IMG_20240620_040455_copy_349x157

 

 

ಭದ್ರಾ ಹಿನ್ನಿರಿನಲ್ಲಿ ತೆಪ್ಪದಲ್ಲಿ ತೆರಳುತ್ತಿದ್ದ ಮೂವರು ನೀರುಪಾಲಾದ ದುರಂತ ಘಟನೆ ಸಂಭವಿಸಿದೆ.

ಚಿಕ್ಕಮಗಳೂರು ಜಿಲ್ಲೆ
ನರಸಿಂಹರಾಜಪುರ ತಾಲೂಕಿನ ಬೈರಾಪುರ ಸಮೀಪ ಈ ಘಟನೆ ಸಂಭವಿಸಿದೆ.

ಭದ್ರ ಹಿನ್ನೀರಿನಲ್ಲಿ ತೆಪ್ಪದಲ್ಲಿ ಸಾಗುತ್ತಿದ್ದಾಗ ತೆಪ್ಪ ಮಗುಚಿ ಬಿದ್ದ ಪರಿಣಾಮ ಆದಿಲ್, ಸಾಜಿದ್, ಆಲ್ತಾಬ್ ಎಂಬ ಯುವಕರು ನೀರು ಪಾಲಾಗಿದ್ದಾರೆ.

ಮೃತರೆಲ್ಲರು ಶಿವಮೊಗ್ಗ ನಗರದವರು ಎಂದು ತಿಳಿದುಬಂದಿದೆ.

ನಾಲ್ವರು ಯುವಕರು ಶಿವಮೊಗ್ಗದಿಂದ ಭದ್ರಾ ಹಿನ್ನೀರಿನಲ್ಲಿ ವಿಹಾರಕ್ಕೆಂದು ಬಂದಿದ್ದರು, ಒಬ್ಬರು ಮೊಬೈಲ್ ನಲ್ಲಿ ಮಾತನಾಡುತ್ತಿದ್ದಾಗ ಉಳಿದ ಮೂವರು ತೆಪ್ಪದಲ್ಲಿ ಕುಳಿತು ತಾವೇ ಸ್ವತಃ ಹುಟ್ಟು ಹಾಕುತ್ತ ಚಾಲನೆಗೆ ಮುಂದಾಗಿದ್ದಾರೆ, ಚಾಲನೆ ಗೊತ್ತಿಲ್ಲದ ಕಾರಣ ಸ್ವಲ್ಪ ದೂರ ಹೋದಾಗ ತೆಪ್ಪ ನಿಯಂತ್ರಣ ತಪ್ಪಿ ಮಗುಚಿದ್ದು ಮೂವರು ಯುವಕರು ನೀರಿಗೆ ಬಿದ್ದಿದ್ದಾರೆ. ಈಜು ಬಾರದ ಕಾರಣ ದಡ ಸೇರಲಾಗದೇ ಮೂವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ

ಈ ಸಂದರ್ಭದಲ್ಲಿ ತೆಪ್ಪದ ಮಾಲೀಕನು ಸ್ಥಳದಲ್ಲಿ ಇರಲಿಲ್ಲವೆಂದು ತಿಳಿದುಬಂದಿದೆ

ನ.ರಾ.ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ