17mdg3A

 

 

20 ಕೋಟಿ ರೂ ವೆಚ್ಚದಲ್ಲಿ ಮೂಡಿಗೆರೆ ಪಟ್ಟಣದಿಂದ ಘಟ್ಟದಹಳ್ಳಿವರೆಗೆ ಹಾಗೂ ಚೀಕನಹಳ್ಳಿಯಿಂದ ಕನ್ನಾಪುರ ವರೆಗಿನ ರಾಜ್ಯ ಹೆದ್ದಾರಿ ರಸ್ತೆ ಅಗಲೀಕರಣ ಮತ್ತು ರಸ್ತೆ ದುರಸ್ತಿ ಕಾಮಗಾರಿಗೆ ಶಾಸಕಿ ನಯನಾ ಮೋಟಮ್ಮ ಹಾಗೂ ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಅವರು ಸೋಮವಾರ ಗುದ್ದಲಿಪೂಜೆ ನೆರವೇರಿಸಿದರು.

ಶಾಸಕಿ ನಯನಾ ಮೋಟಮ್ಮ ಮಾತನಾಡಿ, ಈಗಾಗಲೇ 20ಕೋಟಿ ವೆಚ್ಚದಲ್ಲಿ ತುಂಬಾ ಗುಂಡಿಗಳಿಂದ ಕೂಡಿರುವ 10 ಕಿ,ಮೀ ರಸ್ತೆ ಡಾಂಬರೀಕರಣ ಹಾಗೂ ರಸ್ತೆ ಅಗಲೀಕರಣಗೊಳಿಸುವ ಕಾಮಗಾರಿ ನಡೆಯುತ್ತದೆ. ಇನ್ನೂ ಬಾಕಿ ಇರುವ 10 ಕಿ,ಮೀ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಳಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಣ ಬಿಡುಗೆಡೆಯಾದ ಬಳಿಕ ಬಾಕಿ ಉಳಿದ ಕಾಮಗಾರಿ ಮುಂದುವರೆಯಲಿದೆ. ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳಲು ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಂದಿಪುರ ಗ್ರಾ.ಪಂ. ಅಧ್ಯಕ್ಷ ಪ್ರಸನ್ನ, ಮಾಕೋನಹಳ್ಳಿ ಗ್ರಾ.ಪಂ. ಉಪಾಧ್ಯಕ್ಷೆ ಲೋಲಾಕ್ಷಿ ಸುಂದ್ರೇಶ್, ಸದಸ್ಯ ಪ್ರಸನ್ನ, ಪ.ಪಂ. ನಾಮ ನಿರ್ದೇಶನ ಸದಸ್ಯ ಸಿ.ಬಿ.ಶಂಕರ್, ಮಾಕೋನಹಳ್ಳಿ ಸಹಕಾರ ಸಂಘದ ಅಧ್ಯಕ್ಷ, ಕೆ.ಡಿ.ಪಿ. ಸದಸ್ಯ ಎಂ.ಎನ್.ಅಶ್ವತ್ ಮಾಕೋನಹಳ್ಳಿ, ಶ್ರೀನಿಧಿ ಮಾಕೋನಹಳ್ಳಿ, ರಘುನಾಥ್ ನಂದಿಪುರ, ಕುನ್ನಳ್ಳಿ ರವಿ, ಸುರೇಂದ್ರ ಉಗ್ಗೇಹಳ್ಳಿ, ಪಂಚಾಕ್ಷರಿ, ಸಚಿನ್ ಕನ್ನಾಪುರ, ಪಿಡಬ್ಲೂಡಿ ಎಇಇ ಚನ್ನಕೇಶವ ಮತ್ತಿತರರಿದ್ದರು.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ