November 8, 2025

 

 

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO)  ಮತ್ತೊಂದು ಮೈಲಿಗಲ್ಲು ಸೃಷ್ಟಿಸಿದೆ. ಸ್ಪೇಡೆಕ್ಸ್ (SpaDEx)ಮಿಷನ್ ಭಾಗವಾಗಿ ಡಿಸೆಂಬರ್ 30ರಂದು ಭೂಕಕ್ಷೆಗೆ ಕಳಿಸಿದ್ದ ಎರಡು ಉಪಗ್ರಹಗಳನ್ನು ಯಶಸ್ವಿಯಾಗಿ ಅಂತರಿಕ್ಷದಲ್ಲಿ ಅನುಸಂಧಾನ ಮಾಡಿದೆ. ಈ ಮೂಲಕ ಡಾಕಿಂಗ್ (Docking) ಘನತೆ ಸಾಧಿಸಿದ ಜಗತ್ತಿನ ನಾಲ್ಕನೇ ದೇಶವಾಗಿ ಭಾರತ ಹೊರಹೊಮ್ಮಿದೆ. ಅಮೆರಿಕಾ, ಚೀನಾ, ರಷ್ಯಾ ಸಾಲಿಗೆ ಭಾರತವೂ ಸೇರಿಕೊಂಡಿದೆ.

ಡಿ.30 ರ ರಾತ್ರಿ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ‘ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್’ (SpaDEx) ಯೋಜನೆ ಭಾಗವಾಗಿ 2 ಉಪಗ್ರಹಗಳು ಉಡಾವಣೆಯಾಗಿತ್ತು.  ಎಸ್‌ಡಿಎಕ್ಸ್‌01 ಮತ್ತು ಎಸ್‌ಡಿಎಕ್ಸ್02 ಹೆಸರಿನ ಎರಡು ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಾಗಿತ್ತು.

ಭೂಮಿಯಿಂದ 475 ಕಿ.ಮೀ ದೂರದ ಕಕ್ಷೆಗೆ ಉಪಗ್ರಹಗಳನ್ನು ರಾಕೆಟ್‌ ಯಶಸ್ವಿಯಾಗಿ ಸೇರಿಸಿದ ಬಳಿಕ ಜನವರಿ ಮೊದಲ ವಾರದಲ್ಲಿ ಇಸ್ರೋ ಡಾಕಿಂಗ್‌ ಪ್ರಯೋಗ ನಡೆಸಬೇಕಿತ್ತು. ಆದರೆ ಕಾರಣಾಂತರಗಳಿಂದ ಈ ಪ್ರಯೋಗ ಮುಂದೂಡಿಕೆಯಾಗಿತ್ತು. ತನ್ನ ನಾಲ್ಕನೇ ಪ್ರಯತ್ನದಲ್ಲಿ ಇಸ್ರೋ ಡಾಕಿಂಗ್‌ ಪ್ರಯೋಗವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಮೊದಲಿಗೆ ಎರಡು ಉಪಗ್ರಹಗಳನ್ನು 15 ಮೀಟರ್ ಸನಿಹಕ್ಕೆ ತರಲಾಯಿತು. ನಂತರ ಅಂತರವನ್ನು 3 ಮೀಟರ್‌ಗೆ ಕುಗ್ಗಿಸಲಾಯಿತು. ಅಲ್ಲಿಯೇ ಡಾಕಿಂಗ್ ಪ್ರಕ್ರಿಯೆ ಮೂಲಕ ಎರಡನ್ನು ಯಶಸ್ವಿಯಾಗಿ ಅನುಸಂಧಾನ ಮಾಡಲಾಯಿತು.

ಡಾಕಿಂಗ್ ಪ್ರಕ್ರಿಯೆ ಹೇಗೆ ನಡೆಯಿತು?
20 ಕಿ.ಮೀ ಅಂತರದಲ್ಲಿ ಗಂಟೆಗೆ 28 ಸಾವಿರ ಕಿ.ಮೀ ವೇಗದಲ್ಲಿ 2 ಉಪಗ್ರಹಗಳು ಸುತ್ತುತ್ತಿದ್ದವು. ಮೊದಲಿಗೆ `ಟಾರ್ಗೆಟ್’ ವೇಗವನ್ನು ಕುಗ್ಗಿಸಲಾಯಿತು. ಹಂತಹಂತವಾಗಿ `ಚೇಸರ್’ ಸನಿಹಕ್ಕೆ ತರಲಾಯಿತು. ಮೊದಲಿಗೆ 1.5ಕಿ.ಮೀ., 500ಮೀ., 15 ಮೀ., 3 ಮೀ., ಹೀಗೆ ಹಂತ ಹಂತವಾಗಿ ಎರಡನ್ನು ಸನಿಹಕ್ಕೆ ತರಲಾಯಿತು. ಅಂತರ 3 ಮೀ. ಇರುವಾಗ ಡಾಕಿಂಗ್ ಪ್ರಕ್ರಿಯೆ ಆರಂಭವಾಯಿತು. ಒಂದರ ಯಾಂತ್ರಿಕ ಹಸ್ತಗಳು ಇನ್ನೊಂದನ್ನು ಹಿಡಿದವು. ಡಾಕಿಂಗ್ ಪ್ರಕಿಯೆ ಮುಗಿದ ಬೆನ್ನಲ್ಲೇ ಒಂದೇ ವ್ಯವಸ್ಥೆಯಾಗಿ 2 ಉಪಗ್ರಹಗಳು ಮಾರ್ಪಟ್ಟವು.

ಪ್ರಯೋಜನ ಏನು?
ಮಾನವಸಹಿತ ಅಂತರಿಕ್ಷಯಾನ, ಚಂದ್ರನ ಅಂಗಳಕ್ಕೆ ಮನುಷ್ಯರನ್ನು ಕಳುಹಿಸಿ, ವಾಪಸ್‌ ಕರೆತರಲು ಇಸ್ರೋ ಈಗಾಗಲೇ ಯೋಜನೆ ರೂಪಿಸಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಂತೆ ಇಸ್ರೋ ತನ್ನದೇ ಆದ ಸ್ವದೇಶಿ ‘ಭಾರತೀಯ ಅಂತರಿಕ್ಷ ನಿಲ್ದಾಣ’ ಸ್ಥಾಪಿಸಲು ಸಿದ್ಧತೆ ಆರಂಭಿಸಿದೆ.

ಆ ನಿಲ್ದಾಣಕ್ಕೆ ಗಗನಯಾತ್ರಿಗಳು, ಉಪಕರಣಗಳನ್ನು ಕಳುಹಿಸಲು ಡಾಕಿಂಗ್‌, ಅನ್‌ಡಾಕಿಂಗ್‌ ತಂತ್ರಜ್ಞಾನ ತಿಳಿದಿರಬೇಕು. ಡಾಕಿಂಗ್ ಪ್ರಕ್ರಿಯೆಯ ಯಶಸ್ಸು ಇದರ ಮೊದಲ ಹೆಜ್ಜೆ ಆಗಿದೆ. ಕಕ್ಷೆಯಲ್ಲಿ ಉಪಗ್ರಹ ರಿಪೇರಿ, ಇಂಧನ ಭರ್ತಿಗೂ ಇದು ಅನುಕೂಲಕರ.

ಈ ಐತಿಹಾಸಿಕ ಸಾಧನೆ ಮಾಡಿದ ಬೆನ್ನಲ್ಲೇ ಇಸ್ರೋ ವಿಜ್ಞಾನಿಗಳು ಸಂಭ್ರಮಿಸಿದರು. ಇದಕ್ಕೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಶ್ರಮಿಸಿದ ತಜ್ಞರಿಗೆ, ಕೋಟಿ ಕೋಟಿ ಭಾರತೀಯರಿಗೆ ಇಸ್ರೋ ಅಭಿನಂದನೆ ತಿಳಿಸಿತು. ರಾಷ್ಟ್ರಪತಿ, ಮೋದಿ ಸೇರಿ ಗಣ್ಯರು ಇಸ್ರೋ ಸಾಧನೆಯ ಬಗ್ಗೆ ಸಂಭ್ರಮ ವ್ಯಕ್ತಪಡಿಸಿದ್ದಾರೆ.

https://x.com/narendramodi/status/1879755467964256701?ref_src=twsrc%5Etfw%7Ctwcamp%5Etweetembed%7Ctwterm%5E1879755467964256701%7Ctwgr%5E2f786627a672df132686ebdaa3b3e21cf24a2cf6%7Ctwcon%5Es1_c10&ref_url=https%3A%2F%2Fpublictv.in%2Fisro-successfully-docks-spadex-satellites-in-space-creates-history-what-was-done-and-how-and-why-does-it-matter%2F

Leave a Reply

Your email address will not be published. Required fields are marked *

Related News

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ