suddi-3 (2)

 

 

ಸರ್ಕಾರಗಳ ಬಹುತೇಕ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಜನ ಸಾಮಾನ್ಯರ ತಲುಪಿಸುವ ಕಾರ್ಯ ಅಂಗನವಾಡಿ ಸಿಬ್ಬಂದಿಗಳು ಮಾಡುತ್ತಿದ್ದಾರೆ. ಈ ಸಮಾಜಮುಖಿ ಕಾ ರ್ಯಕ್ಕೆ ಎಂದಿಗೂ ಬೆಲೆಕಟ್ಟಲು ಸಾಧ್ಯವಿಲ್ಲ ಎಂದು ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಹೇಳಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಫೆಡರೇ ಷನ್ ವತಿಯಿಂದ ಶುಕ್ರವಾರ ಆಯೋಜಿಸಿದ್ಧ ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಯರ ಬೀಳ್ಕೊಡಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯ ಅನೇಕ ತಾಲ್ಲೂಕುಗಳಲ್ಲಿ ಅಂಗನವಾಡಿ ಸಿಬ್ಬಂದಿಗಳು ಮಕ್ಕಳ ಆರೋಗ್ಯದ ದೃಷ್ಟಿಯಿಂದ ತಮ್ಮ ಕನಿಷ್ಟ ವೇತನದಲ್ಲೂ ಮಕ್ಕಳಿಗೆ ಸ್ವಂತ ಖರ್ಚಿನಿಂದ ಮೊಟ್ಟೆ ಕೊಡಿಸುತ್ತಿದ್ದಾರೆ. ಈ ರೀತಿ ಶ್ರಮವಿಟ್ಟು ನಿಸ್ವಾರ್ಥದಿಂದ ಕೆಲಸ ಮಾಡುವವರಿಗೆ ಸರ್ಕಾರ ಹಾಗೂ ಜನಪ್ರತಿನಿಧಿಗಳ ಸಹಕಾರ ಸದಾ ಇರಲಿದೆ ಎಂ ದರು.

ಕಾರ್ಯಕರ್ತೆಯರಿಗೆ ಸರ್ಕಾರದಿಂದ ಲಭಿಸುವ ಸೀರೆ, ಮೊಬೈಲ್‍ಗಳನ್ನು ಮೊದಲ ಹಂತದಲ್ಲೇ ಕೊ ಡಿಸುವ ಕಾರ್ಯ ತಾವು ಮಾಡಿದ್ದೇವೆ. ಅಲ್ಪಸ್ವಲ್ಪ ವೇತನದಲ್ಲೇ ಮಕ್ಕಳ ಆರೈಕೆ ಮಾಡುವ ಮೂಲಕ ಸರ್ಕಾರಿ ನೌಕರರಗಿಂತ ಅತಿಹೆಚ್ಚು ಕೆಲಸವನ್ನು ನಿಭಾಯಿಸುತ್ತಿರುವ ಶ್ರೇಷ್ಟರು ಎಂದು ಬಣ್ಣಿಸಿದರು.

ಕುಟುಂಬದಲ್ಲಿ ಎಷ್ಟೇ ತೊಂದರೆಗಳು ಎದುರಿಸಿದರೂ, ವೃತ್ತಿಯಲ್ಲಿ ನಗುಮುಖದಲ್ಲಿ ಕಾಣಿಸಿಕೊಳ್ಳುವ ಕಾರ್ಯಕರ್ತೆ ಮತ್ತು ಸಹಾಯಕಿಯರು ಸಮಾಜಕ್ಕೆ ಸ್ಪೂರ್ತಿದಾಯಕ. ಹೀಗಾಗಿ ಶಾಸಕರಿಗೆ ಅನೇಕ ಇಲಾ ಖೆಯ ಸಮಸ್ಯೆಗಿಂತ, ಅಂಗನವಾಡಿಯವರ ಲೋಷದೋಷಗಳಿಗೆ ಮೊದಲ ಆದ್ಯತೆ ನೀಡಿ ಪರಿಹರಿಸುವು ದು ಮೂಲ ಕರ್ತವ್ಯ ಎಂದರು.

ಮಕ್ಕಳ ಸ್ವಾಸ್ಥ್ಯ ಆರೋಗ್ಯ ಕಾಪಾಡುವ ಅಂಗನವಾಡಿಯವರ ಕಾರ್ಯ ಶ್ಲಾಘನೀಯ. ಅಲ್ಲದೇ ಎಲ್ ಕೆಜಿ ಮತ್ತು ಯುಜಿಕೆ ಅನುಮತಿ ನೀಡಿದ್ದಲ್ಲಿ ನಿಭಾಯಿಸುವ ಶಕ್ತಿ ತೋರುತ್ತಿರುವುದು ಒಳ್ಳೆಯ ಬೆಳವಣಿಗೆ. ಈ ಬಗ್ಗೆ ಸರ್ಕಾರ ಸದ್ಯದಲ್ಲೇ ಜಿಲ್ಲೆಗೆ ಎಲ್‍ಕೆಜಿ, ಯುಕೆಜಿ ವ್ಯವಸ್ಥೆ ಕಲ್ಪಿಸುವ ಮೂಲಕ ಕಾರ್ಯಕರ್ತೆಯರ  ವೃತ್ತಿಗೆ ಆಸರೆಯಾಗಲಿದೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಅಂಗನವಾಡಿ ವೃತ್ತಿ ಬಾಂಧವರಲ್ಲಿ ಕೆಲವು ಆತಂಕ ಮನೆಮಾಡಿದೆ. ವೃತ್ತಿ ಅನ ರ್ಹ ಹಾಗೂ ಅಂಗನವಾಡಿ ಕೇಂದ್ರ ಮುಚ್ಚಲಿವೆ ಎಂಬ ಗೊಂದಲವಿದೆ. ಈ ಬಗ್ಗೆ ಅಂಗನವಾಡಿ ಕಾರ್ಯ ಕರ್ತೆಯರು ತಲೆಕೆಡಿಸಿಕೊಳ್ಳಬೇಡಿ. ಯಾವುದೇ ಕಾರಣಕ್ಕೂ ವೃತ್ತಿ ಕಸಿದುಕೊಳ್ಳುವುದಿಲ್ಲ ಹಾಗೂ ಅಂಗನವಾ ಡಿ ಕೇಂದ್ರವು ಮುಚ್ಚುವುದಿಲ್ಲ ಎಂದು ಭರವಸೆ ನೀಡಿದರು.

ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ ತಾಯಿ-ಮಕ್ಕಳ ಆರೋಗ್ಯ, ಬಾಣಂತಿ ಮಹಿಳೆಯರಿ ಗೆ ಪೌಷ್ಠಿಕ ಆಹಾರ ವಿತರಣೆ, ಹಿಂದುಳಿದ ವರ್ಗ-ಆರೋಗ್ಯ ಸಮೀಕ್ಷೆ, ಚುನಾವಣೆ ಮತದಾನದಲ್ಲಿ ಕೆಲಸ ಸೇರಿದಂತೆ ಶಕ್ತಿಮೀರಿ ಅಂಗನವಾಡಿ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.

ಆರಂಭದಲ್ಲಿ ಅಂಗನವಾಡಿ ಶಿಕ್ಷಕಿಯರು 250, ಸಹಾಯಕಿಯರು 180 ರೂ.ಗಳಿಗೆ ವೃತ್ತಿಗೆ ಸೇರ್ಪಡೆ ಗೊಂಡಿದ್ದರು. ಅನೇಕ ವರ್ಷಗಳ ಕೆಲಸ, ಬೇಡಿಕೆಗೆ ಅನುಗುಣ ಹಾಗೂ ಹೋರಾಟದ ಪ್ರತಿಫಲ ಶಿಕ್ಷಕಿ ಯರಿ ಗೆ 12 ಸಾವಿರ, ಸಹಾಯಕಿಯರಿಗೆ 7500 ರೂ. ವೇತನ ಹೆಚ್ಚಿಸಲಾಗಿದೆ. ಮುಂದಿನ ನಿವೃತ್ತಿ ಜೀವನವನ್ನು ಹೊಸ ಶಿಕ್ಷಕಿಯರಿಗೆ ಮಾರ್ಗದರ್ಶನ ಮೂಲಕ ಸಂತೋಷದಿಂದ ಕಳೆಯಬೇಕು ಎಂದರು.

ಜಿ.ಪಂ. ಸಿಇಓ ಹೆಚ್.ಎಸ್.ಕೀರ್ತನಾ ಮಾತನಾಡಿ ಕುಟುಂಬದಲ್ಲಿ ಒಂದು ಮಗು ಸುಧಾರಿಸುವುದು ಬಹಳ ಕಷ್ಟವಿದೆ. ಆದರೆ ಒಂದೊಂದು ಕೇಂದ್ರದಲ್ಲೂ ಹತ್ತಾರು ಮಕ್ಕಳನ್ನು ಸುಧಾರಿಸುತ್ತಿರುವ ಅಂಗನವಾಡಿ ಸಿಬ್ಬಂದಿಗಳ ಕೆಲಸ ಸುಲಭದ ಮಾತಲ್ಲ. ಅಲ್ಲದೇ ಒಂದು ಮಗುವಿಗೆ ಜನ್ಮವಿತ್ತ ತಾಯಿ ಮೊದಲಾದರೆ, ಎರ ಡನೇ ತಾಯಿ ಅಂಗನವಾಡಿ ಸಿಬ್ಬಂದಿಗಳು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಹೆಚ್.ಡಿ.ತಮ್ಮಯ್ಯ ಅಂಗನವಾಡಿ ವೃತ್ತಿಬಾಂ ಧವರು ಗೌರವಧನದಡಿ ಪ್ರಾಮಾಣಿಕ ದುಡಿಯುತ್ತಿರುವ ಸಿಬ್ಬಂದಿಗಳು. ಮಹಿಳೆಯರು ಸಮಾಜದಲ್ಲಿ ಪುರು ಷ ಸರಿಸಮಾನಾಗಿದ್ದು, ಅವರಿಗೆ ಮೂಲಸೌಕರ್ಯ ಕಲ್ಪಿಸಲು ರಾಜ್ಯಸರ್ಕಾರ ಗ್ಯಾರಂಟಿ ಯೋಜನೆ ಜಾರಿ ಗೊಳಿಸಿ ಹೆಚ್ಚು ಆದ್ಯತೆ ಮಹಿಳೆಯರಿಗೆ ನೀಡಲಾಗಿದೆ ಎಂದರು.

ಇದೇ ವೇಳೆ ಸುಮಾರು 29 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರು ನಿವೃತ್ತಿಗೊಂಡ ಹಿನ್ನೆಲೆ ಅಭಿನಂದಿಸುವ ಮೂಲಕ ಬೀಳ್ಕೊಡಲಾಯಿತು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿ ವೃದ್ದಿ ಇಲಾಖೆ ಉಪನಿರ್ದೇಶಕ ಡಿ.ಸಂತೋಷ್, ತಹಶೀಲ್ದಾರ್ ಕೆ.ಎಸ್.ರೇಷ್ಮಾ, ಎ.ಐ.ಟಿ.ಯು.ಸಿ. ಜಿಲ್ಲಾ ಧ್ಯಕ್ಷೆ ಗ್ರೇಟಾ ಫರ್ನಾಂಡೀಸ್, ಪ್ರಧಾನ ಕಾರ್ಯದರ್ಶಿ ಪುಷ್ಪಾ ಬಸವರಾಜ್, ಶಿಶು ಅಭಿವೃದ್ದಿ ಯೋಜ ನಾಧಿಕಾರಿ ಸಿ.ರಂಗನಾಥ್, ತಾ.ಪಂ. ಇಓ ವಿಜಯ್‍ಕುಮಾರ್, ಎ.ಐ.ಟಿ.ಯು.ಸಿ. ಕಾರ್ಯದರ್ಶಿ ವಸಂತ್ ಧರ್ಮೇಗೌಡ, ತಾಲ್ಲೂಕು ಖಜಾಂಚಿ ಸುಕನ್ಯಾ ಮತ್ತು ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ