WhatsApp Image 2026-06-08 at 6.41.46 AM

 

 

ಮೂಡಿಗೆರೆಯಲ್ಲಿ ಪ್ರೀಮಿಯರ್ ಲೀಗ್ ಮಾದರಿಯಲ್ಲಿ ಚಿಕ್ಕಮಗಳೂರು ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.

ಮೂಡಿಗೆರೆ ಫ್ರೆಂಡ್ಸ್ ಯೂನಿಯನ್ ಬ್ಯಾಡ್ಮಿಂಟನ್ ಕ್ಲಬ್ ವತಿಯಿಂದ  ಕೆ.ಜೆ.ಪ್ರಸನ್ನ ಅವರ ಅಧ್ಯಕ್ಷಯಲ್ಲಿ ವಿಎಸ್ ಬಿಜಿಎಸ್ ಶಾಲೆ ಕ್ರೀಡಾಂಗಣದಲ್ಲಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಪಂದ್ಯಾವಳಿಯಲ್ಲಿ ಒಟ್ಟು ಎಂಟು ತಂಡಗಳು ಭಾಗವಹಿಸಿದ್ದವು.

ಭಾಗವಹಿಸಿದ್ದ ಎಂಟು ತಂಡಗಳೆಂದರೆ ; ಶಿಖರ ಕುಂದೂರು ಮಾಲೀಕತ್ವದ ಮೂಡಿಗೆರೆ ಇನ್ಸೂರೆನ್ಸ್ ಜೋನ್ ತಂಡ, 2. ಗಗನ್ ಶೃಂಗೇರಿ ಮಾಲಿಕತ್ವದ ಶಾರದಾಂಭ ಶೃಂಗೇರಿ, 3. ಕೆ.ಜೆ. ಪ್ರಸನ್ನ ಮಾಲೀಕತ್ವದ ರಾಮೇಶ್ವರ ಕುಂದೂರು ತಂಡ, 4. ಅಜಿತ್ ನಿಖಿಲ್ ಕೋಟೆಯೂರು ಮಾಲೀಕತ್ವದ ಕೋಟೆವೂರ್ ಕಿಂಗ್ ಪಿನ್, 5. ಶಿವಕುಮಾರ್ ಹಳಿಕೆ, ಯತೀಶ್ ಬೆಟ್ಟಗೆರೆ ಮಾಲೀಕತ್ವದ ಭೈರವೇಶ್ವರ ಬೆಟ್ಟಗೆರೆ, 6. ಡಿ.ಕೆ. ಲಕ್ಷ್ಮಣಗೌಡ ಮಾಲೀಕತ್ವದ ಫ್ರೆಂಡ್ಸ್ ಯೂನಿಯನ್ ಮೂಡಿಗೆರೆ, 7. ಸುದೀಪ್ ಬೆಟ್ಟಗೆರೆ ಮಾಲೀಕತ್ವದ ಪದ್ಮಾವತಮ್ಮ ಬೆಟ್ಟಗೆರೆ ಹಾಗೂ 8. ಹೆಚ್.ಎಸ್.ಮಂಜುನಾಥ ಬಿ.ಹೊಸಹಳ್ಳಿ ಮಾಲೀಕತ್ವದ ವೀರಭದ್ರೇಶ್ವರ ಬಿ.ಹೊಸಹಳ್ಳಿ ತಂಡಗಳು ಕಣದಲ್ಲಿದ್ದವು.

ಪಂದ್ಯಾವಳಿಗೆ ಅಂತಿಮ ಹಂತದಲ್ಲಿ ಮಳೆ ಅಡ್ಡಿಪಡಿಸಿದ ಕಾರಣ ಅರ್ಧಕ್ಕೆ ಸ್ಥಗಿತಗೊಳಿಸಲಾಯಿತು. ಪಂದ್ಯಾವಳಿಯ ಜಂಟಿ ವಿಜೇತರಾಗಿ ವೀರಭದ್ರೇಶ್ವರ ಬಿ.ಹೊಸಹಳ್ಳಿ, ರಾಮೇಶ್ವರ ಕುಂದೂರು, ಕೋಟೆವೂರು ಕಿಂಗ್ ಪಿನ್ ಮತ್ತು ಭೈರವೇಶ್ವರ ಬೆಟ್ಟಗೆರೆ ತಂಡಗಳನ್ನು ಘೋಷಿಸಲಾಯಿತು.

ಪಂದ್ಯಾವಳಿಯ ಉತ್ತಮ ಫ್ರಂಟ್ ಆಟಗಾರರಾಗಿ ಗುರುಮೂರ್ತಿ, ಉತ್ತಮ ಸೆಂಟರ್ ಆಟಗಾರರಾಗಿ ಸುದೀಪ್, ಉತ್ತಮ ಬ್ಯಾಕ್ ಆಟಗಾರರಾಗಿ ಸುರೇಶ್ ಮತ್ತು ಪಂದ್ಯಾವಳಿಯ ಶ್ರೇಷ್ಠ ಆಟಗಾರರಾಗಿ ಕೆ.ವಿ. ರಾಜಶೇಖರ್ ಅವರಿಗೆ ಪ್ರಶಸ್ತಿ ನೀಡಲಾಯಿತು.

ಪಂದ್ಯಾವಳಿಯಲ್ಲಿ ರಾಜ್ಯ ಬಾಲ್ ಬ್ಯಾಡ್ಮಿಂಟನ್ ಉಪಾಧ್ಯಕ್ಷರಾದ ಡಿ.ಕೆ. ಲಕ್ಷ್ಮಣಗೌಡ, ರಾಜ್ಯ ಆಟಗಾರರಾದ  ಕೆ.ಎಂ. ಚಂದ್ರೇಗೌಡ, ಮೊಹಮ್ಮದ್ ಇಲಿಯಾಸ್ ಮುಂತಾದವರು ಭಾಗವಹಿಸಿದ್ದರು. ಪಂದ್ಯಾವಳಿಯಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮೂಡಿಗೆರೆ ತಾ.ಪಂ. ಮಾಜಿ ಅಧ್ಯಕ್ಷ ಕೆ.ಸಿ.ರತನ್ ಅವರು ನೀಡಿದರು.

ಮಳೆಯ ನಡುವೆಯೂ ಪಂದ್ಯಾವಳಿಯನ್ನು ವೀಕ್ಷಿಸಲು ನೂರಾರು ಜನರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ