಸ್ಟೇಟ್ ಮರ್ಕಲ್ ಇಲ್ಲಿ ಬೇಟೆಯಾಡಿ ಮಾಂಸವನ್ನು ಮಾಡಿ ಎಲ್ಲಾರು ಹಂಚಿಕೊಂಡಿರುವುದಾಗಿ ತಿಳಿಸಿದರು.

ನಂತರ ಬೆಳಿಗ್ಗೆ 10.45 ರ ಸಮಯದಲ್ಲಿ ಕಲ್ಮನೆ ಎಸ್ಟೇಟ್ ಗೆ ತೆರಳಿ 6 ಆರೋಪಿಗಳನ್ನು ಇಲಾಖಾ ವಶಕ್ಕೆ ಪಡೆದು ವಿಚಾರಿಸಲಾಗಿ ಕಲ್ಮನೆ ಎಸ್ಟೇಟ್ ಮಾಲೀಕರಾದ ಧೀರಜ್ ಪ್ರಭು ಇವರ ಅನುಮತಿ ಪಡೆದು ನಾವುಗಳು ಮತ್ತು ಜೀವನ್, ಸುಂದ್ರೇಶ್ ಮತ್ತು ದಿಲೀಪ್ ಇವರೊಂದಿಗೆ ತೋಟದ ಮಾಲೀಕತ್ವದ ಡಿ.ಬಿ.ಬಿ.ಎಲ್. ಬಂದೂಕಿನಿಂದ ಮರ್ಕಲ್‌ನಲ್ಲಿರುವ ಸೇಂಟ್ ಮೇರಿಸ್ ಕಲ್ಮನೆ ಎಸ್ಟೇಟ್‌ನಲ್ಲಿ ಕಾಡುಕೋಣವನ್ನು ಕಳ್ಳಬೇಟೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಆರೋಪಿಗಳು ತೋರಿಸಿದ ಮರ್ಕಲ್ ಕೆರೆಯ ಸುತ್ತ ಪರಿಶೀಲಿಸಲಾಗಿ ಕೆರೆಯ ನೀರಿನಲ್ಲಿ ಪ್ರಾಣಿಯ ತಲೆಬುರುಡೆ ತೇಲುತಿರುವುದು ಕಂಡುಬಂದಿದ್ದು,  ತಲೆಯ ಬುರುಡೆಯನ್ನು ಪರಿಶೀಲಿಸಲಾಗಿ ಅದು ಕಾಡುಕೋಣದ ತಲೆಬುರುಡೆಯಾಗಿದ್ದು, ಮಚ್ಚಿನಿಂದ ಕತ್ತರಿಸಿರುವುದು ಕಂಡುಬಂದಿದ್ದು, ಹಿಂದಿನ ದಿವಸ ಬೇಟೆಯಾಡಿ ಕೆರೆಗೆ ಎಸೆದಿರುವುದು ಕಂಡುಬಂದಿರುತ್ತದೆ. ಮುಂದುವರಿದು ಕಾಡುಕೋಣದ ಅಂಗಾಂಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿರುತ್ತದೆ.

ಸದರಿ ತಲೆಬುರುಡೆಯನ್ನು ಅಮಾನತ್ತುಪಡಿಸಿ ಮಂಜಯ್ಯ  ಇವರ ಮನೆಯಲ್ಲಿ ದೊರೆತ ಅರೆಬೇಯಿಸಿದ ಸುಮಾರು 1 ಕೆ.ಜಿ. ಕಾಡುಕೋಣದ ಮಾಂಸ ಪಾತ್ರೆಯೊಂದಿಗೆ ಮತ್ತು ಈ ಕಳ್ಳ ಬೇಟೆಗೆ ಉಪಯೋಗಿಸಿದ ಡಿ.ಬಿ.ಬಿ.ಎಲ್.ಬಂದೂಕನ್ನು ಆಮಾನತ್ತುಪಡಿಸಲಾಗಿರುತ್ತದೆ.

ಸದರಿ ವನ್ಯಪ್ರಾಣಿ ಹತ್ಯೆ ಕೃತ್ಯವೆಸಗಿರುವ ಆರೋಪಿಗಳನ್ನು ಬಂಧಿಸಿ ವನ್ಯಪ್ರಾಣಿ ಹತ್ಯೆ ಪ್ರಕರಣ ಸಂಖ್ಯೆ:04/2025-26 ನ್ನು ದಾಖಲು ಮಾಡಲಾಗಿರುತ್ತದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು ತನಿಖೆಯು ಪ್ರಗತಿಯಲ್ಲಿರುತ್ತದೆ. ಆರೋಪಿಗಳ ವಿವರ ಈ ಕೆಳಕಂಡಂತೆ ಇರುತ್ತದೆ.

  1. ರವೀಶ್ ಬಿ.ಎಸ್. ಬಿನ್ ಸುಧಾಕರ್, 35 ವರ್ಷ, ಬಪ್ಪುಂಜಿ, ಕೈಮರ ವಾಸಿ, ನುಗ್ಗಿ ಗ್ರಾಮ, ದೇರ್ ಕುಡಿಗೆ ಅಂಚೆ, ಕಸಬಾ ಹೋಬಳಿ, ಕೊಪ್ಪ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ. (ಕಲ್ಕನೆ ಎಸ್ಟೇಟ್, ತೋಟದ ಫೀಲ್ಡ್ ಆಫೀಸರ್)

2.ಪ್ರದೀಪ್ ಬಿನ್ ಶ್ಯಾಮ ದೇವಾಡಿಗ, 41 ವರ್ಷ, ಕರ್ಕೆಶ್ವರ ಕೈಮರ ವಾಸಿ, ಮೇಲ್‌ಪಾಲ್ ಗ್ರಾಮ ಮತ್ತು ಅಂಚೆ, ಎನ್.ಆರ್.ಪುರ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ. (ಕಲ್ಮನೆ ಎಸ್ಟೇಟ್, ತೋಟದ ರೈಟರ್)

  1. ದೇಜಪ್ಪ ಬಿನ್ ಮೋಹನಪ್ಪ, 46 ವರ್ಷ, ನಿಡುವಾಳೆ ಗ್ರಾಮ ವಾಸಿ,  (ಕಲ್ಮನೆ ಎಸ್ಟೇಟ್ ತೋಟದ ಮೇಸಿ)
  2. ಸೀನ ಬಿನ್ ನಾದೆಲಾ, 50 ವರ್ಷ, ಕಾಡಿನಕೊಂಡ , ನಿಡುವಾಳೆ ಗ್ರಾಮ  (ಕಲ್ಮನೆ ಎಸ್ಟೇಟ್ ತೋಟದ ಮೇಸ್ತ್ರಿ)

5 . ಮಂಜಯ್ಯ ಬಿನ್ ಭೈರಯ್ಯ, 48 ವರ್ಷ, ಬಾಳೂರು ಗ್ರಾಮ  (ಕಲ್ಮನೆ ಎಸ್ಟೇಟ್ ತೋಟದ ವಾಹನ ಚಾಲಕ)

  1. ಸುಂದರ ಬಿನ್ ಚೀಂಕ್ರ, 50 ವರ್ಷ, ನಿಡುವಾಳೆ ಗ್ರಾಮ ವಾಸಿ, (ಕಲ್ಮನೆ ಎಸ್ಟೇಟ್ ತೋಟದ ಕೂಲಿಕೆಲಸಗಾರ)
  2. ಸುಂದರೇಶ್ ಬಿನ್ ಲಕ್ಷ್ಮಣಗೌಡ, 45 ವರ್ಷ, ಬಾಳೂರು ಗ್ರಾಮ
  3. ದಿಲೀಪ್ ಬಿನ್ ವೆಂಕಟೇಗೌಡ, 45 ವರ್ಷ. ಬಾಳೂರು ಗ್ರಾಮ
  4. ಜೀವನ್, 42 ವರ್ಷ. ಕೊರಡಿಹಿತ್ತು ನುಗ್ಗಿ ಗ್ರಾಮ,  ಕೊಪ್ಪ ತಾಲ್ಲೂಕು,
  5. ಧೀರಜ್ ಪ್ರಭು ಬಿನ್ ಪೀಟರ್ ಪ್ರಭು, 42 ವರ್ಷ, ಮಾಲೀಕರು, ಕಲ್ಮನೆ ಎಸ್ಟೇಟ್,

ಕ್ರ.ಸಂ 1 ರಿಂದ ಕ್ರಸಂ 6 ರವರೆಗಿನ ಆರೋಪಿಗಳನ್ನು ಬಂಧಿಸಲಾಗಿದೆ.  ಕ್ರಸಂ 7ರಿಂದ ಕ್ರಸಂ 10 ರವರೆಗಿನ ಆರೋಪಿಗಳು ತಲೆಮರೆಸಿಕೊಂಡಿದ್ದು ಶೋಧ ಕಾರ್ಯ ಪ್ರಗತಿಯಲ್ಲಿರುತ್ತದೆ ಎಂದು ಅರಣ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಶ್‌ಪಾಲ್ ಕ್ಷೀರಸಾಗರ್, ಅರಣ್ಯ ಸಂರಕ್ಷಣಾಧಿಕಾರಿಗಳು,  ರಮೇಶ್ ಬಾಬು, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು,   ಆಕರ್ಷ್ ಟಿ.ಎಮ್. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳವರ ಮಾರ್ಗದರ್ಶನದಲ್ಲಿ, ಕಾರ್ಯಾಚರಣೆಯ ನೇತೃತ್ವವನ್ನು  ಮಂಜುನಾಥ ಜಿ. ವಲಯ ಅರಣ್ಯಾಧಿಕಾರಿ,   ಸುಹಾಸ್ ಕೆ.ಟಿ. ಉಪ ವಲಯ ಅರಣ್ಯಾಧಿಕಾರಿ, ಗಸ್ತು ಅರಣ್ಯ ಪಾಲಕರಾದ   ರಘು, ಎಸ್.ಆರ್,  ಉಮೇಶ್ ಎ.ಬಿ.  ಲಕ್ಷ್ಮಣ್ ಬಿ.ಎಂ, ಹಾಗೂ ಸಿಬ್ಬಂದಿಗಳಾದ   ಸುಮಂತ್,  ನವರಾಜ್,  ಸುಧೀರ್,  ಕೃಷ್ಣಮೂರ್ತಿ,   ಗಿರೀಶ್ ಇವರುಗಳು ವಹಿಸಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ