ಕರ್ನಾಟಕ ರಕ್ಷಣಾ ವೇದಿಕೆ ಮೂಡಿಗೆರೆ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ವಿನೋದ್ ಬಿದರಹಳ್ಳಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಇತ್ತೀಚೆಗೆ ಮೂಡಿಗೆರೆ ಲ್ಯಾಂಪ್ಸ್ ಸಭಾಂಗಣದಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ವಿನೋದ್ ನೂತನ ತಾಲ್ಲೂಕು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾದ ಕೆಂಪನಹಳ್ಳಿ ಅಶೋಕರಿಂದ ಕನ್ನಡ ಧ್ವಜ ಸ್ವೀಕರಿಸುವ ಮೂಲಕ ವಿನೋದ್ ಅವರು ತಾಲ್ಲೂಕು ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡರು.

ಸಮಾರಂಭದಲ್ಲಿ ಜಿಲ್ಲಾ ಸಂಘಟನ ಕಾರ್ಯದರ್ಶಿಗಳಾದ ರುದ್ರೇಶ್ ಸಿಂಹಾದ್ರಿ, ಮಧುಗೌಡ, ಸಾದಿಕ್ ಅಹಮದ್, ಯುವರಾಜ್, ಹೊರಟ್ಟಿರಘು, ಡಿ.ಕೆ.ಲಕ್ಷ್ಮಣಗೌಡ, ತಾಲೂಕು ಉಪಾಧ್ಯಕ್ಷರಾದ ಬಾಲು. ಬಣಕಲ್ ಹೋಬಳಿ ಅದ್ಯಕ್ಷರಾದ ಯಕೂಬ್ ಚಕ್ಕಮಕ್ಕಿ. ಬಾಳೂರು ಹೋಬಳಿ ಅಧ್ಯಕ್ಷರಾದ ಸುರೇಂದ್ರ. ಗೊಣಿಬೀಡು ಹೋಬಳಿ ಅಧ್ಯಕ್ಷರಾದ ಅನಿಲ್ ಇದ್ದರು.
ಈ ಸಂದರ್ಭದಲ್ಲಿ ಕ.ರ.ವೇ. ನೂರಾರು ಸದಸ್ಯರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ತಾಲೂಕು ಪ್ರಧಾನ ಕಾರ್ಯದರ್ಶಿ ಯುವರಾಜ್ ನಿರೂಪಿಸಿದರು.


